Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕರ್ನಾಟಕ ಹೈಸ್ಕೂಲ್‌ ಹಳೆ ವಿದ್ಯಾರ್ಥಿಗಳಿಂದ ಬಂಟರ ಸಂಘಕ್ಕೆ 7ಲಕ್ಷ ರೂ.

ಮುಂಬಯಿ: ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಕನ್ನಡ ಮಾಧ್ಯಮದ ಹಳೆವಿದ್ಯಾರ್ಥಿಗಳು ಮಾಜಿ ಪ್ರಾಂಶುಪಾಲ ಕೆ. ಆರ್‌. ಆಚಾರ್ಯ ಅವರ ಗುರುವಂದನ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳ ಹಿಂದೆ ಆಯೋಜಿಸಿರುವ  ಸಂದರ್ಭ ದೇಣಿಗೆಯಾಗಿ ಸಂಗ್ರಹಗೊಂಡ ಮೊತ್ತದಲ್ಲಿ 7 ಲಕ್ಷ ರೂ. ಉಳಿತಾಯಗೊಂಡಿದ್ದು, ಈ ಮೊತ್ತವನ್ನು ಶಾಲೆಯ ಹಳೆವಿದ್ಯಾರ್ಥಿಗಳು, ಮಾಜಿ ಪ್ರಾಂಶುಪಾಲ ಕೆ. ಆರ್‌. ಆಚಾರ್ಯ ಹಾಗೂ ಅಭಿನಂದನ ಸಮಿತಿಯ ಅಧ್ಯಕ್ಷ ಸಿಎ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಎ. 12ರಂದು ಬಂಟರ ಸಂಘ ಮುಂಬಯಿಗೆ ಹಸ್ತಾಂತರಿಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರಲ್ಲದೆ, ಈ ಮೊತ್ತದಿಂದ ಬರುವ ಬಡ್ಡಿಯನ್ನು 2017-2018 ರ ಶೈಕ್ಷಣಿಕ ವರ್ಷದಿಂದ ಚೆಂಬೂರು ಕರ್ನಾಟಕ ಹೈಸ್ಕೂಲ್‌ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿಯುವ ಇತರ ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಜಾತಿ, ಮತದ ಭೇದವಿಲ್ಲದೆ ಪ್ರತಿವರ್ಷ ನೀಡುವಂತೆ ವಿನಂತಿಸಿದರು.

ಮಾಜಿ ಪ್ರಾಂಶುಪಾಲ ಕೆ. ಆರ್‌. ಆಚಾರ್ಯ ಹಾಗೂ ಕನ್ನಡ ಮಾಧ್ಯಮ ಹಳೆವಿದ್ಯಾರ್ಥಿಗಳು ರೂ. 7 ಲಕ್ಷದ ಚೆಕ್‌ನ್ನು ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ ಅವರು ಉಪಸ್ಥಿತರಿದ್ದರು. ಅಲ್ಲದೆ ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಕನ್ನಡ ಮಾಧ್ಯಮ ಶಾಲೆಯ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು


More News of your Interest

Trending videos

Back to Top