ಹನಿಪ್ರೀತ್ ಮೇಲೇ ರೇಪ್?
Team Udayavani, Sep 26, 2017, 7:05 AM IST
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಸ್ವಘೋಷಿತ ದೇವಮಾನ ಗುರ್ಮೀತ್ ರಾಂ ರಹೀಂ ಸಿಂಗ್ ತನ್ನ ದತ್ತುಪುತ್ರಿ ಎಂದು ಹೇಳಿಕೊಂಡು ಬಂದಿದ್ದ ಹನಿಪ್ರೀತ್ ಇನ್ಸಾನ್ ಮೇಲೆಯೇ ಅತ್ಯಾಚಾರ ಎಸಗಿದ್ದನೇ?
ಇಂತಹುದೊಂದು ಮಾಹಿತಿಯನ್ನು ಡೇರಾ ಸಚ್ಚಾ ಸೌದಾದ ಮಾಜಿ ಬೆಂಬಲಿಗರು ನೀಡಿದ್ದಾರೆ. ಗುರ್ಮೀತ್ ತನ್ನ ಗುಫಾದೊಳಗೆ ಕರೆಸಿಕೊಂಡು ಹನಿಪ್ರೀತ್ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ ಕಣ್ಣೀರು ಹಾಕುತ್ತಾ ಒಳಗಿಂದ ಹೊರಬಂದಿದ್ದಳು ಎಂದು ಆಗ ಗುಫಾವನ್ನು ಕಾಯುತ್ತಿದ್ದ ಗುರ್ಮೀತ್ನ ಮಾಜಿ ಕಾರು ಚಾಲಕ ಖಟ್ಟಾ ಸಿಂಗ್ ಮತ್ತು ಆತನ ಪುತ್ರ ಗುರುದಾಸ್ ಸಿಂಗ್ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಷ್ಟೇ ಅಲ್ಲ, ಅತ್ಯಾಚಾರಕ್ಕೆ ಒಳಗಾದ ಮೇಲೆ ಹನಿಪ್ರೀತ್ ಆರಂಭದಲ್ಲಿ ಕೋಪಗೊಂಡಿದ್ದರೂ, ನಂತರ ಗುರ್ಮೀತ್ನನ್ನು ಬ್ಲ್ಯಾಕ್ವೆುàಲ್ ಮಾಡಲು ಶುರುಮಾಡಿದಳು. ತನಗೇನು ಬೇಕೋ ಅದೆಲ್ಲವನ್ನೂ ಆತನಿಂದ ಪಡೆದುಕೊಂಡಳು. ಕೊನೆಗೆ, ಗುರ್ಮೀತ್ ಮತ್ತು ಹನಿಪ್ರೀತ್ ಇಬ್ಬರೂ ರಹಸ್ಯವಾಗಿ ಮಗುವೊಂದನ್ನು ಪಡೆಯಲು ಚಿಂತನೆ ನಡೆಸಿದ್ದರು. ಅದೇ ಮಗುವನ್ನು ನಂತರ ಡೇರಾದ ಉತ್ತರಾಧಿಕಾರಿಯಾಗಿ ಘೋಷಿಸುವುದು ಅವರ ಉದ್ದೇಶವಾಗಿತ್ತು ಎಂದೂ ಕಾರು ಚಾಲಕ ಬಾಯಿ ಬಿಟ್ಟಿದ್ದಾನೆ.
ಇದೇ ವೇಳೆ, ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಗುರ್ಮೀತ್ ಸಿಂಗ್ ಸೋಮವಾರ ಪಂಜಾಬ್-ಹರ್ಯಾಣ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ