ಕೃಷಿ ಲಾಭದ ಮೂಲಕ ಬದುಕು ಹಸನು ಉದ್ದೇಶ: ಸಿದ್ದರಾಮಯ್ಯ


Team Udayavani, Oct 23, 2017, 7:27 AM IST

23-4.jpg

ಬೆಳ್ತಂಗಡಿ: ಕೃಷಿಯನ್ನು ಲಾಭ ದಾಯಕವಾಗಿಸಿ, ಗ್ರಾಮೀಣ ಜನರ ಬದುಕು ಹಸನಾಗಬೇಕೆಂಬುದೇ ಸರಕಾರ ಹಾಗೂ ಧರ್ಮಸ್ಥಳ ಯೋಜನೆಯ ಉದ್ದೇಶ. ಸರಕಾರದ ಕಾರ್ಯಕ್ರಮದ ಯಶಸ್ಸಿನಲ್ಲಿ ಜನರ ಪಾಲ್ಗೊಳ್ಳು ವಿಕೆ ಅವಶ್ಯ. ಆಗ ನಿಜ ಅರ್ಥದ ಪ್ರಜಾ ಪ್ರಭುತ್ವ ಅಸ್ತಿತ್ವದಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ರವಿವಾರ ಸಂಜೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಕಳೆದ ಮೂರು ವರ್ಷಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2 ಲಕ್ಷ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ವ್ಯವಹಾರದಲ್ಲಿ ಗಳಿಸಿದ 201 ಕೋ.ರೂ.ಗಳ ಲಾಭಾಂಶವನ್ನು ವಿತರಿಸಿ ಮಾತನಾಡಿದರು. ಮಂಜುನಾಥನ ದಯೆಯಿಂದ ಮಳೆ ಮಂಜುನಾಥನ ದಯೆಯಿಂದ ಈ ಬಾರಿ ಮಳೆಯಾಗಿದೆ. ಮಳೆಯಾದರೆ ರೈತರ ಮುಖದಲ್ಲಿ ಕಳೆ, ನಗು ಬರುತ್ತದೆ. ಜನರನ್ನು ಸಮಾಧಾನ, ತೃಪ್ತಿಪಡಿಸಲು ಸರಕಾರದಿಂದ ಅಸಾಧ್ಯ. ಅದು ಮಳೆಯಿಂದ ಮಾತ್ರ ಸಾಧ್ಯ. ಸ್ವಾಭಿಮಾನದ ಬದುಕು ರೂಪಿಸಲು ಸ್ವಸಹಾಯ ಸಂಘಗಳು ಕಾರಣವಾಗಿದ್ದು ಧರ್ಮಸ್ಥಳ ಈ ನಿಟ್ಟಿನಲ್ಲಿ ಕೇವಲ ಧಾರ್ಮಿಕ ಕೆಲಸಗಳಿಗೆ ಸೀಮಿತವಾಗದೇ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.

ಬೆಳ್ತಂಗಡಿಯಲ್ಲೂ  ಇಂದಿರಾ ಕ್ಯಾಂಟೀನ್‌
ಜ. 1ರ ಒಳಗೆ ರಾಜ್ಯದಲ್ಲಿ 500 ಇಂದಿರಾ ಕ್ಯಾಂಟೀನ್‌ಗಳು ಸ್ಥಾಪನೆಯಾಗಲಿದ್ದು ಬೆಳ್ತಂ ಗಡಿ ಯಲ್ಲೂ ತೆರೆಯ ಲಾಗುವುದು. ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಆಹಾರ ದೊರೆಯಲು ಈ ವ್ಯವಸ್ಥೆ ಮಾಡಲಾಗಿದೆ. ನ. 14ರಿಂದ ಸಮಗ್ರ ಆರೋಗ್ಯ ವಿಮೆ ಜಾರಿಗೆ ಬರಲಿದ್ದು, 1.02 ಕೋಟಿ ಮಕ್ಕಳಿಗೆ ವಾರದ ಐದು ದಿನ ಕ್ಷೀರಭಾಗ್ಯ ಮೂಲಕ ಹಾಲು ವಿತರಿಸಲಾಗುತ್ತಿದೆ. 1.6 ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಮಾಡಿ ಜಲಪೂರಣ ಮಾಡಲಾಗಿದೆ. ಈ ವರ್ಷ ಅದಕ್ಕಾಗಿ 800 ಕೋ.ರೂ. ಮೀಸಲಿಡಲಾಗಿದೆ. ರೈತರ ಬೆಳೆಗೆ ಆನ್‌ಲೈನ್‌ ಮಾರುಕಟ್ಟೆ ಒದಗಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು ಈಗ ದೇಶಾದ್ಯಂತವಿದೆ. ಇದರಿಂದ ರೈತರ ಆದಾಯ ಶೇ. 38ರಷ್ಟು ವೃದ್ಧಿಯಾಗಿದೆ. ಉಚಿತ ಅಕ್ಕಿ  ವಿತರಣೆ ಆರಂಭಿಸಿ ಹಸಿವು ಮುಕ್ತ ಕರ್ನಾಟಕದ ನಿರ್ಮಾಣದ ಗುರಿ ಹೊಂದಲಾಗಿದೆ. ಸ್ತ್ರೀಶಕ್ತಿ ಗುಂಪುಗಳಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವರ್ಧಂತಿಗೆ ಶುಭಾಶಯ
ಡಾ| ಹೆಗ್ಗಡೆ ಅವರ ಪಟ್ಟಾಭಿಷೇಕದ 50ನೇ ವರ್ಧಂತಿಗೆ ಸರಕಾರದ ಪರವಾಗಿ ಶುಭಾ ಶಯ ಗಳು ಎಂದು ಹಾರೈ ಸಿದ ಸಿದ್ದರಾಮಯ್ಯ, ಹೆಗ್ಗಡೆ ಯವರು ಇನ್ನಷ್ಟು ಸೇವೆ ಮಾಡು ವಂತಾಗಲಿ. ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುವಂತೆ ಹೇಮಾವತಿ ಹೆಗ್ಗಡೆ ಅವ ರಿಗೂ ದೀರ್ಘಾಯುಷ್ಯ ದೊರೆಯಲಿ. ಸಮಾಜ ದಲ್ಲಿ ಜಾಗೃತಿ ಮೂಡಿಸಿ, ಮಹಿಳೆಯರು, ರೈತರು ಆರ್ಥಿಕವಾಗಿ, ಸಾಮಾ ಜಿಕ ವಾಗಿ ಸಬಲರಾಗಿಸುವ ನಿಮ್ಮಿಬ್ಬರ ಕಾರ್ಯದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಿದರು.

ಕೃಷಿ ಅನುದಾನ
ಹೊಸದಾಗಿ ಆರಂಭಿಸಲಾದ ಕೃಷಿ ಯಂತ್ರೋ ಪ ಕರಣ ಖರೀದಿಗೆ ಸಹಾಯಧನ ಕಾರ್ಯ ಕ್ರಮವನ್ನು ಧರ್ಮಾಧಿಕಾರಿ
ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ವಿತರಿಸಿ, ಯೋಜನೆ ವತಿಯಿಂದ 100 ಕೆರೆಗಳ ಹೂಳೆತ್ತಲಾಗಿದೆ. ಬ್ಯಾಂಕು ಗಳಿಂದ ಸಾಲ ಪಡೆದ ರೈತರಿಗೆ ಭದ್ರತೆ ಯಾಗಿ ಜೀವ ಭದ್ರತಾ ಕಾರ್ಯಕ್ರಮ ಹಮ್ಮಿ ಕೊಂಡು 10,000 ರೂ.ಗೆ 20 ರೂ. ಕಂತಿನಲ್ಲಿ ವಿಮೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದರು.

ಸ್ವಾಭಿಮಾನದ ಬದುಕು
ನಾಡಿನ ಜನರಲ್ಲಿ ಬಡತನ ಹೋಗಿ ಸ್ವಾಭಿ ಮಾನದ ಬದುಕು ನಿರ್ಮಾಣವಾಗಿದೆ. ಇದಕ್ಕೆ ಸರಕಾರಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಬೇಡಿಕೆ ಇಲ್ಲದ, ಕೃತಜ್ಞತೆ ಸಲ್ಲಿಸಬೇಕಿಲ್ಲದ, ಹಕ್ಕು ಅಧಿಕಾರ ಚಲಾಯಿಸಬಲ್ಲ ವ್ಯವಸ್ಥೆ ಧರ್ಮಸ್ಥಳ ಯೋಜನೆಯಲ್ಲಿದ್ದು ಸ್ವಾಭಿಮಾನದ ಸ್ವಯಾರ್ಜಿತ ಬದುಕಿನ ಜನರಿರುವ ನಾಡಿಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಕನಸುಗಳನ್ನು ನನಸು ಮಾಡುವ ಯೋಜನೆ ಇದಾಗಿದೆ ಎಂದು ಡಾ| ಹೆಗ್ಗಡೆ ಹೇಳಿದರು.

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಸಚಿವ‌ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್‌, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಪೌರಾಡಳಿತ ಸಚಿವ ಈಶ್ವರ ಬಿ. ಖಂಡ್ರೆ, ವಿಧಾನ ಪರಿಷತ್‌ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಮೊದಿನ್‌ ಬಾವಾ, ಶಕುಂತಳಾ ಶೆಟ್ಟಿ, ಕೆ. ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಗೋಪಾಲ ಪೂಜಾರಿ, ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಆರ್‌. ರವಿಕುಮಾರ್‌, ಎಸ್‌ಬಿಐ ಅಧಿಕಾರಿ ಪಂಚಾಕ್ಷರಿ ಜೋಶಿ, ವಿಜಯ ಬ್ಯಾಂಕ್‌ ಮಹಾಪ್ರಬಂಧಕ ಸಿ. ಸತೀಶ್‌ ಬಲ್ಲಾಳ್‌, ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ಅನಿಲ್‌ ಕುಮಾರ್‌ ಪಿ., ಸಿಂಡಿಕೇಟ್‌ ಬ್ಯಾಂಕ್‌ ಕ್ಷೇತ್ರೀಯ ಮಹಾಪ್ರಬಂಧಕ ಕೆ. ಸತೀಶ್‌ ಕಾಮತ್‌, ಐಡಿಬಿಐ ಉಪಮಹಾಪ್ರಬಂಧಕ ಎನ್‌. ಶ್ರೀನಿವಾಸ್‌, ಕಾರ್ಪೊರೇಶನ್‌ ಬ್ಯಾಂಕ್‌ ಉಪ ಮಹಾಪ್ರಬಂಧಕ ಇ.ಎಸ್‌. ನಾಗ ರಾಜ್‌ ಉಡುಪ, ಜ್ಞಾನವಿಕಾಸ ಮಹಿಳಾ ಕಾರ್ಯ ಕ್ರಮ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ. ಹಷೇìಂದ್ರ ಕುಮಾರ್‌, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ, ಜಿ.ಪಂ. ಸದಸ್ಯ ಸಾಹುಲ್‌ ಹಮೀದ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಧರ್ಮಸ್ಥಳ ಪಂಚಾಯತ್‌ ಅಧ್ಯಕ್ಷ ಚಂದನ್‌ ಪ್ರಸಾದ್‌ ಕಾಮತ್‌, ಯುಬಿಐ ಮಂಗಳೂರಿನ ಸಹಾಯಕ ಮಹಾಪ್ರಬಂಧಕ ಅಶೋಕ್‌ ಕುಮಾರ್‌ ಡಾಶ್‌ ಉಪಸ್ಥಿತರಿದ್ದರು.

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿದರು. ಯೋಜನೆ ನಿರ್ದೇಶಕ ಬೂದಪ್ಪ ಗೌಡ, ಯೋಜನಾಧಿಕಾರಿ ಲೀಲಾವತಿ, ಸಮನ್ವಯ ಅಧಿಕಾರಿ ಅಶ್ವಿ‌ನಿ ನಿರ್ವಹಿಸಿದರು.

    ಸರಕಾರದ ಕಾರ್ಯಕ್ರಮಗಳನ್ನು ಯಾರು ಯಶಸ್ವಿಯಾಗಿ ಉಪಯೋಗಿಸುತ್ತಾರೋ ಅವರೇ ನಿಜವಾದ ಬುದ್ಧಿವಂತರು.

    ಜನರ ಪ್ರಾಥಮಿಕ ಆವಶ್ಯಕತೆಗೆ ಇತರರ ಹಂಗು ಇರಬಾರದು ಎಂಬ ಚಿಂತನೆಯುಳ್ಳವರು ನಮ್ಮ ಮುಖ್ಯಮಂತ್ರಿಗಳು.
– ಡಾ| ವೀರೇಂದ್ರ ಹೆಗ್ಗಡೆ

    ಧರ್ಮಸ್ಥಳ ಕೇವಲ ಧಾರ್ಮಿಕ ಆಚರಣೆ ಯಲ್ಲಷ್ಟೇ ಉಳಿಯದೇ ಸಮಾಜಮುಖೀ ಚಿಂತನೆಗಳ ಅನುಷ್ಠಾನ ಮಾಡಿದೆ.

    ಬಡವರ ಮೇಲಿನ ಕಾಳಜಿ ಕುರಿತ ಕಾರ್ಯ ಕ್ರಮಗಳಲ್ಲಿ ಸರಕಾರ ಹಾಗೂ ಧರ್ಮಸ್ಥಳ ಯೋಜನೆಯ ಚಿಂತನೆ ಒಂದೇ.
– ಸಿದ್ದರಾಮಯ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.