ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಅವರಿಂದ ಹರಿಕಥಾ ಸಪ್ತೋತ್ಸವ 


Team Udayavani, Jul 19, 2017, 3:44 PM IST

17-Mum04.jpg

ತಮಸೋಮ ಜ್ಯೋತಿರ್ಗಮಯ ಭಗವಂತನ ಈ ಸೃಷ್ಟಿಯಲ್ಲಿ ಮಾನವ ಜೀವನದಲ್ಲಿ ಕತ್ತಲೆ ಹೋಗಿ ಬೆಳಕು ಬರುವಂತೆ ಸುಖಲೇಶವು ಕ್ಷಣಕಾಲ ಮಿಂಚಿನಂತೆ ಬಂದು, ಇನ್ನೊಂದು ಕ್ಷಣದಲ್ಲಿ ದುಃಖದ ಕರಿಛಾಯೆಯು ದಟ್ಟವಾಗಿ ಆವರಿಸುತ್ತದೆ. ಈ ಎಲ್ಲ ಕತ್ತಲೆಗಳನ್ನು ನಾಶಮಾಡಿ ದುಃಖವೇ ಇರದ ಸುಖವನ್ನು-ಬೆಳಕನ್ನು ಕರುಣಿಸು ಎಂದು ಪ್ರಾರ್ಥನೆ ಮಾಡುತ್ತಲೇ ಇರಬೇಕು. ಈ ಜೀವನ ಸಿದ್ಧಾಂತಕ್ಕೆ ಅನುಗುಣವಾಗಿ ಸ್ಥಾಪಿñ ‌ವಾದ ಮುಂಬಯಿಯ ಧಾರ್ಮಿಕ, ಸಾಮಾಜಿಕ ಸೇವಾ ಸಂಸ್ಥೆ ಯಾಗಿರುವ ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನವು ಸಂಸ್ಕೃತಿ ಸಮೃದ್ಧಿ ಯೋಜನೆಯ ಅಂಗವಾಗಿ ಹರಿಕಥಾ ಸಪೊ¤àತ್ಸವ-ಶ್ರಾವಣ ಮಾಸದ ಏಳು ದಿನಗಳ ನಿರಂತರ ಸಂಕೀರ್ತನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಕಳೆದ ಹತ್ತು ವರ್ಷಗಳಿಂದ ಈ ಕಾರ್ಯಕ್ರಮವು ನಡೆಯುತ್ತಿದ್ದು, ಹನ್ನೊಂದನೆ ವರ್ಷದ ಹರಿಕಥಾ ಸಪೊ¤àತ್ಸವ ಸತ್ಸಂಗವು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಜು. 24 ರಿಂದ ಜು. 30ರ ವರೆಗೆ ಪ್ರತಿ ದಿನ ಸಂಜೆ 5 ರಿಂದ ಪೂಜ್ಯ ಪೇಜಾವರ ಶ್ರೀಪಾದರ ಆಶೀರ್ವಾದಗಳೊಂದಿಗೆ ನಡೆಯಲಿದೆ. ಪಕ್ಕವಾದ್ಯದಲ್ಲಿ ಹಾರ್ಮೋನಿಯಂನಲ್ಲಿ ಶೇಖರ ಸಸಿಹಿತ್ಲು, ತಬಲಾದಲ್ಲಿ ಜನಾದ‌ìನ ಸಾಲ್ಯಾನ್‌, ತಾಳದಲ್ಲಿ ರವಿ ಪೂಜಾರಿ, ಶ್ರೀನಿವಾಸ ಭಟ್‌ ಅವರು ಸಹಕರಿಸಲಿದ್ದಾರೆ.

ಹರಿಕಥಾ ಸಪೊ¤àತ್ಸವದ ಉದ್ಘಾಟನ ಸಮಾರಂಭವು ಜು. 24ರಂದು ಸಂಜೆ 5 ರಿಂದ ಜರಗಲಿದ್ದು, ಅತಿಥಿಗಳಾಗಿ ಪೇಜಾವರ ಮಠದ ಪ್ರಬಂಧಕ ಹರಿದಾಸ್‌ ಭಟ್‌, ಜೆರಿಮೆರಿ ಉಮಾಮಹೇಶ್ವರಿ ಮಂದಿರದ ಎನ್‌. ಎನ್‌. ಉಡುಪ, ಪಲಿಮಾರು ಮಠದ ಪ್ರಬಂಧಕ ರಾಧಾಕೃಷ್ಣ ಭಟ್‌, ಕನ್ನಡ ಕಲಾಕೇಂದ್ರದ ಅಧ್ಯಕ್ಷ ಬಿ. ಬಿ. ರಾವ್‌, ಹಿರಿಯ ಯಕ್ಷಗಾನ ಅರ್ಥದಾರಿಗಳಾದ ಕೆ. ಕೆ. ಶೆಟ್ಟಿ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸುರೇಶ್‌ ಭಂಡಾರಿ, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ಜಯಕೃಷ್ಣ ಎ. ಶೆಟ್ಟಿ ತೋನ್ಸೆ, ದಹಿಸರ್‌ ವಿಟuಲ ರುಕುಮಾಯಿ ಮಂದಿರದ ಸುಗುಣಾ ಕಾಮತ್‌, ದಿವ್ಯಾ ಸಾಗರ್‌ ಗ್ರೂಪ್‌ನ ಸಿಎಂಡಿ ಮುದ್ರಾಡಿ ದಿವಾ ಕರ ಶೆಟ್ಟಿ, ಯಕ್ಷ  ಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ಸಂಚಾ ಲಕ ಐಕಳ ಗಣೇಶ್‌ ಶೆಟ್ಟಿ, ಜಿಎಸ್‌ಬಿ ಗಣೇ ಶೋತ್ಸವ ಮಂಡಳದ ಕಾರ್ಯಾ ಧ್ಯಕ್ಷ ಎನ್‌. ಎನ್‌. ಪಾಲ್‌, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಕಮಲಾಕ್ಷ ಸರಾಫ್‌, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಅಸಲ# ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಧರ್ಮದರ್ಶಿ ದೇವ್‌  ಡಿ. ಪೂಜಾರಿ, ಗಾಯಕ, ಉದ್ಯಮಿ ಕಾಪು ವಿಶ್ವನಾಥ್‌ ಎನ್‌. ಶೆಟ್ಟಿ, ಎಲ್‌ಡಿಎಫ್‌ ಇನ್‌ಫೂಟೆಕ್‌ ಇದರ ಸಿಎಂಡಿ ಅಮರನಾಥ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಆ ದಿನ ರಾಮಾಯಣದಿಂದ ಆರಿಸಲಾದ ಸಮುದ್ರೋಲ್ಲಂಘನ- ಸೀತಾನ್ವೇಷಣೆ ಎಂಬ ಪ್ರಸಂಗದ ಹರಿಕಥಾ ಕಾಲಕ್ಷೇಪ ನಡೆಯಲಿದೆ. ಜು. 25 ರಂದು ಸಂಜೆ ಭೀಷ್ಮ ಪ್ರತಿಜ್ಞೆ, ಜು. 26 ರಂದು ಸಂಜೆ ಜಾಂಬವತಿ ಕಲ್ಯಾಣ, ಜು. 27 ರಂದು ವೀರ ಅಭಿಮನ್ಯು, ಜು. 28 ರಂದು ಭಕ್ತ ಪುಂಡರೀಕ, ಜು. 29 ರಂದು ಭಕ್ತ ಕನಕದಾಸ, ಜು. 30 ರಂದು ಶ್ರೀರಾಮ ಸೀತಾಕಲ್ಯಾಣ ಹರಿಕಥಾ ಕಾಲಕ್ಷೇಪ ನಡೆಯಲಿದೆ. ಪ್ರಾಯೋಜಕರುಗಳಾಗಿ ಕ್ರಮವಾಗಿ ಶ್ರೀ ಕೃಷ್ಣ ವಿಠuಲ ಭಜನ ಮಂಡಳಿ, ಸುಗುಣಾ ಕಾಮತ್‌, ಡಾ| ಎನ್‌. ಎಸ್‌. ಆಳ್ವ, ನಂದಳಿಕೆ ಭರತ್‌ ಶೆಟ್ಟಿ, ರಮಾನಾಥ ಕೋಟ್ಯಾನ್‌, ಜಗನ್ನಾಥ ಪುತ್ರನ್‌, ಜಗನ್ನಾಥ ಕಾಂಚನ್‌, ಅಶೋಕ್‌ ಶೆಟ್ಟಿ  ಪೆರ್ಮುದೆ, ಸುರೇಶ್‌ ಭಂಡಾರಿ, ಐಕಳ ಗಣೇಶ್‌ ಶೆಟ್ಟಿ, ಕವಿತಾ ಪುರುಷೋತ್ತಮ ಶೆಟ್ಟಿ, ಸುಧಾ ಕುಂದರ್‌, ವಿಶ್ವನಾಥ ಎನ್‌. ಶೆಟ್ಟಿ, ಮನಿಷಾ ಸಾವಂತ್‌ ಅವರು ಸಹಕರಿಸಲಿದ್ದಾರೆ. 

ಪ್ರಾಯೋಜಕತ್ವವನ್ನು ಪಡೆಯಲು ಇಚ್ಛಿಸುವ ಭಕ್ತಾದಿಗಳು 9820118612, 9757203045 ಈ ನಂಬರನ್ನು  ಸಂಪರ್ಕಿಸಬಹುದು.

ಇಂದಿನ ಪ್ರಕ್ಷುಬ್ಧ ವಾತಾವರಣ, ಕಾರ್ಯ ಬಾಹುಳ್ಯ ವ್ಯಸ್ತ ಜೀವನದಲ್ಲಿ ಕೆಲಹೊತ್ತು ವಿಶ್ರಾಂತಿ ಸಿಗುವುದಕ್ಕಾಗಿ ಮನುಷ್ಯ ಆಚರಿಸುವ ಮಾರ್ಗ ದುವ್ಯìಸನಗಳೇ ಆಗಿರುತ್ತದೆ. ತಪ್ಪಿದರೆ ದೂರದರ್ಶನ, ಮೊಬೈಲ್‌, ಇಂಟರ್‌ನೆಟ್‌ ಇತ್ಯಾದಿಗಳು ನಮಗೆ ಸಂತೋಷವನ್ನು ಕೊಡದೆ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುವುದು ನಿಶ್ಚಿತವಾಗಿದೆ. ನಮ್ಮ ಜೀವನ ಪರಿಪಕ್ವತೆಗಾಗಿ, ಆತ್ಮದ ಸಾಧನೆಗಾಗಿ ಯಾವೊಂದು ಉತ್ತಮ ಸಾಧನೆಗಳನ್ನು ಮಾಡದೆ ಕೊನೆ ಗಳಿಗೆೆಯಲ್ಲಿ ಪಶ್ಚಾತ್ತಾಪ ಪಡುವ ಪ್ರಸಂಗಗಳೇ ಹೆಚ್ಚು. ಇವೆಲ್ಲವನ್ನು ಅರಿತ  ಅಪರೋಕ್ಷ ಜ್ಞಾನಿಗಳಾದ ಹರಿದಾಸರು ವೇದ-ಪುರಾಣಗಳಲ್ಲಿ ಅಡಕವಾದ ಕಬ್ಬಿಣದ ಕಡಲೆಯಂತಿರುವ ರಸಸತ್ವಗಳನ್ನು ಜೀವನ ಮಾರ್ಗವನ್ನು ಕನ್ನಡ ತಿಳಿಗನ್ನಡಿಯಲ್ಲಿ ಮೂಡಿಸಿ ಮಹದುಪಕಾರಗೈದಿದ್ದಾರೆ. ಅಂತಹ ಅಮೂಲ್ಯವಾದ ಸಾಹಿತ್ಯವನ್ನು ಸಂಗೀತ, ನೀತಿಕಥೆ, ಸುಭಾಷಿತಗಳೊಂದಿಗೆ ಹರಿಕಥಾ ಸಂಕೀರ್ತನೆಗಳಿಂದ ಸುಮಾರು 3 ದಶಕಗಳಿಂದ ಸಜ್ಜನ ಭಕ್ತವೃಂದಕ್ಕೆ ನೀಡುತ್ತಿರುವವರು ಹರಿಕಥಾ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು. 

ಪರಮಪೂಜ್ಯರಾದ, ತಮ್ಮ ಗುರುಗಳಾದ ಪೇಜಾವರ ಶ್ರೀಪಾದರಿಂದ ವಿಶ್ವೇಶದಾಸರು ಎಂಬ ಅಂಕಿತನಾಮವನ್ನು ಪಡೆದಿರುವ ಶ್ರೀಯುತರಿಗೆ ದೈವದತ್ತವಾದ ವಾಕ್‌ಪ್ರೌಢಿಮೆ, ಶರೀರ-ಶಾರೀರ, ಸಂಗೀತ-ಶಾಸ್ತ್ರಗಳ ನಿಖರ ಜ್ಞಾನ ಬಾಲ್ಯದಿಂದಲೇ ಹಾಸುಹೊಕ್ಕಾಗಿ ಮೂಡಿದ್ದು, ಹರಿಕಥಾಕಾರರಿಗೆ ಉಪ ಯುಕ್ತವಾಗಿದ್ದು ಅಪಾರ ಅಭಿಮಾನಿ ಸಮೂಹವನ್ನು ಪಡೆಯುವಲ್ಲಿ ಕಾರಣವಾಗಿದೆ. 

ಈ ಹರಿಕಥಾ ಸಪೊ¤àತ್ಸವದಲ್ಲಿ ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಸಹಕರಿಸುವಂತೆ  ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.