ದರೋಡೆಕೋರರಿಂದ ಎಂಟೇ ನಿಮಿಷದಲ್ಲಿ ಎಟಿಎಂ ಒಡೆದು 11 ಲಕ್ಷ ಲೂಟಿ
Team Udayavani, Jul 20, 2017, 7:10 PM IST
ಕಪುರ್ತಲಾ : ಇಲ್ಲಿಂದ ಸುಮಾರು 30 ಕಿ.ಮೀ. ದೂರದ ಸುಲ್ತಾನ್ಪುರ ಲೋಧಿ ಯಲ್ಲಿ ಇಬ್ಬರು ದರೋಡೆಕೋರರು ಕೇವಲ ಎಂಟು ನಿಮಿಷಗಳಲ್ಲಿ ಎಟಿಎಂ ಒಂದನ್ನು ಒಡೆದು 11.43 ಲಕ್ಷ ರೂ. ನಗದಿನೊಂದಿಗೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ದರೋಡೆಕೋರರು ಬೆಳಗ್ಗೆ 5.43ಕ್ಕೆ ಎಟಿಎಂ ಪ್ರವೇಶಿಸಿ 5.51ಕ್ಕೆ 11.43 ಲಕ್ಷ ರೂ. ನಗದು ಸಹಿತ ಪರಾರಿಯಾದರು. ಅವರು ಕೇವಲ ಎಂಟು ನಿಮಿಷಗಳಲ್ಲಿ ತಮ್ಮ ಕೆಲಸವನ್ನು ಮುಗಿಸಿದರು ಎಂದು ಡಿವೈಎಸ್ಪಿ ವರ್ಯಾಮ್ ಸಿಂಗ್ ಹೇಳಿದರು.
ಎಟಿಎಂನ ಗಾರ್ಡ್ ಬೆಳಗ್ಗೆ 5.30ಕ್ಕೆ ಡ್ನೂಟಿ ಮುಗಿಸಿ ಹೋಗಿದ್ದ ಸ್ವಲ್ಪ ಹೊತ್ತಿನ ಬಳಿಕ ಎಟಿಎಂ ಪ್ರವೇಶಿಸಿದ ಕಳ್ಳರು ನೀಟಾಗಿ 11.43 ಲಕ್ಷ ರೂ.ಗಳನ್ನು ಕದ್ದೊಯ್ದರು ಎಂದು ಸಿಂಗ್ ತಿಳಿಸಿದರು.
ತಮ್ಮ ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದ ದರೋಡೆಕೋರರು ಎಟಿಎಂ ಒಳಗಿನ ಸಿಸಿಟಿವಿಗೆ ಕಪ್ಪು ಪೇಂಟ್ ಬಳಿದರು. ಹಾಗಿದ್ದರೂ ಸಿಸಿಟಿವಿ ಯ ಒಂದು ಕ್ಯಾಮೆರಾ ದೃಶ್ಯವನ್ನು ಚಿತ್ರೀಕರಿಸಿಕೊಂಡಿತ್ತು. ಆದರೆ ಅದು ಅಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾರಿಹೋಕರೊಬ್ಬರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಕಳ್ಳರು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದರು.
ಪೊಲೀಸರೀಗ ದರೋಡೆಕೋರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ