ಇಂದಿನಿಂದ ನವರಾತ್ರಿ ಉತ್ಸವ: ಸಂಭ್ರಮದಲ್ಲಿ ಕಂಗೊಳಿಸಿದಾಗ…?


Team Udayavani, Sep 21, 2017, 4:14 PM IST

6555.jpg

ಜಗತ್ತಿನ ಎಲ್ಲಾ ಸಂಸ್ಕೃತಿಯನ್ನು ಒಂದು ತಕ್ಕಡಿಯಲ್ಲಿ ಹಾಕಿ ಮತ್ತೂಂದು ತಕ್ಕಡಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಹಾಕಿ ತೂಗಿದರೆ ಖಂಡಿತವಾಗಿಯೂ ಭಾರತೀಯರ ಅದ್ಭುತವಾದ ಸಂಸ್ಕೃತಿ ಹೆಚ್ಚು ತೂಗುತ್ತೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. “ವಸುದೈವ ಕುಟುಂಬಕಂ’ ಎಂದು ಜಗತ್ತಿಗೆ ಕೂಡಿ ಬಾಳಲು ಕಲಿಸಿರುವುದೇ ಭಾರತ. ಭಾರತದಲ್ಲಿರುವ ಅಸಂಖ್ಯಾತ ಸಂಸ್ಕೃತಿಗಳ ಕಾರಣ ವರ್ಷದ ಪ್ರತಿದಿನವೂ ಒಂದಲ್ಲ ಒಂದು ಹಬ್ಬ ಅಥವಾ ವಿಶೇಷತೆ ಇದ್ದೇ ಇರುತ್ತದೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆರೆಯಲು ಹಿಂದೂ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ದೈನಂದಿನ ಬದುಕಿನ ಜಂಜಾಟದಿಂದ ಮುಕ್ತಿ ಹೊಂದಿ ದೇಹಕ್ಕೆ, ಮನಸ್ಸಿಗೆ ಹೊಸ ಚೇತನ ನೀಡುವುದರಲ್ಲಿ ಭಾರತೀಯ ಹಬ್ಬಗಳದ್ದು ಮೇಲುಗೈ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯಭೇದಗಳನ್ನು, ಸಂಬಂಧಗಳ ತೊಡಕುಗಳನ್ನು, ಸಾಂಸಾರಿಕ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಹಬ್ಬಗಳು ನೆರವಾಗುತ್ತವೆ.

ನವರಾತ್ರಿಯ ಒಂಭತ್ತು ದಿನಗಳಲ್ಲಿ ಜಗತ್ತಿಗೆ ಕಂಟಕನಾಗಿದ್ದ ಮಹಿಷಾಸುರನೊಂದಿಗೆ ಹೋರಾಡಿ ಹತ್ತನೆಯ ದಿನದಂದು ಪಾಪಿ ರಾಕ್ಷಸನನ್ನು ಕೊಂದು ದೇವತಾದಿ ಮಾನವರಿಗೂ ನೆಮ್ಮದಿಯ ಬದುಕನ್ನು ಕಲ್ಪಿಸಿದ  ದಿನ, ವಿಜಯ ಪತಾಕೆಯನ್ನು ಹಾರಿಸಿ ವಿಜಯದಶಮಿ ಆಚರಿಸಿದ ದಿನ ಎನ್ನುವರು. ದುರ್ಗಾ ಮಾತೆಯ ಒಂದೊಂದು ರೂಪವನ್ನು ನವರಾತ್ರಿಯ ಒಂದೊಂದು ದಿನಕ್ಕೆ ಮೀಸಲಿಡಲಾಗಿದೆ. ಆ ಒಂಭತ್ತೂ ದಿನಗಳಲ್ಲಿ ದುರ್ಗಾಮಾತೆಯನ್ನು  ಆಯಾ ದಿನದ ರೂಪದಲ್ಲಿ ಸಿಂಗರಿಸಿ, ಪೂಜಿಸಿ ಹಬ್ಬವನ್ನು ಆಚರಿಸಲಾಗುತ್ತದೆ.

ನವರಾತ್ರಿಯ ಮಹಣ್ತೀ…
ಪ್ರಥಮ ದಿನದಂದು ದುರ್ಗಾಮಾತೆ “ಶೈಲಪುತ್ರಿ’ಯ ರೂಪ ಧರಿಸುತ್ತಾಳೆ. ಪರ್ವತರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲ ಪುತ್ರಿಯಾಗಿರುತ್ತಾಳೆ. ಇದು ಶಕ್ತಿಯಾಗಿ ಶಿವನ ಸತಿಯಾಗಿರುವ ರೂಪವೂ ಆಗಿದೆ. ಎರಡನೆಯ ದಿನದಂದು ದುರ್ಗಾಮಾತೆ “ಬ್ರಹ್ಮಚಾರಿಣಿ’ ರೂಪ ಧರಿಸುತ್ತಾಳೆ. ತನ್ನ ತಪ್ಪಿಗಾಗಿ ಪ್ರಾಯಶ್ಚಿತ್ತ ಪಡುವ ಈ ರೂಪ ಶಿವನ ಸರಿಯಾದ ಪಾರ್ವತಿಯ ಇನ್ನೊಂದು ರೂಪವೂ ಆಗಿದೆ. ಮೂರನೆಯ ದಿನದಂದು ದುರ್ಗಾಮಾತೆ “ಚಂದ್ರಘಂಟಾ’ ರೂಪವನ್ನು ಧರಿಸುತ್ತಾಳೆ. ಈ ರೂಪ ಸೌಂದರ್ಯ ಮತ್ತು ಧೈರ್ಯವನ್ನು ಬಿಂಬಿಸುತ್ತದೆ. ದಶ ಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ ಯುದ್ದ ಸನ್ನದ್ದಳಾಗಿರುವಂತೆ ಕಾಣುತ್ತಾಳೆ.

ನಾಲ್ಕನೆಯ ದಿನ ದುರ್ಗಾಮಾತೆ “ಕೂಷ್ಮಾಂಡ’ ಅಥವಾ “ಅಷ್ಟಭುಜಾದೇವಿ’ಯರ ರೂಪ ಧರಿಸುತ್ತಾಳೆ. ಪುರಾಣಗಳ ಪ್ರಕಾರ ತನ್ನ ಕಿಲ ಕಿಲ ನಗೆಯಿಂದಲೇ ಈಕೆ ವಿಶ್ವವನ್ನು ನಿರ್ಮಿಸಿದ ಕಾರಣ ವಿಶ್ವದ ಸೃಸ್ಟಿಕರ್ತನ ರೂಪದಲ್ಲಿ ಆರಾಧಿಸಲಾಗುತ್ತದೆ. ಆ ದಿನ ಆಕೆಗೆ ಪ್ರಿಯವಾದ ಬೂದು ಗುಂಬಳಕ್ಕೆ ಹೆಚ್ಚಿನ ಮಹತ್ವವಿದೆ. ತನ್ನ ಎಂಟು  ಕೈಗಳಲ್ಲಿ ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದಿದ್ದಾಳೆ.  ಐದನೆಯ ದಿನ ದುರ್ಗಾಮಾತೆ ನಾಲ್ಕು ಕೈಗಳ ಸಿಂಹದ ಮೇಲೆ ಕುಳಿತಿರುವಂತೆ “ಸ್ಕಂದಮಾತಾ’ ರೂಪವನ್ನು ಪಡೆಯುತ್ತಾಳೆ. ದೇವತೆಗಳ ಸೈನ್ಯದ ಸೇನಾಪತಿಯಾಗಿರುವ ಷಣ್ಮುಖ ಸ್ಕಂದನ ತಾಯಿಯಾಗಿರುವ ಕಾರಣ ಈ ಹೆಸರು ಬಂದಿದೆ.

ಆರನೆಯ ದಿನದಂದು ದುರ್ಗಾಮಾತೆ “ಕಾತ್ಯಾಯಿನಿ’ಯ ರೂಪ ಧರಿಸುತ್ತಾಳೆ. ನಾಲ್ಕು ಭುಜಗಳುಳ್ಳ ದುರ್ಗೆ ಸಿಂಹದ ಮೇಲೆ ಕುಳಿತಿದ್ದು, ಆಕೆಯ ವರ್ಣ ಬಂಗಾರದ್ದಾಗಿರುತ್ತದೆ. ಮುಖದಲ್ಲಿ ಮಂದಹಾಸವಿದ್ದು ಮೂರು ಕಣ್ಣುಗಳಿವೆ.ಎಡಬದಿಯ ಎರಡು ಕೈಗಳಲ್ಲಿ ಕಮಲ ಮತ್ತು ಖಡ್ಗ ಹಿಡಿದಿದ್ದು, ಬಲ ಎರಡೂ ಕೈಗಳು ಅಭಯವನ್ನು ಸೂಚಿಸುತ್ತದೆ. ಏಳನೆಯ ದಿನ ದುರ್ಗಾಮಾತೆ ತನ್ನ ಉಗ್ರರೂಪವಾದ “ಕಾಲರಾತ್ರಿ’ಯ ರೂಪವನ್ನು ಧರಿಸುತ್ತಾಳೆ. ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು “ಶುಭಂಕರೀ’ ಎಂದೂ ಕರೆಯುತ್ತಾರೆ. ಈ ರೂಪದಲ್ಲಿ ಆಕೆಯ ಬಣ್ಣ ಕಪ್ಪಾಗಿದ್ದು, ಕೆದರಿದ ನೀಳವಾದ ಕೂದಲು, ಹೊರಬಂದ ನಾಲಗೆ ನಾಲ್ಕು ಕೈಗಳಲ್ಲಿ ಬಲಗೈಯಲ್ಲಿ ಕಸಾಯಿಕತ್ತಿ ಮತ್ತು ದೀಪವನ್ನು ಹಿಡಿದಿದ್ದರೆ ಎಡಗೈಗಳು ಮುದ್ರೆಯ ರೂಪದಲ್ಲಿದ್ದು ಅಭಯವನ್ನು ಸೂಚಿಸುತ್ತದೆ.

ಎಂಟನೆಯ ದಿನ ದುರ್ಗಾಮಾತೆ “ಮಹಾಗೌರಿಯ’ ರೂಪ ಧರಿಸುತ್ತಾಳೆ. ಇದು ಆಕೆಯ ಅತ್ಯಂತ ಸೌಂದರ್ಯವತಿಯಾಗಿರುವ ರೂಪವಾಗಿದೆ. ಆಕೆಯ ಬಣ್ಣ ಹಿಮದಷ್ಟು ಬೆಳ್ಳಗಾಗಿದ್ದು, ಬಿಳಿಯ ಅಥವಾ ಹಸಿರು ಸೀರೆಯುಟ್ಟು ಎತ್ತಿನ ಮೇಲೆ ಆಸೀನಳಾಗಿದ್ದಾಳೆ. ನಾಲ್ಕು ಕೈ ಮತ್ತು ಮೂರು ಕಣ್ಣುಗಳಿರುವ ಈಕೆಯ ರೂಪದಲ್ಲಿ ಶಾಂತಿ ಮತ್ತು ಜ್ಞಾನವನ್ನು ಕಂಡುಕೊಳ್ಳಲಾಗುತ್ತದೆ. ಎಡಕೈಗಳಲ್ಲಿ ಢಮರುಗ ಮತ್ತು ವರದಮುದ್ರೆ ಇದ್ದರೆ ಮೇಲಿನ ಬಲಗೈಯಲ್ಲಿ ಅಭಯಮುದ್ರೆ ಕೆಳಗಿನ ಬಲಗೈಯಲ್ಲಿ  ತ್ರಿಶೂಲವಿದೆ. ಇವಳ ಆರಾಧನೆಯಿಂದ ಅಲೌಖೀಕ ಸುದ್ದಿಗಳ ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ.

ಒಂಭತ್ತನೆಯ ದಿನ ದುರ್ಗಾಮಾತೆಯನ್ನು “ಸಿದ್ದಿದಾತ್ರಿ’ ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲಾ ರೀತಿಯ ಸಿದ್ದಿಗಳನ್ನು ಕರುಣಿಸುವವಳಾದ್ದರಿಂದ ಈ ಹೆಸರು ಬಂದಿದೆ. ಸಿದ್ದಿದಾತ್ರಿಗೆ ನಾಲ್ಕು ಕೈಗಳಿವೆ. ಕಮಲ ಪುಷ್ಪದ ಮೇಲೆ ಕುಳಿತಿದ್ದು, ಚಕ್ರ, ಶಂಖ, ಗದೆ ಮತ್ತು ಕಮಲಪುಷ್ಪವನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಈ ರೂಪದಲ್ಲಿ ಆಕೆ ಕೆಂಪುಬಣ್ಣದ ಸೀರೆಯುಟ್ಟುಕೊಳ್ಳುವುದು ವಿಶೇಷವಾಗಿದೆ. ಹತ್ತನೆಯ ದಿನವೇ ವಿಜಯದಶಮಿ. ವಿಜಯದಶಮಿ ಆಚರಣೆಗೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಪಾಂಡವರು ತಮ್ಮ ಅಜ್ಞಾತವಾಸದ ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಬನ್ನಿಮರದಲ್ಲಿ ಇರಿಸಿದ್ದು, ಅನಂತರದಲ್ಲಿ ಬನ್ನಿಮರವನ್ನು ಪೂಜಿಸಿ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದು ಕೌರವರನ್ನು ಸೋಲಿಸಿ ವಿಜಯ ಸಾಧಿಸಿದ ದಿನವೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ವಿಜಯದ ಸಂಕೇತದ ಮುಂದುವರಿಕೆಯಾಗಿ ಇಂದಿಗೂ ವಿಜಯದಶಮಿಯ ದಿನ ಬನ್ನಿ ಮುಡಿಯುವ ಹಬ್ಬ ಹರ್ಷ ಉಲ್ಲಾಸಗಳಿಂದ ನಡೆಯುತ್ತಾ ಬಂದಿದೆ.

ನವರಾತ್ರಿ ವಿಭಿನ್ನ ರೀತಿಯಲ್ಲಿ ಆಚರಣೆ…
ಭಾರತದ ಬೇರೆ ಬೇರೆ ಗ್ರಾಮಗಳಲ್ಲಿಯೂ ಈ ದಸರಾ ಹಬ್ಬವನ್ನು ನವರಾತ್ರಿ, ದುರ್ಗಾಪೂಜೆ, ರಾಮಲೀಲೆ, ಕಾಳಿಕಾ ದೇವಿಪೂಜೆ ಎಂದು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಎಲ್ಲಾ ಉತ್ಸವಗಳು ಒಂದೇ ಅವಧಿಯಲ್ಲಿ ನಡೆಯುವ ಶಕ್ತಿ ಪೂಜೆಗಳೇ ಆಗಿವೆ. ಚಾಮುಂಡಿ, ಕಾಳಿ, ದುರ್ಗೆ, ಮಹಿಷಾಸುರಮರ್ದಿನಿ ಮುಂತಾದ ದೇವತೆಗಳಿಂದ ದುಷ್ಟ ಸಂಹಾರವೇ ಎಲ್ಲಾ ಪೂಜೆಗಳ ಆಚರಣೆಗಳ ಆಶಯವಾಗಿದೆ. ದುಃಖ ದಾರಿದ್ರÂಗಳ ನಿವಾರಣೆ, ಸಿರಿ ಸಂಪತ್ತುಗಳ ಸಮೃದ್ದಿಗಾಗಿ, ಬುದ್ದಿ ವಿವೇಕಗಳ ವರ್ಧನೆಗಾಗಿ ಎಂಟನೇ ದಿನ ಸರಸ್ವತಿ ಪೂಜೆ, ಒಂಭತ್ತನೇ ದಿನ ಆಯುಧಪೂಜೆ, ಹತ್ತನೇ ದಿನ ಶಕ್ತಿ ಲಕ್ಷ್ಮೀಯರ ಪೂಜೆಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾವಣ ಕುಂಭ ಕರ್ಣಾದಿಗಳ ಬೃಹತ್‌ ಗಾತ್ರದ ಬೊಂಬೆಗಳನ್ನು ಸಿಡಿಮದ್ದುಗಳಿಂದ ಅಗ್ನಿಗೆ ಆಹುತಿಮಾಡಿ ರಾಮಲೀಲಾ ಉತ್ಸವವನ್ನು ಸಡಗರದಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಗಾತ್ರದ ಸುಂದರವಾದ ಕಾಳಿಕಾದೇವಿಯ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಿ ಬಣ್ಣದಿಂದ ಸಿಂಗರಿಸಿ ಅತ್ಯಂತ ಆಕರ್ಷಕವಾದ ಮಂಟಪದಲ್ಲಿ ಸ್ಥಾಪಿಸಿ ಒಂಭತ್ತು ದಿನಗಳ ಪೂಜೆಯಾದ ಅನಂತರ ಆಕರ್ಷಕ ಮೆರವಣಿಗೆ ಮೂಲಕ ಕೆರೆ-ನದಿಗಳಲ್ಲಿ ವಿಸರ್ಜನೆ ಮಾಡುತ್ತಾರೆ.

ಇನ್ನೊಂದು ವಿಶೇಷವೆಂದರೆ ದಾಂಡಿಯಾ ರಾಸ್‌…
ದಾಂಡಿಯಾ ಅಥವಾ ಗರ್ಭಾ ನೃತ್ಯ ನವರಾತ್ರಿ ಸಂದರ್ಭದಲ್ಲಿ ವಿಶೇಷತೆಯಾಗಿದೆ. ಜಡತ್ವದಲ್ಲಿರುವ ದುರ್ಗೆ ಯನ್ನು ಚುರುಕುಗೊಳಿಸುವ ಉದ್ದೇಶ ಇದರ ಹಿಂದೆ ಇದೆ ಎಂಬ ನಂಬಿಕೆ ಇದೆ. 2 ಅಥವಾ 3ರಂತೆ ಲಯಬದ್ಧವಾಗಿ ಚಪ್ಪಾಳೆ ಬಡಿಯುತ್ತಾರೆ. ಬ್ರಹ್ಮ, ವಿಷ್ಣು ಮಹೇಶ್ವರನ ಸಂಕೇತವೂ ಹೌದು. ಈ ತ್ರಿಮೂರ್ತಿಗಳು ದುರ್ಗೆಯಲ್ಲಿ ಶಕ್ತಿಯ ಆವಾಹನೆಯನ್ನು ಅವಳು ವಿಶೇಷವಾದ ಶಕ್ತಿಯನ್ನು ಪಡೆಯುವಂತೆ ಮಾಡುತ್ತಾರೆ ಎಂಬ ಪ್ರತೀತಿಯಿದೆ. ಇಚ್ಛಾಶಕ್ತಿ, ಕ್ರಿಯಾಶಕ್ತಿ, ಧ್ಯಾನವೂ ಗರ್ಭಾದ ಸಂಕೇತವಾಗಿದೆ. ಈ ಮೂರು ಶಕ್ತಿಗಳು ಸೇರಿ ದುರ್ಗೆಯನ್ನು ಮಹಿಷಾಸುರನನ್ನು ವಧಿಸಲು ಸಿದ್ಧಗೊಳಿಸುವುದು ಇದರ ಹಿನ್ನೆಲೆ. ದೇವಿಯ ಆರತಿಯ ಅನಂತರ ಸಾಮಾನ್ಯವಾಗಿ ದಾಂಡಿಯಾ ರಾಸ್‌  ಆರಂಭವಾಗುತ್ತದೆ. ಇಲ್ಲಿ ಬಳಸುವ ಕೋಲು ದೇವಿಯು ಯುದ್ದಸನ್ನದ್ದಳಾಗಿ ಮಹಿಷಾಸುರನೊಂದಿಗೆ ಯುದ್ಧದ ಸಮಯದಲ್ಲಿ ಉಪಯೋಗಿಸುವ ಖಡ್ಗದ ಪ್ರತೀಕ ಎಂಬ ನಂಬಿಕೆ ಇದೆ. ವಿಜಯ ದಶಮಿಯಂದು ಶುಭ ಕಾರ್ಯಗಳ ಪ್ರಾರಂಭ ಹೊಸ ಉದ್ಯಮ, ಉದ್ಯೋಗಗಳ ಮುಹೂರ್ತ ಮುಂತಾಗಿ  ಆಚರಿಸಲಾಗುತ್ತದೆ.

ಭಕ್ತಿಪ್ರಧಾನವಾಗಿರುವ ಈ ಎಲ್ಲಾ ಸಂಪ್ರದಾಯಗಳು ಆಧುನಿಕತೆಯ ಲೇಪವನ್ನು ಹಚ್ಚಿ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಸುಳ್ಳಲ್ಲ. ದಿನಕ್ಕೊಂದು ಬಣ್ಣ ದೇವಿಯ ಅಲಂಕಾರದಲ್ಲಿ ಕಾಣುತ್ತಿದ್ದವು. ಆದರೆ ಇಂದು ಯುವತಿಯರು, ಮಹಿಳೆಯರು ಮಾತ್ರವಲ್ಲ ಯುವಕರೂ ಬಣ್ಣದ ಹಿಂದೆ ಬಿದ್ದಿರುವುದರನ್ನು ಕಾಣಬಹುದು. ಒಟ್ಟಾರೆಯಾಗಿ ಮನುಷ್ಯನಿಗೆ ಅಗತ್ಯವಾಗಿ ಬೇಕಾದ ವಿದ್ಯೆ, ಬುದ್ಧಿ, ಸತ್ಯ, ಶಾಂತಿ, ಧನ-ಧಾನ್ಯಗಳ ಸಂಪತ್ತು ದೊರೆತು ಸರ್ವ ಸುಖೀಗಳಾಗಿರುವಂತೆ ದೇವರು ಹರಸಲಿ ಎಂಬ ಶುಭ ಹಾರೈಕೆ. 

ಭಾರತೀಯ ಹಬ್ಬಗಳಲ್ಲಿ ಪ್ರಮುಖವಾಗಿ  ನವರಾತ್ರಿ ಹಬ್ಬಕ್ಕೆ ಬಹಳಷ್ಟು ವಿಶೇಷತೆಯಿದೆ. ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ  ನವರಾತ್ರಿ ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಆದರೆ ಈ ಒಂಭತ್ತು ದಿನಗಳ ಮಹತ್ವ ಬೇರೆ ಬೇರೆಯಾಗಿದೆ. ನವರಾತ್ರಿಯನ್ನು  ವರ್ಷದಲ್ಲಿ ನಾಲ್ಕು ಸಲ ಆಚರಿಸಲಾಗುತ್ತದೆ. ಆಷಾಢ ನವರಾತ್ರಿ, ಶರನ್ನವರಾತ್ರಿ, ಮಹಾನವರಾತ್ರಿ, ವಸಂತ ನವರಾತ್ರಿ. ಒಟ್ಟಿನಲ್ಲಿ  ನವರಾತ್ರಿ ಹಬ್ಬ ದುರ್ಗಾಮಾತೆಗೆ ಮೀಸಲಾಗಿರುವ ಹಬ್ಬವಾಗಿದೆ. 

ಪೇತ್ರಿ ವಿಶ್ವನಾಥ ಶೆಟ್ಟಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.