ಜೂಜಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿ: ಗೆದ್ದ ಕಾಮಾಂಧರಿಂದ ರೇಪ್

Team Udayavani, Jul 12, 2017, 7:55 PM IST

Rape-by-foce-600.jpg

ಇಂದೋರ್‌ : ಮಹಾಭಾರತದಲ್ಲಿ ಪಂಚ ಪಾಂಡವರು ದುರ್ಯೋಧನನೊಂದಿಗಿನ ಪಗಡೆಯಾಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಬಳಿಕ ಅಂತಿಮವಾಗಿ ತಮ್ಮ ಪತ್ನಿ ದ್ರೌಪದಿಯನ್ನೂ ಪಣಕ್ಕಿಟ್ಟು ಆಕೆಯನ್ನೂ ಕಳೆದುಕೊಂಡದ್ದು ಮತ್ತು ಆ ಪರಿಣಾಮವಾಗಿ ದ್ರೌಪದಿಯನ್ನು ತುಂಬಿದ ಸಭೆಗೆ ದುಃಶಾಸನ ಎಳೆತಂದು ಆಕೆಯ ವಸ್ತ್ರಾಪಹರಣ ಮಾಡಲು ಯತ್ನಿಸಿದ್ದು, ಶ್ರೀಕೃಷ್ಣ ಪರಮಾತ್ಮ ಆಕೆಗೆ ಅಕ್ಷಯ ವಸ್ತ್ರವನ್ನು ಕರುಣಿಸಿ ಆಕೆಯ ಮಾನ ಕಾಪಾಡಿದ್ದು ಎಲ್ಲರಿಗೂ ತಿಳಿದಿರುವ ಪೌರಾಣಿಕ ಪ್ರಸಂಗ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂತಹ ಒಂದು ಪೌರಾಣಿಕ ಪ್ರಸಂಗ ನಡೆದಿದೆ. ಆದರೆ ಮಹಿಳೆಯ ರಕ್ಷಣೆಗೆ ಮಾತ್ರ ಯಾರೂ ಬರಲಿಲ್ಲ. 

ಇಂದೋರ್‌ನಲ್ಲಿ ಪತಿ ಮಹಾಶಯನೊಬ್ಬ ಇಬ್ಬರು ಪುರುಷರೊಂದಿಗಿನ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಆಕೆಯನ್ನು ಕಳೆದುಕೊಂಡ ಬಳಿಕ ಆ ಪುರುಷರಿಬ್ಬರು ಆ ಪತಿ ಮಹಾಶಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ತಡವಾಗಿ ವರದಿಯಾಗಿದೆ. 

“ನಿನ್ನ ಪತಿಯೊಂದಿಗಿನ ಜೂಜಾಟದಲ್ಲಿ ನಾವು ನಿನ್ನನ್ನು ಗೆದ್ದಿದ್ದೇವೆ; ಹಾಗಾಗಿ ನಾವು ನಿನ್ನನ್ನು ಲೈಂಗಿಕವಾಗಿ ಅನುಭವಿಸುವ ಹಕ್ಕನ್ನು ಹೊಂದಿದ್ದೇವೆ’ ಎಂದು ಹೇಳುತ್ತಲೇ ಜೂಜು ಗೆದ್ದ ಪುರುಷರಿಬ್ಬರು ಆ ಅಮಾಯಕ ಮಹಿಳೆಯನ್ನು ರೇಪ್‌ ಮಾಡಿದರು. 

ಇಬ್ಬರು ಕಾಮಾಂಧ ಪುರುಷರಿಂದ ಹೀಗೆ ಅತ್ಯಾಚಾರಕ್ಕೆ ಗುರಿಯಾದ ಅಮಾಯಕ ಮಹಿಳೆಯು ನಿನ್ನೆ ಮಂಗಳವಾರ ತನ್ನ ಈ ಕರುಣಾಜನಕ ಸತ್ಯ ಕಥೆಯನ್ನು ಪೊಲೀಸರ ಸಾಪ್ತಾಹಿಕ ಸಾರ್ವಜನಿಕ ಅಹವಾಲು ಆಲಿಸುವ ಸಭೆಯಲ್ಲಿ  ದುಃಖತಪ್ತಳಾಗಿ ಹೇಳಿದಳು. 

“ನನ್ನ ಮೇಲಿನ ಈ ಅತ್ಯಾಚಾರದ ಘಟನೆಯ ಬಳಿಕ ನಾನು ಪತಿಯಿಂದ ದೂರವಾದೆ; ಆದರೂ ಆ ಇಬ್ಬರು ಕಾಮಾಂಧ ಪುರುಷರು ಮತ್ತು ನನ್ನ ಪತಿ ಸೇರಿಕೊಂಡು ನನಗೆ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ; ನನ್ನನ್ನು ಕಾಪಾಡಬೇಕು’ ಎಂದು ಆ ಮಹಿಳೆ ಸಭೆಯಲ್ಲಿ ಅಲವತ್ತುಕೊಂಡಳು. 

ಈ ಅಮಾನುಷ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡು ಮಹಿಳೆಯ ದೂರಿನ ಪ್ರಕಾರ ಸಂಬಂಧಿತ ಎಲ್ಲ  ಆರೋಪಿ ವ್ಯಕ್ತಿಗಳನ್ನು ಠಾಣೆಗೆ ಕರೆಸಿಕೊಂಡು ಅವರ ಹೇಳಿಕೆಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಇಂದೋರ್‌ನ ಮಹಿಳಾ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಜ್ಯೋತಿ ಶರ್ಮಾ ಹೇಳಿದ್ದಾರೆ. 

ಮಹಿಳೆಯ ಆರೋಪಗಳನ್ನು ಸಾಕ್ಷ್ಯಾಧಾರ ಸಹಿತವಾಗಿ ಇನ್ನಷ್ಟೇ ದೃಢೀಕರಿಸಿಕೊಳ್ಳಬೇಕಾಗಿರುವು ದರಿಂದ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ; ಯಾರನ್ನೂ ಬಂಧಿಸಿಲ್ಲ ಎಂದವರು ಹೇಳಿದ್ದಾರೆ. 

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.