ಪ್ರವಾಸಿ ಭಾರತೀಯ ದಿವಸ ಆಚರಣೆ: ಅಪಕಲ್ಪನೆಗಳ ನಿವಾರಣೆ


Team Udayavani, Jan 12, 2017, 5:05 PM IST

Rajangana-12-1.jpg

ಬೆಂಗಳೂರಿನಲ್ಲಿ ನಡೆದ 14ನೆಯ ಪ್ರವಾಸೀ ಭಾರತೀಯ ದಿವಸ್‌ ಕಾರ್ಯಕ್ರಮ ಇಷ್ಟು ಕಾಲ ಸಾರ್ವಜನಿಕರ ಮನಸ್ಸಿನಲ್ಲಿದ್ದ ಅನಿವಾಸಿ ಭಾರತೀಯರ (ಅಥವಾ ವಿದೇಶಗಳಲ್ಲಿರುವ ಭಾರತೀಯರ) ಬಗೆಗಿನ ಅನೇಕ ಅಪಕಲ್ಪನೆಗಳನ್ನು ಬಹುಮಟ್ಟಿಗೆ ದೂರ ಮಾಡುವಲ್ಲಿ ಯಶಸ್ವಿಯಾದಂತಿದೆ. ವಿದೇಶ ಎಂಬ ಪದಕ್ಕೆ ದೀರ್ಘ‌ ಕಾಲದಿಂದ ಭಾರತೀಯರಲ್ಲಿದ್ದ ಒಂದು ಸಾಮಾನ್ಯ ಅರ್ಥವೆಂದರೆ ಅಮೆರಿಕ, ಬ್ರಿಟನ್‌ ಅಥವಾ ಇನ್ನಿತರ ಕೆಲ ಪಾಶ್ಚಾತ್ಯ ರಾಷ್ಟ್ರಗಳು. ಆದರೆ ಭಾರತೀಯರ ಕಾರ್ಯಕ್ಷೇತ್ರ ಹಾಗೂ ವಾಸಕ್ಷೇತ್ರ ಇದೀಗ ಎಷ್ಟೋ ವಿಸ್ತಾರಗೊಂಡಿವೆ. 

ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ‘ವಿದೇಶ’ವೆಂಬ ಪದ ಸಾಮಾನ್ಯವಾಗಿ ಇಂಗ್ಲೆಂಡ್‌ಗಷ್ಟೇ ಸೀಮಿತವಾಗಿತ್ತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೆಲೆಸುವವರ ಪೈಕಿ ಅತ್ಯಂತ ಹೆಚ್ಚಿನ ಪ್ರಭಾವ, ಸಾಮರ್ಥ್ಯ ತೋರುತ್ತಿರುವುದು ಭಾರತೀಯರೇ, ಕಾರಣ, ಅವರು ವಿದ್ಯೆ, ವೃತ್ತಿ ಪರಿಣತಿ ಹಾಗೂ ಆದಾಯಗಳಿಕೆಯಲ್ಲಿ ವಿಶ್ವದ ಇತರೆಲ್ಲರಿಗಿಂತ ಮುಂದೆ ಇದ್ದಾರೆ. ಈ ನಡುವೆ ಆಗಿರುವ ಹೊಸ ಬೆಳವಣಿಗೆಯೆಂದರೆ, ಕೊಲ್ಲಿ ರಾಷ್ಟ್ರಗಳಲ್ಲಿ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಮ್ಮವರು ಹೋಗಿ ನೆಲೆಸಿರುವುದು. ತೈಲ ರಾಷ್ಟ್ರಗಳಿಗೆ ಹೀಗೆ ಭಾರತೀಯರು ಹೋಗಿ ನೆಲೆಸುವ ಪ್ರವೃತ್ತಿ ಆರಂಭವಾದುದು ಸುಮಾರು 50 ವರ್ಷಗಳ ಹಿಂದೆ.

ಇಲ್ಲೇ ಉಲ್ಲೇಖೀಸಬೇಕಾದ ಒಂದು ಮಾತಿದೆ – ನಮ್ಮ ಜನರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ನೆಲೆ ಸಿದ್ದಕ್ಕೂ ದಕ್ಷಿಣಾಫ್ರಿಕ, ವೆಸ್ಟಿಂಡೀಸ್‌, ಫಿಜಿಯಂಥ ರಾಷ್ಟ್ರಗಳಿಗೆ ಹೋಗಿ ನೆಲೆಸಿದ್ದಕ್ಕೂ ಇದ್ದ ಹಿನ್ನೆಲೆಗಳು ಬೇರೆ ಬೇರೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ನೆಲೆಸಿದವರು ದೇಶ ಬಿಟ್ಟದ್ದು ಸ್ವಯಂ ಪ್ರೇರಣೆಯಿಂದ. ಉದ್ಯೋಗಾವಕಾಶ ಸಿಗಬಹುದೆಂಬ ನಿರೀಕ್ಷೆಯೊಡನೆ. ಆ ಕಾಲದಲ್ಲಿ ಅವರಿಗೆ ವಿಶೇಷವಾಗಿ ನೆರವಿಗೆ ಬಂದುದು ಅಮೆರಿಕದಲ್ಲಿ ಆಗುತ್ತಿದ್ದ ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳು. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದು ಉಚ್ಛ್ರಾಯ ಸ್ಥಿತಿ ಕಂಡಿರುವ ಅನೇಕ ಭಾರತೀಯರು ಈ ಹಿಂದೆ ತಾವು ಅನುಭವಿಸಿರಬಹುದಾಗಿದ್ದ ಇಂಥ ಅವಮಾನದ ಘಟನೆಗಳನ್ನು ಇಂದು ಹೇಳಿಕೊಳ್ಳಲಾರರು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಇಂದು ಮೂರು ವರ್ಗಗಳಲ್ಲಿ ಗುರುತಿಸಲಾಗುತ್ತಿದೆ. ಎನ್‌ಆರ್‌ಐ (ಅನಿವಾಸಿ ಭಾರತೀಯರು), ಪಿಐಒ (ಭಾರತೀಯ ಮೂಲದ ವ್ಯಕ್ತಿಗಳು) ಹಾಗೂ ಒಸಿಐ (ಸಾಗರೋತ್ತರ ಭಾರತೀಯ ಪ್ರಜೆಗಳು) ಎಂಬುದಾಗಿ. ಯಾರ ಪೂರ್ವಿಕರು (ಹೆತ್ತವರು, ತಾತಂದಿರು, ಮುತ್ತಾತಂದಿರು) ಭಾರತೀಯ ಪ್ರಜೆಗಳಾಗಿದ್ದರೋ ಅಂಥ ವಿದೇಶವಾಸಿಗಳನ್ನು ‘ಸಾಗರೋತ್ತರ ಭಾರತೀಯ ಪ್ರಜೆ’ ಎಂಬ ವರ್ಗದಡಿಯಲ್ಲಿ ಗುರುತಿಸಲಾಗಿದೆ. ಇವರಿಗೆ ಭಾರತ ಪ್ರವೇಶಿಸಲು ಅನುಕೂಲವಾಗುವಂತೆ ಆಜೀವ ವೀಸಾ (ಜೀವಿತಾವಧಿ ವೀಸಾ)ನೀಡಲಾಗಿದೆ; ಇವರುಗಳ ಸ್ಥಾನ-ಮಾನ ಅವಳಿ ಪೌರತ್ವದ ಸ್ಥಾನ-ಮಾನಕ್ಕೆ ಸಮನಾಗಿದೆ. 

ಬೆಂಗಳೂರು ಪ್ರವಾಸಿ ದಿವಸದ ವಿಭಿನ್ನತೆ, ವಿಶೇಷತೆ
ಬೆಂಗಳೂರಿನಲ್ಲಿ ನಡೆದಿರುವ ಪ್ರವಾಸಿ ದಿವಸದ ವಿಶೇಷತೆಯೆಂದರೆ ವೆಸ್ಟಿಂಡೀಸ್‌, ದಕ್ಷಿಣಾಫ್ರಿಕ, ದಕ್ಷಿಣ ಶಾಂತಸಾಗರೀಯ ರಾಷ್ಟ್ರಗಳಿಂದ ಬಂದ ಮೂಲ ಭಾರತೀಯರಿಗೆ ಹೆಚ್ಚಿನ ಗಮನ ನೀಡಲಾಗಿರುವುದು. ಇವರುಗಳ ಪೂರ್ವಿಕರನ್ನು ಬ್ರಿಟಿಷ್‌, ಫ್ರೆಂಚ್‌ ಹಾಗೂ ಡಚ್‌ ಸರಕಾರಗಳು ಅಕ್ಷರಶಃ ಗುಲಾಮರಂತೆ ತಮ್ಮ ರಾಷ್ಟ್ರಗಳಿಗೆ ಒಯ್ದಿದ್ದವು. ಗುಲಾಮ ಚಾಕರಿ ಕಾಯ್ದೆಯನ್ನು ನಿಷೇಧಿಸಿದ ಪರಿಣಾಮವಾಗಿ ಬ್ರಿಟಿಷ್‌ ವಸಾಹತು ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿ ಕಾರ್ಮಿಕರ ಕೊರತೆ ಕಂಡುಬಂತು. ಹೀಗಾಗಿ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶಗಳಿಂದ ಬಡಕಾರ್ಮಿಕರನ್ನು ಆಯ್ದು, ಅವರನ್ನು ಕುಟುಂಬ ಸಮೇತವಾಗಿ ದಕ್ಷಿಣಾಫ್ರಿಕ ಮತ್ತು ಇತರ ರಾಷ್ಟ್ರಗಳಿಗೆ ಹಡಗಿನ ಮೂಲಕ ‘ಸಾಗಿಸ’ಲಾಯಿತು. ಬೆಂಗಳೂರಿನಲ್ಲಿ ಪ್ರವಾಸಿದಿನದಲ್ಲಿ ಪಾಲ್ಗೊಳ್ಳಲು ಬಂದವರು ಇಂಥ ‘ಬದ್ಧಕಾರ್ಮಿಕರ’ ಕುಟುಂಬಗಳ ಇಂದಿನ ಪೀಳಿಗೆಯವರು.

ಭಾರತೀಯರು ಹೆಮ್ಮೆ ಪಡಬೇಕಾದ ಸಂಗತಿಯೆಂದರೆ, ಭಾರತೀಯ ಮೂಲದವರಾದ ಮೈಕೆಲ್‌ ಅಶ್ವಿ‌ನ್‌ ಅಧೀನ್‌ ಅವರು ಇಂದು ಸುನಾಮ್‌ ಗಣರಾಜ್ಯ (ಭೂತಪೂರ್ವ ಡಚ್‌ ಗಯಾನ ದಕ್ಷಿಣ ಅಮೆರಿಕ)ದ ಉಪಾಧ್ಯಕ್ಷರಾಗಿದ್ದಾರೆ. ಪೋರ್ಚುಗಲ್‌ನ ಪ್ರಧಾನಿ ಆಂಟೋನಿಯೋ ಕಾಸ್ಟಾ. ಇವರ ತಂದೆ ಗೋವಾ, ಪೋರ್ಚುಗೀಸ್‌ ಹಾಗೂ ಫ್ರೆಂಚ್‌ ಮೂಲದವರು. ಭಾರತೀಯ ಮೂಲದ ಅಂದಿನ ಬದ್ಧ ಕಾರ್ಮಿಕರ ಪೈಕಿ, ಗಯಾನ (ಭೂತಪೂರ್ವ ಬ್ರಿಟಿಷ್‌ ಗಯಾನ) ಹಾಗೂ ವೆಸ್ಟ್‌ ಇಂಡೀಸ್‌ ಅಥವಾ ಕೆರಿಬಿಯನ್‌ ದ್ವೀಪ ಸೇರಿದವರ ಕುಟುಂಬಗಳಿಂದ ಬಂದವರು ಕ್ರಿಕೆಟರ್‌ಗಳಾಗಿಯೂ ಹೆಸರು ಮಾಡಿದ್ದಾರೆ. ಇವರೆಂದರೆ ಕೆ.ಟಿ. ರಾಮಾಧಿನ್‌, ರೋಹನ್‌ ಕನ್ಹಾಯ್‌, ಜೋ ಸೊಲೊಮನ್‌, ಆಲ್ವಿನ್‌ ಕಾಲೀಚರಣ್‌, ಡೊನಾಲ್ಡ್‌ ರಾಂಸಮೂಜ್‌, ಶಿವನರೇನ್‌ ಚಂದ್ರಪಾಲ್‌, ರಾಮ್‌ನರೇಶ್‌ ಸರ್ವಾನ್‌, ದೇವಿಂದರ್‌ ಬಿಶೂ, ರವಿ ರಾಂಪಾಲ್‌, ಮಾರ್ಕ್‌ ರಾಂಪ್ರಕಾಶ್‌, ಸುನೀಲ್‌ ನರೈನ್‌ ಮುಂತಾದವರು.

ಹೊರ ರಾಷ್ಟ್ರಗಳನ್ನು ಸೇರಿರುವ ನಮ್ಮ ಭಾರತೀಯರು ಆಯಾರಾಷ್ಟ್ರಗಳಲ್ಲಿ ವಿವಿಧ ವೃತ್ತಿ/ಹುದ್ದೆಗಳಲ್ಲಿ ಹಾಗೂ ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿ ಕೂಡ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಕೃತಿಗಳಲ್ಲಿ ಭಾರತದ ವಿದ್ಯಮಾನಗಳನ್ನು ವಿಮರ್ಶಿಸುವ ಟ್ರಿನಿಡಾಟ್‌ ಮತ್ತು ಟೊಬಾಗೋದ ನೊಬೆಲ್‌ ಪುರಸ್ಕೃತ ಲೇಖಕ ಸರ್‌.ವಿ.ಎಸ್‌. ನೈಪಾಲ್‌ ಅತ್ಯುತ್ತಮ ಉದಾಹರಣೆ. ಇನ್ನು, ರಾಜಕೀಯ ಕ್ಷೇತ್ರದಲ್ಲಿ ಎದ್ದು ತೋರುವ ಹೆಸರೆಂದರೆ, ಗಯಾನದ ಹಿಂದಿನ ಅಧ್ಯಕ್ಷ ಡಾ| ಛೇದಿ ಜಗನ್‌. ಗಯಾನದ ಇನ್ನೋರ್ವ ಅಧ್ಯಕ್ಷರಾಗಿದ್ದ ಮೋಸೆಸ್‌ ನಗಮೋಟೋ ಅವರೂ ಭಾರತೀಯ ಮೂಲದವರೇ. ಕಾಮನ್‌ವೆಲ್ತ್‌ ಒಕ್ಕೂಟದ ಮಹಾಕಾರ್ಯದರ್ಶಿ ಸರ್‌ ಶ್ರೀದತ್ತ್ ರಾಂಪಾಲ್‌ ಅವರೂ ಭಾರತದ ಕೊಡುಗೆಯೇ. ಟ್ರಿನಿಡಾಡ್‌ ಮತ್ತು ಟೊಬಾಗೊದ ಮಾಜಿ ಪ್ರಧಾನಿ ಕಮಲಾ ಪರ್ಸಾದ್‌ ಬಿಸ್ಸೇಸ್ಸರ್‌ (ಕಮಲಾ ಪ್ರಸಾದ್‌ ವಿಶ್ವೇಶ್ವರ್‌) ಭಾರತೀಯರೇ. ಇನ್ನು ಮಾರಿಷಸ್‌ಗೆ ಬಂದರೆ ಅಲ್ಲಿ ರಾಷ್ಟ್ರಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಸರ್‌ ಸಿವುಸಾಗರ್‌ (ಶಿವ್‌ಸಾಗರ್‌) ರಾಮ್‌ಗುಲಾಂ ಮೂಲತಃ ಇಲ್ಲಿನವರೇ.

ಆದರೆ ಈಚೆಗಿನ ದಶಗಳಲ್ಲಿ ಈ ರಾಷ್ಟ್ರಗಳ ಜನರು ಹೇಗೋ ಹಾಗೇ ಅಲ್ಲಿನ ವಸಾಹತುಶಾಹಿ ನಾಯಕರು ಸಂವಿಧಾನದಲ್ಲಿ ಅಥವಾ ಕಾಯ್ದೆಗಳಲ್ಲಿ ತಿದ್ದುಪಡಿ ಇರುವ ಮೂಲಕ ಭಾರತೀಯ ಮೂಲದ ವ್ಯಕ್ತಿಗಳ ಬಗೆಗಿನ ತಮ್ಮ ತಾರತಮ್ಯ ಧೋರಣೆಯನ್ನು ಖಂಡಿತಕ್ಕೂ ಮೆರೆದಿದ್ದಾರೆ. ಗಯಾನದಲ್ಲಿ ಛೇದಿ ಜಗನ್‌ ಸೋಲು ಕಂಡದ್ದು ಹೀಗೆ. ಫಿಜಿಯಲ್ಲಂತೂ ಅತ್ಯಂತ ಕೆಟ್ಟ ವಿದ್ಯಮಾನ ಘಟಿಸಿತು; 2000ದ ಇಸವಿಯಲ್ಲಿ ಅಲ್ಲೊಂದು ಮಿಲಿಟರಿ ದಂಗೆ ನಡೆದು ಅಲ್ಲಿನ ಭಾರತೀಯ ಮೂಲದ ಪ್ರಧಾನಿ ಮಹೇಂದ್ರ ಚೌಧುರಿಯವರನ್ನು ಅಧಿಕಾರದಿಂದ ಕಿತ್ತೂಗೆಯಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದು, ಫಿಜಿಯಲ್ಲಿನ ಶೇ. 32ರಷ್ಟು ಹಿಂದುಗಳ ಬಗ್ಗೆ ವಿನಾಕಾರಣ ವಿರೋಧಿ ಧೋರಣೆ ತಳೆದಿದ್ದ ಮೆಥಡಿಸ್ಟ್‌ ಚರ್ಚೆಗಳು. ಅಲ್ಲಿ ತೋರಿಬರುತ್ತಿರುವ ತಾರತಮ್ಯ ಧೋರಣೆಯಿಂದಾಗಿ ಅನೇಕ ಭಾರತೀಯ ಮೂಲದ ಫಿಜಿಯವರು ಆ ದೇಶದಿಂದ ಕಾಲ್ತೆಗೆಯುತ್ತಿದ್ದಾರೆ. ಹೀಗಿದ್ದರೂ ಅಲ್ಲಿ ಜೈರಾಂ ರೆಡ್ಡಿಯವರಂಥ ವಿಪಕ್ಷ ನಾಯಕರು ಆಗಿ ಹೋಗಿದ್ದಾರೆ. ಗಾಲ್ಫ್ ಚಾಂಪಿಯನ್‌ ಆಗಿದ್ದ ವಿಜಯ್‌ ಸಿಂಗ್‌ರಂಥವರನ್ನೂ ಫಿಜಿ ವಿಶ್ವಕ್ಕೆ ದೇಣಿಗೆಯಾಗಿ ನೀಡಿದೆ. ದಕ್ಷಿಣ ಶಾಂತಸಾಗರದ ಸೋಲೊಮನ್‌ ದ್ವೀಪದಲ್ಲಿ ಭಾರತೀಯ ಮೂಲದ ಜೂಲಿಯನ್‌ ಮೋಟೋ ಅವರು ಅಟಾರ್ನಿ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು.

ಪಾಕ್‌, ಬಾಂಗ್ಲಾದವರು ಭಾರತೀಯರಲ್ಲವೇ?
ಪ್ರವಾಸೀ ಭಾರತೀಯ ಸ್ಥಾನಮಾನವನ್ನು ಪಾಕಿಸ್ಥಾನ ಹಾಗೂ ಬಾಂಗ್ಲಾದೇಶದಲ್ಲಿರುವ ಹಿಂದುಗಳಿಗೆ ನೀಡಲು ನಾವೇಕೆ ಹಿಂಜರಿಯುತ್ತಿದ್ದೇವೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಆದರೆ ಇದಕ್ಕೆ ಅಡ್ಡಿಯಾಗಿರುವುದು ನಮ್ಮ ಜಾತ್ಯತೀತ ನೀತಿ! ಇಂಥ ಸ್ಥಾನಮಾನವನ್ನು ಬರೇ ಹಿಂದೂಗಳಿಗಷ್ಟೆ ನೀಡಿದರೆ ಸಾಲದು, ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದಲ್ಲಿರುವ ಎಲ್ಲ ಅಲ್ಪಸಂಖ್ಯಾಕರಿಗೂ (ಪಾರ್ಸಿಗಳು, ಸಿಕ್ಖರು ಹಾಗೂ ಬೌದ್ಧರಿಗೂ) ನೀಡಬೇಕಾಗುತ್ತದೆ ಎಂಬ ವಾದವೀಗ ಕೇಳಿಬರುತ್ತಿದೆ. ಆದರೆ ಭಾರತ ಸರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನ, ಭೂತಾನ್‌, ನೇಪಾಳ ಹಾಗೂ ಶ್ರೀಲಂಕಾಗಳನ್ನು ‘ಭಾರತೀಯ ಮೂಲದ ವ್ಯಕ್ತಿಗಳ’ ಪ್ತಿಪ್ತಿಯಿಂದ ಹೊರಗಿರಿಸಿದೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ನಮ್ಮ ವಿದೇಶಾಂಗ ನೀತಿಯಲ್ಲಿ ಗಮನಾರ್ಹವಾದ ಬದಲಾವಣೆ ಆಗಿದೆ. ದೀರ್ಘ‌ಕಾಲದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಹಾಗೂ ಪಾಕ್‌ ಮೂಲದ ಹಿಂದುಗಳಿಗೆ ಭಾರತ ಸರಕಾರ ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್‌ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ ನೀಡಲು ಯೋಚಿಸುತ್ತಿದೆ. ಭಾರತೀಯ ಪೌರತ್ವವನ್ನು ನೀಡುವ ನಿಟ್ಟಿನಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಬಗೆಗೂ ಯೋಚಿಸಲಾಗುತ್ತಿದೆ. ಹೀಗಿದ್ದರೂ ಬಹುತೇಕ ಸಾಗರೋತ್ತರ ಭಾರತೀಯರ ಮನಸ್ಸಿನಲ್ಲಿ ಒಂದು ಕೊರಗು ಇನ್ನೂ ಉಳಿದುಕೊಂಡಿದೆ. ‘ನಮ್ಮ ಬಗ್ಗೆ ಭಾರತದಲ್ಲಿ ಯಾರಿಗೂ ಗೊತ್ತಿಲ್ಲ; ಎಂದೋ ಚದುರಿ ಹೋಗಿ ಮರೆವಿಗೆ ಸಂದವರು ನಾವು? ಎಂಬ ಕೊರಗು ಇದು. ಹಿಂದೂ ಮಹಾಸಾಗರದಲ್ಲಿನ ಫ್ರಾನ್ಸ್‌ ಆಡಳಿತ ಪುನಸ್ಸಂಘಟಿತ ದ್ವೀಪಗಳಲ್ಲಿ (ರೀಯೂನಿಯನ್‌ ಐಲೆಂಡ್ಸ್‌) ಭಾರತೀಯ ಮೂಲದವರಿದ್ದಾರೆಂಬುದಾಗಲಿ, ವೆನೆಜುವೆಲಾದಲ್ಲಿ ಸುಮಾರು 400 ಮಂದಿ ಭಾರತೀಯರು ನೆಲೆಸಿದ್ದಾರೆಂಬುದಾಗಲಿ ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು?

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.