ಹಿಂದೂ ಸಂಘಟನೆಗಳ ಮೇಲೆ ದಾಳಿ: ಖೈದಾ ಧಮ್ಕಿ
Team Udayavani, Jun 28, 2017, 3:45 AM IST
ಕಾಶ್ಮೀರ: “ಮುಸ್ಲಿಮರನ್ನು ಹತ್ಯೆ ಮಾಡುತ್ತಿರುವ, ಮಸೀದಿಗಳ ಮೇಲೆ ದಾಳಿ ಮಾಡುತ್ತಿರುವ ಹಿಂದೂ “ಪ್ರತ್ಯೇಕತಾವಾದಿ’ ಸಂಘಟನೆಗಳ ಮೇಲೆ ನಾವು ದಾಳಿ ಮಾಡಬೇಕು’ ಹೀಗೆಂದು ಕುಖ್ಯಾತ ಉಗ್ರ ಸಂಘಟನೆ ಅಲ್ಖೈದಾ ತನ್ನ ಉಗ್ರವಾದಿಗಳಿಗೆ ಕರೆ ನೀಡಿದೆ.
ಜೊತೆಗೆ “ಕಾಶ್ಮೀರದಲ್ಲಿನ ಸಹೋದರರ ಕೈಗಳನ್ನು ರಕ್ತಸಿಕ್ತ ಮಾಡಿದ ಭಾರತದ ಸೇನೆ, ಪೊಲೀಸ್ ಮತ್ತು ಗೂಢಚರ ಸಂಸ್ಥೆಗಳ ಉನ್ನತ ನಾಯಕತ್ವವನ್ನು ಗುರಿಯಾಗಿಸಿ ದಾಳಿ ಎಸಗಬೇಕು’ ಎಂದೂ ಹೇಳಿದೆ. ಭಾರತೀಯ ಉಪಖಂಡ ದಲ್ಲಿನ ಭಯೋತ್ಪಾದಕರಿಗೆ ನೂತನ ನೀತಿ ಸಂಹಿತೆ ಪಟ್ಟಿಯನ್ನು ಅದು ಬಿಡುಗಡೆ ಮಾಡಿದ್ದು, ಇದರಲ್ಲಿ ಹೀಗೆ ಹೇಳಲಾಗಿದೆ. ಇಸ್ರೇಲ್, ಅಮೆರಿಕದ ಬಳಿಕ ಭಾರತ ನಮ್ಮ ಗುರಿ. ಮುಸ್ಲಿಮರನ್ನು ದಮನಗೈಯುತ್ತಿರುವ ಇತರ ಧರ್ಮದ ಶಕ್ತಿಗಳ ವಿರುದ್ಧ ನಾವು ದಾಳಿ ಎಸಗುತ್ತೇವೆ. ಆದರೆ ಸಾಮಾನ್ಯ ಹಿಂದೂ, ಬೌದ್ಧರ ಮೇಲೆ ನಾವು ದಾಳಿಮಾಡು ವುದಿಲ್ಲ ಎಂದಿದೆ. ಸಹಸ್ರಾರು ವರ್ಷಗಳ ಕಾಲ ಭಾರತ ಇಸ್ಲಾಂ ಆಡಳಿತದಲ್ಲಿದ್ದು, ಅದನ್ನೀಗ ಮತ್ತೆ ಇಸ್ಲಾಂನಡಿ, ಏಕ ದೇವೋಪಾಸನೆ ಅಡಿ ತರಬೇಕಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು