ಹಬ್ಬದ ವಾತಾವರಣ ಸೃಷ್ಟಿಸಿದ ಕೊಂಕಣಿ ಭಾಷಾ ಮಂಡಳದ ಪ್ರತಿಭಾ ಸ್ಪರ್ಧೆ

Team Udayavani, Jul 19, 2017, 3:49 PM IST

17-Mum06b.jpg

ದೇಶದ ಭಿನ್ನಭಿನ್ನ ಪ್ರದೇಶಗಳಿಂದ ಕರ್ಮಭೂಮಿಯನ್ನಾಗಿಸಿ ಮಾಯಾನಗರಿ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿ ಸೇರಿದ ಭಾರತೀಯರಲ್ಲಿ ಕರ್ನಾಟಕದ ಜನತೆಯೂ ಪ್ರಮುಖರು. ಅದರಲ್ಲೂ ವಿಶೇಷ ವಾಗಿ ಕರ್ನಾಟಕ ಕರಾವಳಿ ತೀರದ ಕೊಂಕಣಿ ಮಾತೃಭಾಷಿಗರ ಸಂಖ್ಯೆಯೂ ಬಹಳಷ್ಟಿದೆ. ಕೊಂಕಣಿಯನ್ನು ಮಾತೃಭಾಷೆ ಆಗಿಸಿದವರಲ್ಲಿ ಗೋವಾದ ಗೌಡ ಸಾರಸ್ವತ ಬ್ರಾಹ್ಮಣರು, ರಾಜಾಪುರ ಸಾರಸ್ವತ ಬ್ರಾಹ್ಮಣರು, ಕೇರಳದ ಕೊಚ್ಚಿ ಕ್ರಿಶ್ಚಿಯನ್ನರು. ಕರ್ನಾಟಕ ಭಟ್ಕಳದ ಮುಸ್ಲಿಂ ನವಾಯತರು ಸೇರಿದಂತೆ ಇನ್ನೂ ಹಲವಾರು ಸಮುದಾಯದ ಜನತೆ ತಮ್ಮ ಮಾತೃಭಾಷೆಯನ್ನು ಕೊಂಕಣಿಯನ್ನಾಗಿಸಿದ್ದು ಭಾಷೆಯಂತೆ ಅದರ ಸಂಸ್ಕೃತಿಗಳನ್ನೂ ಬೆಳೆಸಿ ಮುನ್ನಡೆಸಿ ಬಂದಿದ್ದಾರೆ.

ಗೋವಾ ರಾಜ್ಯದ ಪ್ರಾದೇಶಿಕ ಭಾಷೆಯಾ ಗಿದ್ದು, ಹತ್ತು ಹಲವಾರು ಸಮುದಾಯಗಳ ಮಾತುಭಾಷೆ, ಬರಹಭಾಷೆ ಸಾಹಿತ್ಯ ರಚಿತ, ಸಂಸ್ಕೃತಿ, ಪರಂಪರೆ, ಇತಿಹಾಸಗಳನ್ನು ಒಳಗೊಂಡ‌ ಭಾಷೆಯಾಗಿದ್ದರೂ ರಾಷ್ಟ್ರೀಯ ಮಾನ್ಯತೆ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಮಾತೃಭಾಷೆಯ ಪೋಷಣೆಗಾಗಿ ಸುಮಾರು 1942ರಲ್ಲಿ ಮುಂಬಯಿಯಲ್ಲಿ ಹುಟ್ಟು ಪಡೆದು ಸದಾ ಸಕ್ರಿಯವಾಗಿರುವ  ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಸಂಸ್ಥೆಯಂತಹ ಹಲವಾರು ಸಂಸ್ಥೆಗಳ ಹೋರಾಟದ ಫಲವಾಗಿ 1992ರಲ್ಲಿ ಕೊಂಕಣಿ ಭಾಷೆಯು ಭಾರತ ರಾಷ್ಟ್ರದ 8ನೇ ಪರಿಚೆ³àದದಲ್ಲಿ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಯಿತು.

ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಸಂಸ್ಥೆಯಲ್ಲಿ ಕೊಂಕಣಿ ಭಾಷೆಯ ಕವಿ, ಕಥೆಗಾರ, ನಾಟಕಕಾರ, ಲೇಖಕ, ಸಂಪಾದಕ, ಅನುವಾದಕ, ಸಂಘಟಕ ಎಂದೇ ಪ್ರಸಿದ್ಧಿ ಪಡೆದ ಕೇಂದ್ರೀಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ  ಜೆ. ಬಿ. ಮೊರಾಯಸ್‌ ಅವರು ಹಾಗೂ ಹಿರಿಯ ಕವಿ  ಜೆ. ಬಿ. ಸಿಕ್ವೇರಾ, ನ್ಯಾಯವಾದಿ ಎಸ್‌. ವಿ. ಪಿಕೆÛ ಸೇರಿದಂತೆ ಅನೇಕ ಗಣ್ಯರು ಅವಿರತವಾಗಿ ಶ್ರಮಿಸಿದ್ದಾರೆ.

ಸಂಸ್ಥೆಯು ಸಮುದಾಯಕ್ಕಿಂತ ಭಾಷೆಯನ್ನೇ ಪ್ರಧಾನವಾಗಿ ಭಾಷೆಯ ಉಳಿವು ಪೋಷಣೆಗಾಗಿ ಮಹಾನಗರದಲ್ಲಿನ ಸಾವಿರಾರು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದೆ.  ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು ಭಾಷೆಯ ಉನ್ನತಿಗಾಗಿ ಶ್ರಮಿಸಿದೆ. ರಾಷ್ಟ್ರದಾದ್ಯಂತ ನಡೆಯುತ್ತಿರುವ ಸಮ್ಮೇಳನ ಪರಿಷತ್ತುಗಳಲ್ಲಿ ಮುಂಬಯಿಯ ಸಾವಿರಾರು ಜನತೆ ಪಾಲ್ಗೊಳ್ಳುವಂತೆ ಶ್ರಮ ವಹಿಸಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡು  ಸಾವಿರಾರು ಕಲಾವಿದರು, ಸಂಗೀತಕಾರರು, ಪ್ರತಿಭೆಗಳನ್ನು ಗುರುತಿಸಿದೆ.

ಈ ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಸಂಸ್ಥೆಯು ಇದೀಗ 75ರ ಹರೆಯದಲ್ಲಿದ್ದು ಅಮೃತಮಹೋತ್ಸವ ಸಂಭ್ರಮದಲ್ಲಿದ್ದು, ಆ.  20 ರಂದು ಬೊರಿವಿಲಿ ಪಶ್ಚಿಮದಲ್ಲಿ  ಬೃಹತ್‌ ಸಮಾರಂಭವನ್ನು ಹಮ್ಮಿಕೊಂಡಿದೆ. ಆ ಪ್ರಯುಕ್ತ ಜು. 16 ರಂದು ಕುರ್ಲಾ ಪಶ್ಚಿಮದ ಜೆರಿಮೆರಿಯ ಸೈಂಟ್‌ ಜೂಡ್‌ ಶಾಲಾ ಸಭಾಗೃಹದಲ್ಲಿ ಪ್ರತಿಭಾ ಸ್ಪರ್ಧೆಯನ್ನು  ಹಮ್ಮಿಕೊಂಡಿತ್ತು. ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ನೃತ್ಯ, ಏಕಪಾತ್ರಭಿನಯ, ಛದ್ಮವೇಷ, ಸಂಗೀತ ಇನ್ನಿತರ ವಿಷಯಗಳಲ್ಲಿ ಪ್ರತಿಭೆಯನ್ನು ಮೆರೆದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವೈವಿಧ್ಯಮಯ ಸ್ಪರ್ಧೆಯು ನಡೆಯಿತು. ಇದೊಂದು ಕೊಂಕಣಿ ಭಾಷಿಗರಿಗೆ ವಿನೂತನ ರೀತಿಯ ಹಬ್ಬದ ವಾತಾವರಣವನ್ನು ಸೃಷ್ಟಿಸಿರುವುದರಲ್ಲಿ ಸಂಶಯವಿಲ್ಲ.

ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಅಧ್ಯಕ್ಷರಾಗಿ  ಜೋನ್‌ ಡಿ’ಸಿಲ್ವಾ, ಉಪಾಧ್ಯಕ್ಷರಾಗಿ ಆಲ್ಬರ್ಟ್‌ ಡಬ್ಲೂÂ. ಡಿ’ಸೋಜಾ, ಗೌರವಾಧ್ಯಕ್ಷರಾಗಿ ಹೆನ್ರಿ ಲೋಬೊ, ಪ್ರಧಾನ ಕಾರ್ಯದರ್ಶಿ ಜೋನ್‌ ಆರ್‌.ಪಿರೇರಾ, ಕೋಶಾಧಿಕಾರಿ ವಾಲ್ಟರ್‌ ಡಿ’ಸೋಜಾ, ಜೊತೆ ಕಾರ್ಯದರ್ಶಿಯಾಗಿ ಪಾಸ್ಕಲ್‌ ಲೋಬೊ,  ಜೊತೆ ಕೋಶಾಧಿಕಾರಿಯಾಗಿ ಸಿರಿಲ್‌ ಕಾಸ್ತೆಲಿನೋ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಎನ್‌. ಶ್ಯಾನ್‌ಭಾಗ್‌, ಲಾರೆನ್ಸ್‌ ಡಿ’ಸೋಜಾ ಕಮಾನಿ, ಬಿಯಟ್ರಿಸ್‌ ನಾಜ್‌Ø ಫೆರ್ನಾಂಡಿಸ್‌, ಆ್ಯಂಟನಿ ಬುಥೇಲೊ, ಸ್ಟೇನ್ಲಿ ಡಾಯಸ್‌, ರೋಜಾØರಿಯೋ ಕೆ.ಫೆರ್ನಾಂಡಿಸ್‌, ಬೆನೆಡಿಕ್ಟಾ ಬಿ. ರೆಬೆಲ್ಲೋ, ಸಿಪ್ರಿಯಾನ್‌ ಅಲುºಕರ್ಕ್‌, ಅನಂತ ಅಮ್ಮೆಂಬಳ್‌, ಲಿಯೋ ಫೆರ್ನಾಂಡಿಸ್‌ ಮತ್ತು ವಲೆ°àಸ್‌ ರೇಗೋ ಶ್ರಮಿಸುತ್ತಿದ್ದು, ಈ ತಂಡದ ಭಾಷಾಭಿಮಾನ ಮೆಚ್ಚುವಂಥ‌ದ್ದು, ಇಂತಹ ಸ್ಪರ್ಧೆಗಳು ನಗರ ಮತ್ತು ಉಪನಗರಗಳಲ್ಲಿ ನಿರಂತರವಾಗಿ ನಡೆದಾಗ ಕೊಂಕಣಿ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಉಳಿಯಲು ಸಾಧ್ಯ.

 ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.