ನಮ್ಮನ್ನು ದಯವಿಟ್ಟು ಜೈಲಿಗೆ ಹಾಕಬೇಡಿ: ಪತ್ರ ಬರೆದ ಪುಟ್ಟ ಮಕ್ಕಳು
Team Udayavani, Jul 18, 2017, 5:19 AM IST
“ನಮ್ಮನ್ನು ಜೈಲಿಗೆ ಕಳಿಸಬೇಡಿ. ಮನೆಯಲ್ಲೇ ಇರಲು ಬಿಡಿ’. ಹೀಗೆಲ್ಲಾ ಗೋಗರೆದು ಪೊಲೀಸರಿಗೆ ಪತ್ರ ಬರೆದಿ ರುವುದು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಅಮೆರಿಕದ ಪುಟ್ಟ ಸಹೋದರರು. ಕಾರಣ ಇವರು ಟೆಕ್ಸಾಸ್ನ ಪೊಲೀಸರಿಗೆ 25 ಬಾರಿ ನಕಲಿ ಕರೆ ಮಾಡಿದ್ದರು. ಮಕ್ಕಳು ಮಾಡಿರುವ ಅವಾಂತರ ತಿಳಿದ ಬಳಿಕ ಮಕ್ಕಳ ತಾಯಿ ಅವರನ್ನು ಪೊಲೀಸರು ಜೈಲಿಗೆ ಹಾಕುತ್ತಾರೆ ಎಂದು ಹೆದರಿಸಿದ್ದರು. ಬೆದರಿದ ಮಕ್ಕಳು ತಮ್ಮ ಮುದ್ದಾದ ಕೈಬರಹ ದಲ್ಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
“ನಿಮಗೆ ಕರೆ ಮಾಡಿ ನಿಮ್ಮನ್ನು ಮತ್ತೂಬ್ಬರ ಮನೆಗೆ ಕಳಿಸಿದರೆ ತಮಾಷೆಯಾಗಿ ಇರುತ್ತದೆ ಎಂದು ತಿಳಿದು ನಾವು ಹೀಗೆ ಮಾಡಿದೆವು. ದಯವಿಟ್ಟು ನಮ್ಮನ್ನು ಜೈಲಿಗೆ ಹಾಕಬೇಡಿ. ನೀವು ಜೈಲಿಗೆ ಕಳಿಸಿದರೆ ಹೊರಬರಲು ಏನನ್ನಾದರೂ ಮಾಡಲು ತಯಾರಿದ್ದೇವೆ ಎಂದು ಇಬ್ಬರೂ ಪ್ರತ್ಯೇಕ ಪ್ರತಗಳಲ್ಲಿ ಬರೆದಿದ್ದಾರೆ. ಈ ಪತ್ರ ವನ್ನು ತಮಾಷೆಯಾಗಿ ತೆಗೆದುಕೊಂಡಿರುವ ಪೊಲೀಸರು ಇದನ್ನು ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದಾರೆ.