24 ಐಎಎಸ್ ಸೇರಿ 357 ಅದಕ್ಷ ಅಧಿಕಾರಿಗಳಿಗೆ ಶಿಕ್ಷೆ
Team Udayavani, Jul 26, 2017, 7:20 AM IST
ನವದೆಹಲಿ: ‘ಉತ್ತಮವಾಗಿ ಕೆಲಸ ಮಾಡಿ; ಇಲ್ಲದಿದ್ದರೆ ಮನೆಗೆ ಹೋಗಿ’ ಎನ್ನುವುದು ಮೋದಿ ನೇತೃತ್ವದ ಸರ್ಕಾರದ ಪ್ರಧಾನ ಮಂತ್ರ. ಅದರಂತೆ, 24 ಐಎಎಸ್ ಅಧಿಕಾರಿಗಳು ಸೇರಿ 357 ಅಧಿಕಾರಿಗಳ ವಿರುದ್ಧ ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಅವಧಿಪೂರ್ವ ನಿವೃತ್ತಿ, ಭತ್ಯೆ, ಪಿಂಚಣಿ ತಡೆ ಮೊದಲಾದ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.