ರಾಘವೇಂದ್ರ ಮಠ ಜೋಗೇಶ್ವರಿ: ಸುಜಯೀಂದ್ರ ಭವನಕ್ಕೆ ಶಂಕುಸ್ಥಾಪನೆ


Team Udayavani, Mar 26, 2017, 3:39 PM IST

24-Mum04a.jpg

ಮುಂಬಯಿ: ಕಲಿಯುಗದ ಕಾಮಧೇನುವಾಗಿ, ನಂಬಿದ ಭಕ್ತರಿಗೆ ಕಲ್ಪವೃಕ್ಷವಾಗಿ ದೇಶ-ವಿದೇಶಗಳಲ್ಲಿ ಅಭೂತಪೂರ್ವ ಭಕ್ತ ಸಂಕುಲವನ್ನು ಹೊಂದಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಅಭಿನವ ಮಂತ್ರಾಲಯವು ಜೋಗೇ ಶ್ವರಿಯಲ್ಲಿ ಮಾ. 20ರಂದು ಲೋಕಾರ್ಪಣೆಗೊಂಡು ಭಕ್ತರಿಗೆ ದರ್ಶನ ಪಡೆಯುವ ಭಾಗ್ಯ ಒದಗಿದ್ದು, ಮಠದಲ್ಲಿ ಇನ್ನೂ ಹೆಚ್ಚಿನ ಸವಲತ್ತು, ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೃಹತ್‌ ಸಂಕೀರ್ಣ

ವೊಂದು ನಿರ್ಮಾಣಗೊಳ್ಳಲಿದ್ದು, ಮಾ. 24ರಂದು ಬೆಳಗ್ಗೆ ಮಂತ್ರಾಲಯದ ಮಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥಶ್ರೀಪಾದರು ಬೃಂದಾವನದ ಪಕ್ಕದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರೀ ಸುಜಯೀಂದ್ರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿರುವ ಸುಜಯೀಂದ್ರ ಭವನವು ಹಿರಿಯ ಯತಿಗಳ ಅನುಗ್ರಹದೊಂದಿಗೆ ಸ್ಥಾಪನೆಗೊಳ್ಳಲಿದೆ. ನೂತನ ಭವನದಲ್ಲಿ ಬೃಹತ್‌ ಕಲ್ಯಾಣ ಮಂಟಪ ರೂಪುಗೊಳ್ಳಲಿದ್ದು, ಇತರ ಮಹಡಿಗಳಲ್ಲಿ ಯೋಗಕೇಂದ್ರ, ಗ್ರಂಥಾಲಯ, ಅತಿಥಿಗೃಹ, ಪ್ರವಚನ ಕೊಠಡಿಗಳು  ಹಾಗೂ ಇತರ ಸೌಲಭ್ಯಗಳು ಒಳಗೊಳ್ಳಲಿದೆ. ಜೊತೆಗೆ ವಿಶಾಲವಾದ ಗೋ ಶಾಲೆಯು ನಿರ್ಮಾಣಗೊಳ್ಳಲಿದೆ.

ಅಭಿನವ ಮಂತ್ರಾಲಯ ಲೋಕಾರ್ಪಣೆಗೊಂಡು ಪ್ರಸ್ತುತ ರಾಯರ ದರ್ಶನಕ್ಕೆ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಭಕ್ತರ ಬೇಡಿಕೆಗೆ ಅನುಗುಣವಾಗಿ ವಿವಿಧ ಸೌಲಭ್ಯಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ. ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಗೊಂಡ ಮೇಯರ್‌ ಪ್ರೊ| ವಿಶ್ವನಾಥ ಮಹದೇಶ್ವರ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸುಬುದೇಂದ್ರ ಶ್ರೀಗಳು, ಮುಂಬಯಿ ಭಕ್ತಾದಿಗಳ ಸಹಕಾರ, ಪ್ರೋತ್ಸಾಹವನ್ನು ಕಂಡು ಬಹಳಷ್ಟು ಸಂತೋಷಪಟ್ಟೆ. ಮಠದ ನಿರ್ಮಾಣಗೊಂಡ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಧರ್ಮದವರು ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದು, ಎಲ್ಲ ಧರ್ಮದವರು, ಒಗ್ಗಟ್ಟಿನಿಂದ, ಒಮ್ಮನಸ್ಸಿನಿಂದ ಕೂಡಿ ಶಾಖೆಯ ಉದ್ಘಾಟನೆಗೆ ಸಹಕರಿಸಿದ್ದು ನನ್ನ ಧಾರ್ಮಿಕ, ಸಾಮಾಜಿಕ ಸೇವೆಗೆ ಪುಷ್ಟಿ ನೀಡಿದೆ. ಭಕ್ತರ ಪ್ರೋತ್ಸಾಹ, ಸಹಕಾರ, ಸಲಹೆಗಳು ಇದೇ ರೀತಿಯಲ್ಲಿ ಮುಂದುವರಿದು ಜೋಗೇಶ್ವರಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಅಭಿನವ ಮಂತ್ರಾಲಯವು ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಲಿ ಎಂದು ಹಾರೈಸಿದರು.

ನೂರಾರು ಮಂದಿ ಭಕ್ತಾದಿಗಳು, ಮೂಲ ಮಂತ್ರಾಲಯದ ಆಡಳಿತ ಅಧಿಕಾರಿಗಳು, ಸಿಬಂದಿವರ್ಗ, ಜೋಗೇಶ್ವರಿ ಮಠದ ಪ್ರಬಂಧಕರಾದ ರಮಾಕಾಂತ ಮಾನ್ವಿ, ಮೇಲ್ವಿಚಾರಕ ಪೂರ್ಣಪ್ರಜ್ಞ ವೆಂಕಟ, ಅರ್ಚಕ ವೃಂದದವರು ಉಪಸ್ಥಿತರಿದ್ದರು. ಅನಂತರ ದಾಸ ಸಾಹಿತ್ಯ ಪ್ರೊಜೆಕ್ಟ್ ವತಿಯಿಂದ ಭಜನ ಮಂಡಳಿಯ ಸಮಾವೇಶ ನಡೆಯಿತು.   

 ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.