Updated at Thu,25th May, 2017 2:59AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಾ.31:ಪುಣೆಯಲ್ಲಿ ಕೋಟಿ ಚೆನ್ನಯ ಕ್ರಿಕೆಟ್‌ ಪಂದ್ಯಾಟ

ಪುಣೆ: ಪುಣೆಯ ಯುವ ಉತ್ಸಾಹಿ ತುಳು ಕನ್ನಡಿಗ ಕ್ರೀಡಾಸಕ್ತರಿಂದ ಸ್ಥಾಪಿಸಲ್ಪಟ್ಟ ಕೋಟಿ ಚೆನ್ನಯ ಗ್ರೂಪ್‌ ವತಿಯಿಂದ ವರ್ಷದ ಕೋಟಿ ಚೆನ್ನಯ ಕ್ರಿಕೆಟ್‌ ಪಂದ್ಯಾಟವು  ಪಾಷಣ್‌ನಲ್ಲಿರುವ ಎನ್‌ಸಿಎಲ್‌ ಗ್ರೌಂಡ್‌ನ‌ಲ್ಲಿ ಮಾ. 31 ರಂದು ಬೆಳಗ್ಗೆ  7.30ರಿಂದ  ಜರಗಲಿದೆ. ಪಂದ್ಯಾಟವನ್ನು  ಪುಣೆಯಲ್ಲಿ ನೆಲೆಸಿರುವ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ತುಳು ಕನ್ನಡಿಗರಿಗಾಗಿ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ತಂಡಗಳು  ತಂಡದ ನೊಂದಾವಣಿ ಶುಲ್ಕವನ್ನು ಪಾವತಿಸಿ ಮಾ.  25ರೊಳಗೆ ತಮ್ಮ  ಹೆಸರನ್ನು  ನೋಂದಾಯಿಸಿಕೊಳ್ಳಬೇಕು. ಅನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪಂದ್ಯಾಟದಲ್ಲಿ ಭಾಗವಹಿಸುವ ತಂಡದ ಪ್ರತಿಯೋರ್ವ ಸದಸ್ಯನು ಪುಣೆಯಲ್ಲಿ ನೆಲೆಸಿದ್ದು, ಅರ್ಹತಾ  ಗುರುತು ಪತ್ರವಾದ ಆಧಾರ್‌ ಕಾರ್ಡ್‌ ಅಥವಾ ವೋಟರ್‌ ಐಡಿಯ  ಮೂಲ ಪ್ರತಿಯೊಂದಿಗೆ ಹಾಜರಿರತಕ್ಕದ್ದು.  ಬೇರೆ ಯಾವುದೇ ಪರಿಚಯ ಪತ್ರವನ್ನು ಪರಿಗಣಿಸಲಾಗುವುದಿಲ್ಲ.

ಕನ್ನಡ ಅಥವಾ ತುಳು ಭಾಷೆ ಮಾತನಾಡಲು ಬರತಕ್ಕದ್ದು ಎಂದು ಈ ಕ್ರಿಕೆಟ್‌ ಪಂದ್ಯಾಟದ  ಸಂಘಟಕರು ತಿಳಿಸಿದ್ದಾರೆ. ತೀರ್ಪುಗಾರರ ತೀರ್ಪು ಅಂತಿಮವಾಗಿದ್ದು, ವಿಜೇತ ಪ್ರಥಮ ತಂಡಕ್ಕೆ 13,333 ರೂ. ಹಾಗೂ ಕೋಟಿ ಚೆನ್ನಯ ಟ್ರೋಫಿ, ದ್ವಿತೀಯ ತಂಡಕ್ಕೆ  7,777 ರೂ. ಮತ್ತು  ಟ್ರೋಫಿಯನ್ನಿತ್ತು ಗೌರವಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ  ಕಿಶೋರ್‌ ಕೊಥ್ರೊಡ್‌ (7773900041), ಪ್ರದೀಪ್‌  ವಾಘೋಲಿ  (9623332323) ಮತ್ತು  ಸುದೀಪ್‌  ಪೂಜಾರಿ   (9767653263), ಪ್ರಸನ್ನ ಶೆಟ್ಟಿ  (8806913331)  ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.


More News of your Interest

Trending videos

Back to Top