ಶೇ.90ರಷ್ಟು ಪಿಎಫ್ ಹಣ ವಿತ್ಡ್ರಾಗೆ ಅವಕಾಶ
Team Udayavani, Apr 25, 2017, 3:45 AM IST
ನವದೆಹಲಿ: ಸ್ವಂತ ಮನೆಯನ್ನು ಹೊಂದುವ ಕನಸು ಕಾಣುತ್ತಿರುವ ಭವಿಷ್ಯ ನಿಧಿ ಚಂದಾದಾರರಿಗೆ ಸಿಹಿಸುದ್ದಿ. ಮನೆ ಖರೀದಿಸಲು ಇಚ್ಛಿಸುವ ಚಂದಾದಾರರು ತಮ್ಮ ಇಪಿಎಫ್(ನೌಕರರ ಭವಿಷ್ಯ ನಿಧಿ) ಖಾತೆಯಿಂದಲೇ ಡೌನ್ ಪೇಮೆಂಟ್ ಮತ್ತು ಇಎಂಐ(ಸಾಲದ ಕಂತು) ಪಾವತಿಸ ಬಹುದು. ಅಷ್ಟೇ ಅಲ್ಲ, ತಮ್ಮ ಪಿಎಫ್ ಖಾತೆಯಿಂದ ಶೇ.90ರಷ್ಟು ಮೊತ್ತವನ್ನು ವಿತ್ಡ್ರಾ ಮಾಡಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಹೇಳಿದೆ.
ಇದರಿಂದ 4 ಕೋಟಿ ಖಾತೆದಾರರಿಗೆ ಅನುಕೂಲವಾ ಗಲಿದೆ. ಕನಿಷ್ಠ 10 ಮಂದಿ ಸದಸ್ಯರನ್ನೊಳಗೊಂಡ ಸಹಕಾರಿ ಅಥವಾ ಹೌಸಿಂಗ್ ಸೊಸೈಟಿಯ ಸದಸ್ಯರಾಗಿರುವ ಇಪಿಎಫ್ ಚಂದಾದಾರರು, ಹೊಸ ಮನೆ, ಫ್ಲ್ಯಾಟ್ ಖರೀದಿಗೆ, ಮನೆ ನಿರ್ಮಾಣಕ್ಕೆ, ನಿವೇಶನ ಖರೀದಿಗೆ ತಮ್ಮ ಪಿಎಫ್ ಮೊತ್ತದ ಶೇ.90ರಷ್ಟನ್ನು ವಿತ್ಡ್ರಾ ಮಾಡಿಕೊಳ್ಳಬಹುದು. ಆದರೆ, ಈ ಯೋಜನೆಯ ಲಾಭ ಪಡೆಯ ಬಯಸುವವರು ಕನಿಷ್ಠ 3 ವರ್ಷ ಪಿಎಫ್ ನಿಧಿಯಲ್ಲಿ ಹಣ ಪಾವತಿಸಿದವರಾಗಿರಬೇಕು. ಜತೆಗೆ, ತಮ್ಮ ಹಾಗೂ ಪತ್ನಿಯ ಖಾತೆಯಲ್ಲಿ ಕನಿಷ್ಠ 20 ಸಾವಿರ ರೂ.ಗಳಾದರೂ ಇರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್