Updated at Thu,25th May, 2017 3:04AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಝಾನ್‌ ವಿವಾದ;ಸೋನು ನಿಗಮ್‌ ಬೆಂಬಲಿಸಿದ ಯುವಕನಿಗೆ ಇರಿತ!

ಉಜ್ಜಯಿನಿ (ಮಧ್ಯಪ್ರದೇಶ): ಧ್ವನಿವರ್ಧಕದ ಮೂಲಕ ಮಾಡಲಾಗುವ ಅಝಾನ್‌ನಿಂದಾಗುವ ತೊಂದರೆಯನ್ನು ಬಹಿರಂಗ ಪಡಿಸಿ ಪ್ರಖ್ಯಾತ ಗಾಯಕ ಸೋನು ನಿಗಮ್‌ ಮಾಡಿರುವ ಟ್ವೀಟ್‌ಗೆ ಬೆಂಬಲಿಸಿ  ಫೇಸ್‌ಬುಕ್‌ ಪೋಸ್ಟ್‌ ಮಾಡಿದ ಕಾರಣಕ್ಕಾಗಿ  ಯುವಕನೊಬ್ಬನಿಗೆ ಇರಿತ ನಡೆಸಿರುವ ಕಳವಳಕಾರಿ ಘಟನೆ ಫ್ರಿಗಂಜ್‌ ಪ್ರದೇಶದಲ್ಲಿ  ನಡೆದಿದೆ. 

ಸೋನು ನಿಗಮ್‌ ಟ್ವೀಟ್‌ ವಿಜಾರದಲ್ಲಿ ಎರಡು ಕೋಮುಗಳ ಗುಂಪಿನ ನಡುವೆ ತೀವ್ರ ಚರ್ಚೆ ನಡೆದಿದ್ದು, ಈ ವೇಳೆ ಫೈಜಾನ್‌ ಖಾನ್‌ ಎಂಬಾತ ಇತರ 7 ರಿಂದ 8 ಮಂದಿಯೊಂದಿಗೆ ಆಗಮಿಸಿ ಶಿವಂ ಎಂಬಾತನನ್ನು ಇರಿದು ಪರಾರಿಯಾಗಿದ್ದಾರೆ. 

ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 


More News of your Interest

Trending videos

Back to Top