ಸಿದ್ದರಾಮಯ್ಯ ಕರೆತಂದ ಕೃಷ್ಣ ಕ್ಷಮಾರ್ಹರಲ್ಲ’ 


Team Udayavani, Feb 1, 2017, 3:40 AM IST

JAFFER-SHARIEF-600.jpg

ಮುತ್ಸದ್ಧಿ ರಾಜಕಾರಣಿ ಎಂದೇ ಬಿಂಬಿತವಾಗಿದ್ದ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ  ಕಾಂಗ್ರೆಸ್‌ ಪಕ್ಷಕ್ಕೆ ವಿದಾಯ ಹೇಳಿದ ನಂತರ ಪಕ್ಷದಲ್ಲಿ ಹಿರಿಯ ನಾಯಕರು ಒಬ್ಬೊಬ್ಬರಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೇರೆ ಬೇರೆ ಕಾರಣಗಳಿಗೆ ಬೇಸರಗೊಂಡಿದ್ದ ಹಿರಿಯ ಕಾಂಗ್ರೆಸ್ಸಿಗರು ಇದೀಗ ಘರ್ಜಿಸತೊಡಗಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ಸಿಗರ ಸಾಲಿಗೆ ಸೇರಿದ ಜನಾರ್ಧನ ಪೂಜಾರಿ, ಸಿ.ಕೆ.ಜಾಫ‌ರ್‌ ಷರೀಫ್ ಸಹ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿನ ಸದ್ಯದ ಬೆಳವಣಿಗೆಗಳ ಬಗ್ಗೆ ‘ಉದಯವಾಣಿ’ ಜತೆ ಕೇಂದ್ರದ ಮಾಜಿ ಸಚಿವರೂ ಆದ ಹಿರಿಯ ಕಾಂಗ್ರೆಸ್ಸಿಗ, ಸಿ.ಕೆ.ಜಾಫ‌ರ್‌ ಷರೀಫ್ ಮನದಾಳದ ಮಾತು ಹಂಚಿಕೊಂಡಿದ್ದಾರೆ. 

ಕೃಷ್ಣ ಅವರು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ತಪ್ಪು ಮಾಡಿದ್ರಾ?
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕೃಷ್ಣ ಅವರೇ ಕರೆದುಕೊಂಡು ಬಂದಿದ್ದರೆ, ಅವರು ಕ್ಷಮೆಗೆ ಅರ್ಹರಲ್ಲ. ಕೃಷ್ಣ ಕೂಡ ವಲಸೆ ಬಂದವರು. ಅವರು ಮತ್ತೂಬ್ಬರನ್ನು ವಲಸೆ ಕರೆತರುವ ಅಗತ್ಯ ಏನಿತ್ತು. ಕಾಂಗ್ರೆಸ್‌ ಪಕ್ಷದಲ್ಲಿ ಯಾರೂ ಬೇರೆ ನಾಯಕರು ಇರಲಿಲ್ಲವಾ? ನಾವು ಸಿದ್ದರಾಮಯ್ಯ ಅವರನ್ನು ವಿಶ್ವನಾಥ ಹಾಗೂ ಎಚ್‌.ಎಂ. ರೇವಣ್ಣ ಕರೆತಂದರು ಎಂದುಕೊಂಡಿದ್ದೆವು. ಕೃಷ್ಣ ಅವರು ಹೇಳಿದ್ದು ಕೇಳಿ ನನಗೆ ಆಶ್ಚರ್ಯ ಆಗಿದೆ.

ನೀವು ಹಿರಿಯ ಕಾಂಗ್ರೆಸ್ಸಿಗರು. ಪಕ್ಷದಲ್ಲಿ ಏನಾಗುತ್ತಿದೆ?
ನಿಮಗೆ ಗೊತ್ತಿದೆಯಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದಲ್ಲಿದ್ದ ಹಲವಾರು ಹಿರಿಯರು ಪಕ್ಷ ಬಿಟ್ಟಿದ್ದಾರೆ. ಮತ್ತಷ್ಟು ನಾಯಕರು ಏನು ಮಾಡಬೇಕು ಎಂಬ ಚಿಂತನೆಯಲ್ಲಿದ್ದಾರೆ. ಒಟ್ಟಾರೆ, ಪಕ್ಷದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಕಾಂಗ್ರೆಸ್‌ನ ಬಗ್ಗೆ ನೈಜ ಕಾಳಜಿ ಮತ್ತು ಪ್ರೀತಿಯುಳ್ಳವರಿಗೆ ಇದು ಅರ್ಥವಾಗುತ್ತದೆ.

ಕೃಷ್ಣ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವಾಗ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಅಂತ ಹೇಳಿದ್ದಾರೆ. ನಿಮಗೂ ಹಾಗೆ ಅನಿಸುತ್ತಿದೆಯಾ?
ಸದ್ಯ ನಮ್ಮ ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾವೂ ಸಾಕಷ್ಟು ಅಧಿಕಾರ ಅನುಭವಿಸಿದ್ದೇವೆ. ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳದಿದ್ದರೆ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ, ಬೇಸರ ಆಗುತ್ತದೆ. ಎಲ್ಲರೂ ಪಕ್ಷಕ್ಕಾಗಿ ದುಡಿದು ಮುಖ್ಯಮಂತ್ರಿ ಆಗುತ್ತಾರೆ. ನನಗೆ ಸಿದ್ದರಾಮಯ್ಯನವರ ಬಗ್ಗೆ ಅಸಮಾಧಾನ ಇಲ್ಲ. ಅಧಿಕಾರಕ್ಕೆ ಬಂದವರು ಹಿರಿಯರ ಕಡೆಗೆ ಗಮನ ಕೊಡಬೇಕು. ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ನಾವೇನು ಅಧಿಕಾರ ಕೊಡಿ ಅಂತ ಕೇಳುವುದಿಲ್ಲ. ಅಗತ್ಯ ಸಲಹೆ ಇದ್ದರೆ ಕೊಡುತ್ತೇವೆ. ನಾನು ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೆ. ಆದರೆ, ಇನ್ನೂ ಅವರು ಸಮಯ ಕೊಟ್ಟಿಲ್ಲ.ಅವರಿಗೆ ಅಧಿಕಾರದ ಒತ್ತಡ ಹೆಚ್ಚಿರಬಹುದು. 

ಎಸ್‌.ಎಂ. ಕೃಷ್ಣ  ಪಕ್ಷ ಬಿಡುವ ತೀರ್ಮಾನ ಮಾಡುವಲ್ಲಿ ಅವಸರ ಮಾಡಿದರು ಅನಿಸುತ್ತಾ? 
ಕೃಷ್ಣ ಅವರು ಪ್ರಜಾ ಸೋಶಲಿಸ್ಟ್‌ ಪಾರ್ಟಿಯಿಂದ ಕಾಂಗ್ರೆಸ್‌ಗೆ ಬಂದವರು. ಕೆ.ಎಚ್‌.ರಂಗನಾಥ ಮತ್ತು ಎಸ್‌.ಎಂ.ಕೃಷ್ಣ ಅವರಿಗೆ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ನಾನೇ ಕಾಂಗ್ರೆಸ್‌ ಪಕ್ಷದ ಸದಸ್ಯತ್ವದ ರಸೀದಿ ಕೊಟ್ಟಿದ್ದೆ. ಅದರ ನೆನಪು ನನಗಿದೆ. ಅವರು ಕಾಂಗ್ರೆಸ್‌ನಲ್ಲಿ ಎಲ್ಲ ಅಧಿಕಾರ ಅನುಭವಿಸಿದ್ದಾರೆ. ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಅವರಿಗೆ ಯಾರ ವಿರುದ್ಧ ಅಸಮಾಧಾನ ಇತ್ತು ಅನ್ನೋದನ್ನ ಬಹಿರಂಗ ಪಡಿಸಬೇಕಿತ್ತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವಾಗಲೂ ಇವರನ್ನು ಕರೆದು ಮಾತನಾಡಿಸುತ್ತಾರೆ. ಸ್ಥಳೀಯ ನಾಯಕರ ಬಗ್ಗೆ ಅಸಮಾಧಾನ ಇದ್ದರೆ, ಅದನ್ನು ಹೈ ಕಮಾಂಡ್‌ ಜೊತೆ ಹೇಳಿಕೊಳ್ಳಬಹುದಿತ್ತು. ಜೊತೆಗೆ ಚರ್ಚಿಸಿ ಬಗೆ ಹರಿಸಿಕೊಳ್ಳಬಹುದಿತ್ತು. ಸಿದ್ದರಾಮಯ್ಯ ಅವರನ್ನು ತಾವೇ ಕರೆದುಕೊಂಡು ಬಂದಿದ್ದೇವೆ ಎಂದು ಕೃಷ್ಣ ಅವರು ಹೇಳಿದ್ದಾರೆ. ಹಾಗಿದ್ದರೆ ಅವರ ಮೇಲೇಕೆ ಇವರಿಗೆ ಅಸಮಾಧಾನವಿದೆ ಅನ್ನೋದು ಗೊತ್ತಾಗುತ್ತಿಲ್ಲ. 

ಹೆಬ್ಟಾಳ ಉಪಚುನಾವಣೆಯಲ್ಲಿ ನಿಮ್ಮ ಮೊಮ್ಮಗನ ಸೋಲಿಗೆ ಯಾರು ಕಾರಣ?
ನನ್ನ ಮೊಮ್ಮಗನ ಸೋಲಿಗೆ ದೇವೇಗೌಡ ಅವರೇ ಕಾರಣ. ಅವರ ಸ್ವಜಾತಿಯ ಮೋಹದಿಂದ ನನ್ನ ಮೊಮ್ಮಗನನ್ನು ಸೋಲಿಸಿದರು. ಐವತ್ತು ವರ್ಷದಿಂದ ಕಾಂಗ್ರೆಸ್‌ನಲ್ಲಿರುವ ನಮ್ಮ ಮನೆಯ ಒಬ್ಬ ಹುಡುಗ ರಾಜಕೀಯದಲ್ಲಿ ಮೇಲೆ ಬರಬಾರದೇ ಅಂತ ನಾನು ನನ್ನ ಮೊಮ್ಮಗನಿಗೆ ಟಿಕೆಟ್‌ ಕೇಳಿದೆ. ಹೈಕಮಾಂಡ್‌ ಅದಕ್ಕೆ ಸಮ್ಮತಿ ಸೂಚಿಸಿ, ನನ್ನ ಮೊಮ್ಮಗನನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿತು. ಅದಕ್ಕೆ ಪ್ರತಿಯಾಗಿ ದೇವೇಗೌಡರೂ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರು. ಕೊನೆ ಗಳಿಗೆಯಲ್ಲಿ ಒಕ್ಕಲಿಗರಿಗೆಲ್ಲ ಬಿಜೆಪಿಗೆ ಮತ ಹಾಕುವಂತೆ ದೇವೇಗೌಡರೇ ಹೇಳಿ, ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾರಣವಾದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ನಿಮಗೆ ಏನನ್ನಿಸುತ್ತದೆ ?
ಸಿದ್ದರಾಮಯ್ಯ ಹಿಂದುಳಿದ ವರ್ಗದಿಂದ ಬಂದಿರುವ ವ್ಯಕ್ತಿ. ಆಡಳಿತದಲ್ಲಿ ವಿಕೇಂದ್ರಿಕರಣ ಮಾಡಿರುವುದು ಉತ್ತಮ ಕೆಲಸ. ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿರುವುದು ಒಳ್ಳೆಯ ಕೆಲಸ. ಈಗಿನ ಆಡಳಿತ ನೋಡಿದರೆ, ಇದು ಕಾಂಗ್ರೆಸ್‌ ಸರ್ಕಾರ ಅನಿಸುತ್ತಿಲ್ಲ. ಕುರುಬರ ಸರ್ಕಾರ ಅಂತ ಅನಿಸುತ್ತಿದೆ. 

ನಿಮ್ಮ ಮಾತಿನ ಅರ್ಥ ಸಿದ್ದರಾಮಯ್ಯ ಒಂದು ಸಮುದಾಯಕ್ಕೆ ಸೀಮಿತವಾಗಿದ್ದಾರಾ?
ಹೌದು, ಈಗಿನ ಬೆಳವಣಿಗೆ ನೋಡಿದರೆ ಹಾಗೆ ಅನ್ನಿಸುತ್ತದೆ. ಆದರೆ, ಸಿದ್ದರಾಮಯ್ಯ ಬರುವ ಮುಂಚೆಯೂ ಕಾಂಗ್ರೆಸ್‌ನಲ್ಲಿ ಆ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಎಂ.ಟಿ.ಬಿ.ನಾಗರಾಜ್‌ ಅವರನ್ನು ಶಾಸಕರನ್ನಾಗಿ ಮಾಡಿದ್ದು, ಯಾರು? ಆವಾಗ ಈ ಸಿದ್ದರಾಮಯ್ಯ ಎಲ್ಲಿದ್ದರು? ಎಚ್‌.ವಿಶ್ವನಾಥ್‌ ಬಗ್ಗೆ ನನಗೆ ನಂಬಿಕೆ ಇಲ್ಲಾ. ಆವರು ತಮ್ಮ ಸಮುದಾಯದವರನ್ನು ಬಿಟ್ಟು ಬೇರೆ ಯಾರಿಗೂ ಸಹಾಯ ಮಾಡಿದ್ದು ನೋಡಿಲ್ಲ. ಮಾಗಡಿಯಲ್ಲಿ ಕಾರ್ಯಕರ್ತನಾಗಿದ್ದ ಎಚ್‌.ಎಂ. ರೇವಣ್ಣ ಅವರನ್ನು ಕೃಷ್ಣ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವೇ. 

ಹಿಂದಿನ ಚುನಾವಣೆಯಲ್ಲಿ ನೀವೂ ದೇವೇಗೌಡರ ಜೊತೆ ಹೋಗೋದಕ್ಕೆ ರೆಡಿಯಾಗಿದ್ದೀರಲ್ಲಾ? 
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ನನಗೂ ಬೇಸರ ಆಗಿತ್ತು. ದೇವೇಗೌಡರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು. ಅದರಂತೆ ಅವರೊಂದಿಗೆ ಮಾತಕತೆಯೂ ನಡೆಯಿತು. ನಾನು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕೊಡಿ ಅಂತ ಕೇಳಿದೆ. ಆದ್ರೆ, ಅವರು ಅದಕ್ಕೆ ಒಪ್ಪಲಿಲ್ಲ. ಅವರು ಮೈಸೂರಿನಿಂದ ಸ್ಪರ್ಧಿಸುವಂತೆ ಹೇಳಿದರು. ನನಗೆ ಇಷ್ಟ ಇರಲಿಲ್ಲ. ಹೀಗಾಗಿ ನಾನು ದೇಶದಲ್ಲಿ ಇರೋದೆ ಬೇಡ ಅಂತ ಮೆಕ್ಕಾಗೆ ಹೋದೆ. ಆಗ ನನಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್‌ ಕೂಡ ಫೋನ್‌ ಮಾಡಿದ್ದರು. ನಾವು ನಿಮಗೋಸ್ಕರ ಕಾಯುತ್ತಿದ್ದೇವೆ ಎಂದು ಹೇಳಿದರು. ಆಗ ನಾನು ಮೆಕ್ಕಾದಲ್ಲಿದ್ದೆ. ಬಿಜೆಪಿಯ ಸಿದ್ದಾಂತ ನನಗೆ ಹೊಂದಾಣಿಕೆ ಆಗುವುದಿಲ್ಲ ಅಂತ ನಾನು ಬರುವುದಿಲ್ಲ ಅಂತ ಹೇಳಿದೆ. 

ಈಗ ಯಾವುದಾದರೂ ಪಕ್ಷದಿಂದ ಆಹ್ವಾನ ಬಂದರೆ ಹೋಗುತ್ತೀರಾ ? 
ಇಲ್ಲಾ, ನನಗೆ ಯಾವುದೇ ರಾಜಕೀಯ ಪಕ್ಷಕ್ಕೆ ಹೋಗಲು ಮನಸಿಲ್ಲ. ನಾನು ಹುಟ್ಟಾ ಕಾಂಗ್ರೆಸ್ಸಿಗ, 1942ರ ಕ್ವಿಟ್‌ ಇಂಡಿಯಾ ಚಳವಳಿಯಿಂದ ನಾನು ಕಾಂಗ್ರೆಸ್‌ ಸೇರಿಕೊಂಡಿದ್ದೇನೆ. ನಾನು ಕಾಂಗ್ರೆಸ್‌ನಲ್ಲಿಯೇ ರಾಜಕೀಯ ಆರಂಭಿಸಿದ್ದು, ಇದೇ ಕಾಂಗ್ರೆಸ್‌ನಲ್ಲಿಯೇ ಸಾಯುತ್ತೇನೆ. ಕಾಂಗ್ರೆಸ್‌ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಂದಿರಾಗಾಂಧಿಯವರು ಮಂಡ್ಯದಿಂದ ವಾಪಸ್‌ ಬರುವಾಗ ಚೆನ್ನಪಟ್ಟಣದಲ್ಲಿ ಗಾಡಿಯಲ್ಲಿ ಹೋಗುತ್ತಿದ್ದಾಗ, ಕನಕಪುರ ಕ್ಷೇತ್ರಕ್ಕೆ ಜಾಫ‌ರ್‌ ಷರೀಫ್ ಅಭ್ಯರ್ಥಿ ಅಂತ ಹೇಳಿದರು. ಆಗ ನನಗೆ ಆಶ್ಚರ್ಯ ಆಗಿತ್ತು. ಇಂದಿರಾ ಗಾಂಧಿಯವರು ಮನೆಗೆ ಬಂದಾಗ  ನನ್ನ ಪತ್ನಿ ಅವರ ಮುಂದೆ ನಮ್ಮ ಯಜಮಾನ್ರು ಪಕ್ಷದಲ್ಲಿ ದುಡಿಯುತ್ತಿದ್ದಾರೆ, ಯಾವುದೇ ಹುದ್ದೆ ಇಲ್ಲಾ ಅಂತ ಹೇಳಿದ್ದಳು. ಅದನ್ನೇ ಮನಸ್ಸಲ್ಲಿಟ್ಟುಕೊಂಡು ನನಗೆ ಕನಕಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದರು. ಅಲ್ಲಿಂದ 33 ವರ್ಷಗಳ ಕಾಲ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಒಂಬತ್ತು ವರ್ಷ ಕೇಂದ್ರದಲ್ಲಿ ರೈಲ್ವೆ ಸಚಿವನಾಗಿ, ಎರಡು ವರ್ಷ ನೀರಾವರಿ ಸಚಿವನಾಗಿ ಕೆಲಸ ಮಾಡಿದ್ದೇನೆ. 

ಹಿಂದಿನ ಯುಪಿಎ ಸರ್ಕಾರದಲ್ಲಿ ನಿಮ್ಮನ್ನು ರಾಜ್ಯಪಾಲರ ನ್ನಾಗಿ ಮಾಡುತ್ತಾರೆ ಎನ್ನುವ ಪ್ರಸ್ತಾಪ ಇತ್ತು ನಿಜಾನಾ?
ಆಗ ಸೋನಿಯಾ ಗಾಂಧಿಯವರು ನನ್ನನ್ನು ರಾಜ್ಯಪಾಲರನ್ನಾಗಿ ಮಾಡಲು ಆಹ್ವಾನ ನೀಡಿದ್ದರು. ನನ್ನ ಪತ್ನಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ನಾನು ಆ ಸಂದರ್ಭದಲ್ಲಿ ಆ ಹುದ್ದೆಯನ್ನು ತಿರಸ್ಕರಿಸಿದ್ದೆ. ನಂತರ ಸೌದಿ ಅರೇಬಿಯಾಕ್ಕೆ ರಾಯಭಾರಿಯನ್ನಾ ಮಾಡುವುದಾಗಿ ಹೇಳಿದ್ದರು. ನಾನು ಅದನ್ನೂ ನಿರಾಕರಿಸಿದೆ. 

ರಾಹುಲ್‌ ಗಾಂಧಿ ಅವರ ಕಾರ್ಯ ವೈಖರಿಯ ಬಗ್ಗೆ ನಿಮಗೆ ಏನನ್ನಿಸುತ್ತದೆ?
ರಾಹುಲ್‌ ಗಾಂಧಿಯ ಕಾರ್ಯ ವೈಖರಿಗೆ ಬೇಸರ ವ್ಯಕ್ತಪಡಿಸುವವರೆಲ್ಲಾ ಅವರನ್ನು ರಾಜಕೀಯ ಮುಂಚೂಣಿಗೆ ಕರೆದುಕೊಂಡು ಬಂದವರೇ. ಈಗ ಅವರ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕಿದರೆ ಏನು ಬಂತು. 

ಕೆಪಿಸಿಸಿಗೆ ಹೊಸ ಅಧ್ಯಕ್ಷರ ಅಗತ್ಯ ಇದೆಯಾ? 
ಪರಮೇಶ್ವರ್‌ ಎರಡು ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಗೃಹ ಸಚಿವರಾಗಿ, ಪಕ್ಷ ಮುಂದಿನ ಚುನಾವಣೆ ಎದುರಿಸಬೇಕಾದರೆ, ಪಕ್ಷಕ್ಕೆ ಸ್ವತಂತ್ರ ಅಧ್ಯಕ್ಷರು ಬೇಕಾಗುತ್ತಾರೆ. ದಿನೇಶ್‌ ಗುಂಡೂರಾವ್‌ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರಿಗೆ ಎಷ್ಟು ಅಧಿಕಾರ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅವರು ರಾಜ್ಯ ಪ್ರವಾಸ ಮಾಡಿ, ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. 

ಸದ್ಯದ ಪರಿಸ್ಥಿತಿ ನೋಡಿದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಅನಿಸುತ್ತಿದೆಯಾ ನಿಮಗೆ?
ಸದ್ಯದ ಪರಿಸ್ಥಿತಿಯಲ್ಲಿ ಸಂಪೂರ್ಣ ಬಹುಮತ ಬರುವುದರ ಬಗ್ಗೆ ಹೇಳುವುದು ಕಷ್ಟ. ಇನ್ನೂ ಒಂದು ವರ್ಷ ಅವಕಾಶ ಇದೆ. ಸರ್ಕಾರ ಮಾಡಿರುವ ಕೆಲಸವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೆ, ಜಯ ಸಿಗಬಹುದು. ಆದರೆ, ಮುಂದಿನ ಬಾರಿ ಕಾಂಗ್ರೆಸ್‌ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ, ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು ಅಂತ ಒತ್ತಾಯ ಮಾಡ್ತಿನಿ. ಮೊದಲಿನಿಂದಲೂ ನಾನು ಅದನ್ನೇ ಹೇಳುತ್ತಿದ್ದೇನೆ. ಇಂದಿರಾಗಾಂಧಿ ಅವರೇ ಕರ್ನಾಟಕದಲ್ಲಿ ಬಸಲಿಂಗಪ್ಪ ಅವರನ್ನು ಆವಾಗಲೇ ಮುಖ್ಯಮಂತ್ರಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದರು. ಅದು ಕಾರಣಾಂತರದಿಂದ ಆಗಲಿಲ್ಲ. ಅವರ ಆಸೆಯಂತೆ ರಾಜ್ಯದಲ್ಲಿ  ದಲಿತ ಮುಖ್ಯಮಂತ್ರಿಯಾಗಬೇಕು. 

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ, ಅವರು ಮುಂದಿನ ಬಾರಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡ್ತಾರಾ?
ಕಾಂಗ್ರೆಸ್‌ ಪಕ್ಷ ಏನು ಸಿದ್ದರಾಮಯ್ಯನ ಆಸ್ತಿಯೇ? ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅಂತ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಜನರು ಆಯ್ಕೆ ಮಾಡಿದ ಶಾಸಕರು ನಿರ್ಧಾರ ಮಾಡುತ್ತಾರೆ. ಒಂದು ವೇಳೆ, ಶಾಸಕರೆಲ್ಲ ಮತ್ತೆ ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿಯಾಗಬೇಕು ಅಂತ ನಿರ್ಧಾರ ಮಾಡಿದರೆ, ಅವರಂತ ಅದೃಷ್ಟವಂತ ಯಾರೂ ಇಲ್ಲ. 

ನಿಮಗೆ ಅಧಿಕಾರ ಬೇಡ ಅಂತೀರಾ, ಮತ್ತೆ ಬೇಸರಾ ಇದೆ ಅಂತೀರಾ, ಆಡಳಿತ ನಡೆಸೋರು ಏನ್‌ ಮಾಡಬೇಕು?
ನಮಗೇನು ಕೊಡಬೇಕಾಗಿಲ್ಲಾ, ಮನೆಯಲ್ಲಿ ಹಿರಿಯರು ಅಂತ ಇದ್ದಾಗ ಅವರ ಸಲಹೆ ಸೂಚನೆ ಪರಿಗಣಿಸಬೇಕು ಅನ್ನೋದಷ್ಟೆ ನಮ್ಮ ಬಯಕೆ. ಈಗ ಅಧಿಕಾರ ಅನುಭವಿಸುವವರಿಗೆ ಅವರ ಅಧಿಕಾರ ಹೋದ ಮೇಲೆ ಅವರಿಗೂ ಇದೇ ಗತಿ ಬರುತ್ತದೆ. ನಾನು ಕೇಂದ್ರ ಸಚಿವನಾಗಿದ್ದಾಗ ಇಂತವರು ಎಷ್ಟು ಜನ ಮುಖ್ಯಮಂತ್ರಿಗಳು ಬಂದು ನನ್ನ ಬಳಿ ಬಂದು ನಿಲ್ಲುತ್ತಿದ್ದರು. ಅಧಿಕಾರ ಇದ್ದಾಗ ಎಲ್ಲರನ್ನೂ ಗೌರವಿಸಬೇಕು. ಅವರು ನಮ್ಮನ್ನು ಪರಿಗಣಿಸುತ್ತಾರೆ ಅನಿಸುತ್ತಿಲ್ಲ. ಇದು ಮುಂದಿನ ಪೀಳಿಗೆಗೂ ಮುಂದುವರೆದರೆ, ಒಳ್ಳೆಯ ಬೆಳವಣಿಗೆಯಲ್ಲ. ಪಕ್ಷಕ್ಕೂ ಒಳ್ಳೆಯದಲ್ಲ. 

– ಜಾಫ‌ರ್‌ ಷರೀಫ್ ; ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ಸಿಗ
– ಸಂದರ್ಶನ: ಶಂಕರ ಪಾಗೋಜಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.