ಜಮ್ಮು-ಕಾಶ್ಮೀರ: ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ವಜಾ
Team Udayavani, Aug 23, 2017, 6:08 PM IST
ಜಮ್ಮು : ಇಲ್ಲಿನ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಅನಿತಾ ಸೂದನ್ ಅವರನ್ನು ಜಮ್ಮು ಕಾಶ್ಮೀರ ಸರಕಾರ ವಜಾ ಮಾಡಿದೆ.
ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲೆ ವಿದ್ಯಾರ್ಥಿನಿಯರ ಮೇಲೆ ವಸ್ತ್ರ ಸಂಹಿತೆಯನ್ನು ಹೇರುತ್ತಿದ್ದಾರೆ ಮತ್ತು ಶಿಸ್ತಿನ ವಿಚಾರದಲ್ಲಿ ಅನಗತ್ಯ ಅಪ್ಪಣೆಗಳನ್ನು ಕೊಟ್ಟು ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜಿನ ವಿದ್ಯಾರ್ಥಿನಿಯರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
ವಿದ್ಯಾರ್ಥಿನಿಯರ ಆರೋಪಗಳ ಬಗ್ಗೆ ಸರಕಾರ ಕಾಲೇಜಿನ ಪ್ರಾಂಶುಪಾಲೆ ವಿರುದ್ಧ ತನಿಖೆಗೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.
ವಜಾಗೊಂಡಿರುವ ಪ್ರಾಂಶುಪಾಲೆ ಅನಿತಾ ಸೂದನ್ ಅವರ ಸ್ಥಾನಕ್ಕೆ ಪ್ರಭಾರ ಪ್ರಾಂಶುಪಾಲೆಯಾಗಿ ಗೀತಾಂಜಲಿ ಅಂಧೋತ್ರಾ ಅವರನ್ನು ನೇಮಿಸಿರುವುದಾಗಿ ಗೊತ್ತಾಗಿದೆ.