Updated at Wed,26th Jul, 2017 9:42AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಾತ್ರಜ್‌ ಶ್ರೀ ಅಯ್ಯಪ್ಪ ಮಂದಿರ ಗಣಪತಿ ದೇವರಿಗೆ ಬೆಳ್ಳಿಯ ಮುಕುಟ

ಪುಣೆ: ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿರುವ ಸಹ ಪರಿವಾರ ಶ್ರೀ ಗಣಪತಿ ದೇವರಿಗೆ ಸುಮಾರು ಒಂದು ಲಕ್ಷಕಿಂತಲೂ ಅಧಿಕ ಬೆಲೆಬಾಳುವ  ಬೆಳ್ಳಿಯ ಮುಕುಟವನ್ನು ಪುಣೆಯ ಆಶಾ ಗ್ರೂಪ್‌ ಆಫ್‌ ಹೊಟೇಲ್ಸ… ನವರು ಕುಂಭ ಸಂಕ್ರಮಣದ ಶುಭ ದಿನವಾದ ಫೆ. 12ರಂದು ಸಮರ್ಪಿಸಿದರು.

ಸಂಕ್ರಮಣದಂದು  ಅಯ್ಯಪ್ಪ ಮಂದಿರದಲ್ಲಿ  ಪ್ರಧಾನ  ಅರ್ಚಕ ರಾದ  ಹರೀಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಮಹಾಮಂಗಳಾರತಿ ನಡೆಯಿತು.  ಈ ಸಂದರ್ಭದಲ್ಲಿ ನೂರಾರು ಜನರು  ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಕಾತ್ರಜ್‌ ಶ್ರೀ ಅಯ್ಯಪ್ಪ ಮಂದಿರದ  ಮುಖ್ಯ ಸೇವಾಕರ್ತರಲ್ಲಿ ಒಬ್ಬರಾದ  ಆಶಾ ಗ್ರೂಪ್‌ನವರು ತಮ್ಮ ಸೇವಾ ರೂಪದಲ್ಲಿ ಈ ಮುಕುಟವನ್ನು ಶ್ರೀ ಗಣಪತಿ ದೇವರಿಗೆ ಹರೀಶ್‌ ಭಟ… ಅವರ ಮುಖಾಂತರ ದೇವರಿಗೆ ಅಲಂಕರಿಸಿ ಪೂಜೆ  ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂದಿರದ ವಿಶ್ವಸ್ತ ಮಂಡಳಿ,   ಕಾರ್ಯಕಾರಿ ಸೇವಾ ಸಮಿತಿ ಮತ್ತು ಮಹಿಳಾ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.                         
   ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ


Back to Top