ಜಿಎಸ್ಬಿ ಸೇವಾ ಮಂಡಲ ಮುಂಬಯಿ: 5ನೇ ಉಚಿತ ಕೋವಿಡ್ ಲಸಿಕೆ ಶಿಬಿರ
Team Udayavani, Aug 20, 2021, 2:02 PM IST
ಮಾಹೀಮ್: ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರ ಶುಭಾಶೀರ್ವಾದ ಗಳೊಂದಿಗೆ ಜಿಎಸ್ಬಿ ಸೇವಾ ಮಂಡಲ ಮುಂಬಯಿ ಮತ್ತು ವಾಲ್ಕೇಶ್ವರ ಶ್ರೀ ಕಾಶಿ ಮಠ ಹಾಗೂ ಮುಂಬಯಿ ಜಿಎಸ್ಬಿ ಟೆಂಪಲ್ ಟ್ರಸ್ಟ್ನವರ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ ಆ. 16ರಂದು ಆಯೋಜಿಸಲಾಯಿತು.
ಮಾಹೀಮ್ನ ತೆಂಡುಲ್ಕರ್ ಸಭಾ ಗೃಹದಲ್ಲಿ ನಡೆದ ಶಿಬಿರದಲ್ಲಿ 733 ಮಂದಿಗೆ ಲಸಿಕೆ ನೀಡಲಾಯಿತು. ಜಿಎಸ್ಬಿ ಸೇವಾ ಮಂಡಳಿಯು ಮುಂಬಯಿಯಲ್ಲಿ ಆಯೋ ಜಿಸಿದ 5ನೇ ಲಸಿಕೆ ಶಿಬಿರ ಇದಾಗಿತ್ತು.
ಜಿಎಸ್ಬಿ ಸೇವಾ ಮಂಡಲ ಮುಂಬಯಿ ಮತ್ತು ವಾಲ್ಕೇಶ್ವರ ಶ್ರೀ ಕಾಶಿ ಮಠ ಹಾಗೂ ಮುಂಬಯಿ ಜಿಎಸ್ಬಿ ಟೆಂಪಲ್ ಟ್ರಸ್ಟ್ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಗಳ ಸದಸ್ಯರು, ಯುವ ವಿಭಾಗದವರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಿದರು.
ಇದನ್ನೂ ಓದಿ:ಜೀ ವಾಹಿನಿಗೆ ‘ಕೆಜಿಎಫ್-2’ ಸ್ಯಾಟಲೈಟ್ ರೈಟ್ಸ್ : ಮಾರಾಟವಾಗಿದ್ದು ಎಷ್ಟು ಕೋಟಿಗೆ ?
ಸಂಸ್ಥೆಯು ಕೋವಿಡ್ ಪ್ರಾರಂಭದ ದಿನಗಳಿಂದಲೂ ಸಮಾಜ ಬಾಂಧವರು ಮಾತ್ರವಲ್ಲದೆ ಆರ್ಥಿಕವಾಗಿ ಹಿಂದುಳಿ ದವರಿಗೂ ನಿರಂತರವಾಗಿ ಆಹಾರದ ಕಿಟ್ಗಳನ್ನು ವಿತರಿಸುತ್ತಿರುವುದಲ್ಲದೆ, ಆರ್ಥಿಕ, ವೈದ್ಯಕೀಯ, ಶೈಕ್ಷಣಿಕ ನೆರವು ನೀಡಿ ಮಾನವೀಯತೆ ಮೆರೆಯುತ್ತಿದೆ.
ಸಂಸ್ಥೆಯ ಪದಾಧಿಕಾರಿಗಳ ಪ್ರಾಮಾಣಿಕ, ನಿಸ್ವಾರ್ಥ ಪರಿಶ್ರಮ, ಸ್ವಯಂಸೇವಕರ ಸಹಕಾರ ದೊಂದಿಗೆ ಸಮಾಜಪರ ಕಾರ್ಯಕ್ರಮಗಳೊಂದಿಗೆ ಉಚಿತ ವೈದ್ಯಕೀಯ, ರಕ್ತದಾನ ಶಿಬಿರ, ಉಚಿತ ಕೋವಿಡ್ ಲಸಿಕೆ ಶಿಬಿರ ಇನ್ನಿತರ ಕಾರ್ಯಕ್ರಮಗಳು ಮುಂಬಯಿ ಸಹಿತ ಇನ್ನಿತರ ಉಪನಗರಗಳಲ್ಲಿ ನಿರಂತ ರವಾಗಿ ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ