Updated at Mon,24th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡಾ|ಜಿ.ಡಿ.ಜೋಶಿ ಪ್ರತಿಷ್ಠಾನದಿಂದ ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ

ಮುಂಬಯಿ: ಡಾ| ಜಿ. ಡಿ. ಜೋಶಿ ಪ್ರತಿಷ್ಠಾನ ಮುಂಬಯಿ ವತಿಯಿಂದ ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಮಾ. 4 ರಂದು ನಗರದ ಕತೆಗಾರ್ತಿ, ಲೇಖಕಿ ಶಕುಂತಳಾ ಪ್ರಭು ಅವರ ನೇತೃತ್ವದಲ್ಲಿ ಗೋರೆಗಾಂವ್‌ನಲ್ಲಿ ನಡೆಯಿತು. ಸುಮಾರು ಮೂವತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬಾಲಚಂದ್ರ ರಾವ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಜಿ. ಡಿ. ಜೋಶಿ, ಸಾಹಿತಿ ರವಿ ರಾ. ಅಂಚನ್‌, ಕವಿ, ರಂಗನಿರ್ದೇಶಕ ಸಾ. ದಯಾ ಅವರು ಉಪಸ್ಥಿತರಿದ್ದರು. ಅಪರ್ಣಾ ರಾವ್‌ ಅವರು ಪ್ರಾರ್ಥನೆಗೈದರು. ಆಯೋಜಕರಾದ ಶಕುಂತಳಾ ಪ್ರಭು ಅವರು ಸ್ವಾಗತಿಸಿದರು.

ಲಲಿತಾ ಅಂಗಡಿ ಅವರು ಕಾರ್ಮೋಡ, ಅಪರ್ಣಾ ರಾವ್‌ ಅವರು ಮಾಸ್ಟರ್‌ ಸ್ಟ್ರೋಕ್‌ ಕವನಗಳನ್ನು ವಾಚಿಸಿದರು. ಪದ್ಮಜಾ ಮಣ್ಣೂರ ಅವರು ನಿನ್ನ ನೀನು ಅರಿತುಕೋ...ಲೇಖನವನ್ನು ಪ್ರಸ್ತುತಪಡಿಸಿದರು. ಮೀನಾ ಕಾಳವಾರ ಅವರು ರಾಜಕೀಯ ನೆಲೆಯಲ್ಲಿ ಮಹಿಳೆಯರ ಸ್ಥಾನಮಾನ ಎಂಬ ಲೇಖನವನ್ನು ಪ್ರಸ್ತುತಪಡಿಸಿದರು. ರಮಾ ನಾಯಕ್‌ ಅವರು ಕುಮಾರಿ ಮಾತಾ ಕಥೆಯನ್ನು ಮಂಡಿಸಿದರು. ಡಾ| ಕೃಷ್ಣ ಶೆಟ್ಟಿ ಅವರು ವೈದ್ಯಕೀಯ ಮಾಹಿತಿ ನೀಡಿ ಸಹಕರಿಸಿದರು. ವಾಣಿ ಶೆಟ್ಟಿ ಅವರು ಪತಿವ್ರತೆ ಊರ್ಮಿಳೆಯ ಮಹಾತ್ಯಾಗದ ಬಗ್ಗೆ ಲೇಖನ ಮಂಡಿಸಿದರು.

ಸುಮಿತ್ರಾ ಗುಜರನ್‌ ಅವರು ರಾಮಾಯಣದಲ್ಲಿ  ಅಗಸನ ಪಾತ್ರದ ಮಹತ್ವದ ಬಗ್ಗೆ ಲೇಖನ ಪ್ರಸ್ತುತಪಡಿಸಿದರು. ಮೀರಾ ಕೃಷ್ಣ ಕಟಾ³ಡಿ ಅವರು ಅರಸಿನ ಕುಂಕುಮದ ಮಹತ್ವ, ಸುಗಂಧಿ ಶ್ಯಾಮ ಹಳೆಯಂಗಡಿ ಅವರು ಸ್ತ್ರೀ ಸಬಲೀಕರಣ ಕುರಿತು ಮಾತನಾಡಿದರು. ಆಶಾ ಶಿವಪುರ ಅವರು ಕನ್ನಡ ಮತ್ತು ಹಿಂದಿ ಕವನಗಳನ್ನು ವಾಚಿಸಿದರು.

ಸುಗುಣಾ ಬಂಗೇರ ಅವರು ಸ್ವರಚಿತ ಕವನ, ಲೀಲಾ ಗಣೇಶ್‌ ಅವರು  ನಾನು ಹೇಗಿರಲಿ ಕವನ, ಗುಣೋದಯ ಐಲ್‌ ಅವರು ಸತ್ಯಮೇವ ಜಯತೇ ಹಾಗೂ ಶಕುಂತಳಾ ಪ್ರಭು ವೃದ್ಧಾಶ್ರಮ ಕಥೆಯನ್ನು ಓದಿದರು. ರವಿ ರಾ. ಅಂಚನ್‌ ಅವರು ಶ್ರಮಶಕ್ತಿ, ಸ್ವಾಭಿಮಾನಿ ಕವನ ವಾಚಿಸಿದರು.

ಬಾಲಚಂದ್ರ ರಾವ್‌ ಅವರು ಮಾತನಾಡಿ, ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮದ ಮಹತ್ವ ಹಾಗೂ ಅವರ ನಾಟಕಕೃತಿ ಗೆದ್ದು ಸೋತವಳ ಇದರ ಬಗ್ಗೆ ವಿಶ್ಲೇಷಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಾಮಕೃಷ್ಣ ಪ್ರಭು, ಲಲಿತಾ ಶೆಟ್ಟಿ, ರಮೇಶ್‌ ಶೆಟ್ಟಿ ಪಯ್ನಾರು, ಕಾರಂತ್‌, ಗೋಪಾಲ್‌ ತ್ರಾಸಿ, ರಮೇಶ್‌ ಶಿವಪುರ, ಸುನಿಲ್‌ ರಾವ್‌ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


More News of your Interest

Trending videos

Back to Top