Updated at Wed,24th May, 2017 11:48AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡೊಂಬಿವಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲ ಸಾಮೂಹಿಕ ಶನಿಶಾಂತಿ 

ಡೊಂಬಿವಲಿ: ರಾಜಾಪುರ ಸಾರಸ್ವತ ಸಮಾಜ ಡೊಂಬಿವಲಿ ಇದರ ಶ್ರೀ ವರದ ಸಿದ್ದಿವಿನಾಯಕ ಸೇವಾ ಮಂಡಲ ಡೊಂಬಿವಲಿ ಇದರ ವತಿಯಿಂದ ಶ್ರೀ ಶನಿದೇವರ ಧನು ರಾಶಿಯ ಪ್ರವೇಶದ ಸುಸಂದರ್ಭದಲ್ಲಿ ಶ್ರೀ ಮಹಾಗಣಪತಿ ಮಂದಿರದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ ಹವನ ವನ್ನು ಇತ್ತೀಚೆಗೆ ಹಮ್ಮಿ ಕೊಳ್ಳಲಾಗಿತ್ತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಪ್ರಾರ್ಥನೆ, ಮಧ್ಯಾಹ್ನ 12.30ರಿಂದ ಹವನ ಪೂರ್ಣಾಹುತಿ ನಡೆಯಿತು. ದೇವಳದ ಪ್ರಧಾನ ಅರ್ಚಕ ರಾಜಶೇಖರ ಭಟ್‌ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಶ್ರೀ ಶನಿಜಪ, ಪೂಜೆ, ಶನಿಶಾಂತಿ ಹವನ ಮತ್ತು ಶ್ರೀ ಮಹಾಗಣಪತಿ ದೇವರ ಮಹಾ ಪೂಜೆಯನ್ನು ಆಯೋಜಿಸಲಾಗಿತ್ತು.
ಸ್ವಸಮಾಜದ ಮತ್ತು ತುಳು-ಕನ್ನಡದ ಸುಮಾರು 200ಕ್ಕೂ ಅಧಿಕ ಭಕ್ತಾದಿಗಳು ಶನಿಶಾಂತಿ ಹವನದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ದೇವರ ಪೂಜಾ ಪ್ರಸಾದವನ್ನು ಸ್ವೀಕರಿಸಿದರು. ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳದ ವತಿಯಿಂದ ಮಹಾಪ್ರಸಾದ ರೂಪದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ 350ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.


More News of your Interest

Trending videos

Back to Top