ವೃತ್ತಿಪರ ಶಿಕ್ಷಣ: ಅತಿ ವ್ಯಾಮೋಹ ಬೇಡ


Team Udayavani, Mar 4, 2017, 10:37 AM IST

Which-way-to-go-600.jpg

ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ಗಳ ಅತಿಯಾದ ವ್ಯಾಮೋಹ ಹೆತ್ತವರನ್ನು ಕುರುಡಾಗಿ ಮಾಡಿದೆ. ಪರಿಣಾಮವಾಗಿ ಮಕ್ಕಳ ವೈಯಕ್ತಿಕ ಆಸಕ್ತಿ, ಅಭಿರುಚಿಗಳನ್ನು ಕಡೆಗಣಿಸಿ ಈ ವೃತ್ತಿಪರ ಶಿಕ್ಷಣಕ್ಕೆ ದೂಡುವುದು ಕಂಡುಬರುತ್ತಿದೆ. ಹೆತ್ತವರ ಈ ವ್ಯಾಮೋಹದಿಂದಾಗಿ ಪರೋಕ್ಷವಾಗಿ ಈ ವೃತ್ತಿಪರ ಶಿಕ್ಷಣ ಎಂಬುದು ಹಣ ಹೂಡುವ ಮತ್ತು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿರುವುದು ವಿಪರ್ಯಾಸ.

ಈಗ ತಾನೇ ಮಗು ತಾಯಿಯ ಗರ್ಭದಿಂದ ಆಚೆ ಬಂದಿದೆ. ಜೋರಾಗಿ ಅರಚುತ್ತ ಅಳಲು ಶುರು ಮಾಡಿದೆ. ಇದನ್ನು ಕೇಳಿಸಿಕೊಂಡ ಆ ಮಗುವಿನ ತಂದೆ ಒಳಗೆ ಬಂದು ಸಂತೋಷದಿಂದ ಮಗುವನ್ನು ತೋಳಿಗೇರಿಸಿಕೊಂಡು ಮುದ್ದಾಡಲು ಶುರು ಮಾಡಿದ್ದಾನೆ. ಅಷ್ಟರಲ್ಲಿ ಅಲ್ಲೇ ಇದ್ದ ಅವನ ಸ್ನೇಹಿತ ‘ದೊಡ್ಡವನಾದ/ಳಾದ ಮೇಲೆ ಡಾಕ್ಟರೋ ಅಥವಾ ಇಂಜಿನಿಯರೋ ಮಾಡಿಸ್ಬಿಡ್ರೀ’ ಎಂಬ ಬಿಟ್ಟಿ ಸಲಹೆಯೊಂದನ್ನು ಕೊಟ್ಟು ಹಲ್ಲು ಕಿರಿಯುತ್ತಾನೆ. ಗೆಳೆಯನ ಮಾತಿಗೆ ಹೂಗುಡುತ್ತ ಆ ತಂದೆ ಆಗ ತಾನೆ ಹುಟ್ಟಿದ ಮಗುವಿನಲ್ಲಿ ಇಂಜಿನಿಯರರನ್ನೊ ಅಥವಾ ಡಾಕ್ಟರರನ್ನೋ ಕಾಣುತ್ತಿದ್ದಾನೆ.

ಈ ಘಟನೆಯನ್ನು ಯಾಕೆ ಇಲ್ಲಿ ಉಲ್ಲೇಖೀಸಿದೆ ಅಂದರೆ ಎಷ್ಟರ ಮಟ್ಟಿಗೆ ‘ನನ್ನ ಮಗ/ಮಗಳು ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗಬೇಕು’ ಎಂಬ ಟ್ರೆಂಡ್‌ ಇತ್ತೀಚಿನ ಎಲ್ಲ ತಂದೆ ತಾಯಿಗಳ ತಲೆಯನ್ನು ಹಾಳುಗೆಡವಿದೆ. ‘ಅವರವರ ಮಕ್ಕಳು ಏನಾಗಬೇಕೋ ಅದು ಅವರಿಷ್ಟ. ನಿಮ್ಮದೇನು ತಕರಾರು?’ ಎಂದು ಯಾರಾದರೂ ದಬಾಯಿಸಬಹುದು. ವೈಯಕ್ತಿಕ ತಕರಾರು ಯಾರಿಗೂ ಇಲ್ಲ. ಆದರೆ, ಮುಂದೆ ಇದೇ ನಿಲುವು ನಮಗೆ ಹಾಗೂ ನಮ್ಮ ದೇಶಕ್ಕೆ ದೊಡ್ಡ ತಕರಾರಾಗಬಹುದು ಎಂಬ ಕಳವಳ ಅಷ್ಟೇ.

ಅತಂತ್ರ ತಾಂತ್ರಿಕ ಶಿಕ್ಷಣ
9ನೇ ಅಥವಾ 10ನೇ ಕ್ಲಾಸು ವಿದ್ಯಾರ್ಥಿಗಳನ್ನು ನಿಮ್ಮ ಮುಂದಿನ ಗುರಿ ಏನೆಂದು ಕೇಳಿದರೆ ಬಹುತೇಕ ಎಲ್ಲರೂ ಹೇಳುವುದು ಎಂಜಿನಿಯರ್‌ ಅಥವಾ ಡಾಕ್ಟರ್‌ ಎಂದು. ಆದರೆ, ಎಂಜಿನಿಯರಿಂಗ್‌ ಕ್ಲಾಸಿಗೆ ಹೋಗಿ ನಿಮ್ಮಲ್ಲಿ ಎಷ್ಟು ಜನ ತಮ್ಮ ತಂದೆ ತಾಯಿಗಳ ಒತ್ತಾಯಕ್ಕೆ ಎಂಜಿನಿಯರಿಂಗ್‌ ಸೇರಿದ್ದೀರಿ ಎಂದು ಕೇಳಿದರೆ ಬಹುಶಃ ಅರ್ಧಕ್ಕಿಂತ ಹೆಚ್ಚು ಮಕ್ಕಳು ಕೈಗಳನ್ನು ಮೇಲಕ್ಕೆತ್ತುತ್ತಾರೆ. ಹಿಂದೊಮ್ಮೆ ಅವರ ಗುರಿಯೇ ಆಗಿದ್ದ ಎಂಜಿನಿಯರಿಂಗ್‌ ಇಂದೇಕೆ ಅವರಿಗೆ ಬೇಡವಾಗಿದೆ? ತಂದೆ ತಾಯಿಗಳ ಒತ್ತಾಯಕ್ಕೆ ಓದುತ್ತಿದ್ದೇವೆ ಎಂದೇಕೆ ಹೇಳುತ್ತಿದ್ದಾರೆ? ಏಕೆಂದರೆ ಮಕ್ಕಳು ಚಿಕ್ಕವರಿರುವಾಗಿನಿಂದಲೂ ಪೋಷಕರು ಹೇಳಿದ್ದು ಮಕ್ಕಳ ಮನಸ್ಸಲ್ಲಿ ಗಟ್ಟಿಯಾಗಿ ಕೂತುಬಿಟ್ಟಿರುತ್ತದೆ. ಅವರಿಗೆ ಬುದ್ಧಿ, ಸ್ವಂತ ಆಯ್ಕೆಯ ಪ್ರೌಢಿಮೆ ಬರುವಷ್ಟರಲ್ಲಿ ಅಭಿರುಚಿಗಳು, ಆಸಕ್ತಿಗಳು ಬದಲಾಗಿರುತ್ತವೆ. ಆದರೆ ಅಷ್ಟರಲ್ಲಿ ಅವರು ಎಂಜಿನಿಯರಿಂಗ್‌ಗೆ ಸೇರಿಯಾಗಿರುತ್ತದೆ. ಇಷ್ಟಕ್ಕೂ ತಂದೆ ತಾಯಿಗಳು ಮಕ್ಕಳನ್ನು ಎಂಜಿನಿಯರಿಂಗ್‌ಗೆ ಸೇರಿಸುವ ಮೂಲ ಉದ್ದೇಶ ಕ್ಯಾಂಪಸ್‌ ಸೆಲೆಕ್ಷನ್‌. ಆದರೆ ಅವರಿಗೆ ತಿಳಿದಿರದ ಒಂದು ವಿಚಾರವೇನೆಂದರೆ ಎಂಜಿನಿಯರಿಂಗ್‌ ಮಾಡಿದ ಪ್ರತೀ ವಿದ್ಯಾರ್ಥಿಗೂ ಪ್ಲೇಸ್‌ಮೆಂಟ್‌ ಆಗುವುದಿಲ್ಲ ಎಂಬ ಕಟು ವಾಸ್ತವ. ಪ್ಲೇಸ್‌ಮೆಂಟ್‌ ಆಗದಿದ್ದರೇನಂತೆ, ಬೇರೆ ಕಡೆ ಪ್ರಯತ್ನ ಪಟ್ಟರೆ ಉದ್ಯೋಗ ಖಂಡಿತ ಎಂಬುದು ಪೋಷಕರ ನಂಬಿಕೆಯಾಗಿದ್ದಲ್ಲಿ ಈ ಅಂಕಿ-ಅಂಶಗಳು ನಿಮ್ಮನ್ನು ನಿಜಕ್ಕೂ ನಿಬ್ಬೆರಗಾಗಿಸುತ್ತವೆ. 

ನಮ್ಮ ದೇಶದಲ್ಲಿ ಅತಿಹೆಚ್ಚು ನಿರುದ್ಯೋಗಿಗಳು ಎಂಜಿನಿಯರಿಂಗ್‌ ಓದಿದವರೇ. ಪ್ರಸ್ತುತ ನಮ್ಮ ದೇಶದಲ್ಲಿ ಇಂಜಿನಿಯರಿಂಗ್‌ ಓದಿದ ಕೇವಲ 6%-7%  ಜನರಿಗೆ ಮಾತ್ರ ಉದ್ಯೋಗಾವಕಾಶಗಳು ಸಿಗುತ್ತಿವೆ. 80%ಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಹೆಚ್ಚುತ್ತಿರುವ ಇಂಜಿನಿಯರಿಂಗ್‌ ಕಾಲೇಜುಗಳು ಪ್ರಸ್ತುತ ನಮ್ಮ ದೇಶದಲ್ಲಿ 3,000ಕ್ಕೂ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳಿವೆ. ಅತಿ ಹೆಚ್ಚು ಕಾಲೇಜುಗಳು ಹೊಂದಿರುವ ರಾಜ್ಯ ಎಂದರೆ ತಮಿಳುನಾಡು, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ, ಮೂರನೇ ಸ್ಥಾನ ಉತ್ತರ ಪ್ರದೇಶದ್ದು. ಕರ್ನಾಟಕದಲ್ಲೂ 200ಕ್ಕೂ ಹೆಚ್ಚು ಕಾಲೇಜುಗಳಿವೆ. ಪ್ರತೀ ವರ್ಷ ಇಂಜಿನಿಯರಿಂಗ್‌ ಪದವೀಧರರಾಗುತ್ತಿರುವ ಸಂಖ್ಯೆ 15 ಲಕ್ಷಕ್ಕೂ ಹೆಚ್ಚು. ಇದರಲ್ಲಿ ಕೆಲವರು ಇನ್ನೂ ಉನ್ನತ ಶಿಕ್ಷಣ ಪಡೆದರೆ ಉನ್ನತ ಶಿಕ್ಷಣ ಪಡೆಯಲಾಗದವರು ತಮ್ಮದಲ್ಲದ  ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಾರೆ. ಆದರೆ ಬಹುತೇಕ ಮಂದಿ ನಿರುದ್ಯೋಗಿಗಳಾಗಿ ಉಳಿಯುತ್ತಾರೆ. ಇದಲ್ಲದೆ, ವರ್ಷದಿಂದ ವರ್ಷಕ್ಕೆ ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆಯೂ ಏರುತ್ತಿದೆ.

ಗುಣಮಟ್ಟದ ಶಿಕ್ಷಣದ ಕೊರತೆ
ಇಷ್ಟೆಲ್ಲ ಕಾಲೇಜುಗಳಿರುವಾಗ ಅವುಗಳಲ್ಲಿ ಬೋಧನೆ ಮಾಡುವ ಉಪನ್ಯಾಸಕರು ಇರಬೇಕಲ್ಲವೇ? ನಮ್ಮ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆ, ಅನುಭವಸ್ಥ ಉಪನ್ಯಾಸಕರಿದ್ದಾರೆ ಎಂದು ಬಹುತೇಕ ಎಲ್ಲ ಕಾಲೇಜುಗಳವರೂ ಹೇಳಿಕೊಳ್ಳುತ್ತಾರೆ. ಆದರೆ ನೈಜ ಬಂಡವಾಳ ಕಾಲೇಜಿನ ಒಳಹೊಕ್ಕು ನೋಡಿದರೆ ತಿಳಿಯುತ್ತದೆ. ಕಳಪೆ ಮಟ್ಟದ ಶಿಕ್ಷಣ, ಅನನುಭವಿ ಬೋಧಕರು, ಸೌಲಭ್ಯ, ಸಂಪನ್ಮೂಲಗಳ ಕೊರತೆ, ಪ್ರಯೋಗಾಲಯಗಳ ಅಸಮರ್ಪಕತೆ, ನಾಮಕಾವಸ್ಥೆ ಕ್ಯಾಂಪಸ್‌ ಟ್ರೈನಿಂಗ್‌ ಹೀಗೆ ಹಲವಾರು ಹುಳುಕುಗಳು ಗೋಚರವಾಗುತ್ತವೆ.

ಇನ್ನು ಶಿಸ್ತಿನ ವಿಚಾರದಲ್ಲಿ ಕಾಲೇಜು ಆಡಳಿತ ಯಾವುದೇ ಕಾಳಜಿ ತೆಗೆದುಕೊಳ್ಳದಿರುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಧಕ್ಕೆಯಾಗುತ್ತಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿ ಜೀವನ ಎಂದರೆ ಮೋಜು ಮಸ್ತಿ ಮಾಡುವುದು, ಕನಿಷ್ಠ ಒಂದು ವರ್ಷ ಡೀಟೈನ್‌ ಆಗುವುದು ಮತ್ತು ಬ್ಯಾಕ್‌ ಲಾಗ್‌ ಇವೇ ಆಗಿಬಿಟ್ಟಿದೆ. ಇವೆಲ್ಲದಕ್ಕೂ ಆಡಳಿತ ಮಂಡಳಿಗಳು, ಉಪನ್ಯಾಸಕರು ತಲೆಕೆಡಿಸಿಕೊಳ್ಳದಿರುವುದು ಆತಂಕಕಾರಿ ಸಂಗತಿ. ತಂದೆ ತಾಯಿಯರಿಗೂ ಇವೆಲ್ಲ ಮಾಮೂಲಿ ಎಂಬಂತಾಗಿಬಿಟ್ಟಿದೆ. 

ಹಣ ಕೀಳುವ ಸಂಸ್ಥೆಗಳು
ನಿಜಕ್ಕೂ ಇಂದು ಎಂಜಿನಿಯರಿಂಗ್‌ ಇನ್‌ಸ್ಟಿಟ್ಯೂಟ್‌ಗಳು ವ್ಯಾಪಾರದ ಕೇಂದ್ರಗಳಾಗಿಬಿಟ್ಟಿವೆ.ಎಂಜಿನಿಯರಿಂಗ್‌ ಅಷ್ಟೇ ಏಕೆ, ಮಿಕ್ಕೆಲ್ಲ ಬಹುತೇಕ ಶಿಕ್ಷಣ ಸಂಸ್ಥೆಗಳ ಕಥೆಯೂ ಇದೇ ಆಗಿದೆ. ಆಯಾ ರಾಜ್ಯದ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿಗೆ ಅಡ್ಮಿಟ್‌ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮ್ಯಾನೇಜ್‌ಮೆಂಟ್‌ ಕೋಟಾದಡಿಯ ಸೀಟುಗಳು ಬ್ಲಾಕ್‌ ಟಿಕೆಟ್‌ಗಳಂತೆ ಬಿಕರಿಯಾಗುತ್ತಿವೆ. ಈ ಮ್ಯಾನೇಜ್‌ಮೆಂಟ್‌ ಕೋಟಾದಡಿ ಸೀಟು ಪಡೆಯುವ ಬಹುತೇಕರು ಶ್ರೀಮಂತರು. ಪ್ರವೇಶ ಪರೀಕ್ಷೆಯಲ್ಲಿ ಸೀಟು ಪಡೆಯಲು ಅನರ್ಹರಾಗಿ ಈ ರೀತಿ ದುಡ್ಡು ಕೊಟ್ಟು ಸೀಟು ಖರೀದಿ ಮಾಡುತ್ತಾರೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ದುಡ್ಡಿನ ಮುಖಾಂತರ ಸೀಟು ಗಳಿಸುವ ವಿದ್ಯಾರ್ಥಿಗಳ ನಡುವೇ ವ್ಯತ್ಯಾಸವೇ ಇಲ್ಲದಂತಾಗುತ್ತದೆ.

ಇನ್ನು ಸ್ವಾಯತ್ತ ಕಾಲೇಜುಗಳ ಕಡೆ ಗಮನ ಹರಿಸಿದರೆ ಅಲ್ಲಿ ಇದಕ್ಕಿಂತಲೂ ದೊಡ್ಡ ದಂಧೆ ನಡೆಯುತ್ತದೆ. ಪ್ಲೇಸ್ಮೆಂಟ್‌ ಸಮಯದಲ್ಲೂ ಸಹ ಪ್ರಭಾವಿ ವ್ಯಕ್ತಿಗಳ ರೆಕಮೆಂಡೇಶನ್‌ಗಳು ಬಹುವಾಗಿ ಕೆಲಸ ಮಾಡುತ್ತಿರುವುದು ಪ್ರತಿಭಾವಂತರಿಗೆ ದೂಡ್ಡ ತೊಂದರೆಯಾಗಿ ಪರಿಣಮಿಸಿದೆ. ಸರಕಾರಿ ಕೋಟಾದ ಸೀಟುಗಳಿಗೆ ಇನ್ನೂ ಹೆಚ್ಚಿನ ಶುಲ್ಕ ನಿಗದಿಪಡಿಸಬೇಕೆಂದು ಖಾಸಗಿ ಸಂಸ್ಥೆಗಳ ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ಖಾಸಗಿ ಸಂಸ್ಥೆಗಳ ರಾಗಕ್ಕೆ ಸರಕಾರವೂ ಸಹ ತಾಳ ಹಾಕುತ್ತಿರುವುದು ನಿಜಕ್ಕೂ ವಿಷಾದನೀಯ. ಕಾಯಿಲೆಗೆ ತುತ್ತಾಗಿರುವ ವೈದ್ಯಕೀಯ ಶಿಕ್ಷಣ ಇಂಜಿನಿಯರಿಂಗ್‌ನಲ್ಲಿ ಲಕ್ಷಾಂತರ ರೂ.ಗಳ ವ್ಯವಹಾರ ನಡೆದರೆ ವೈದ್ಯಕೀಯ ಕಾಲೇಜುಗಳಲ್ಲಿ ಕೋಟ್ಯಂತರ ಹಣ ಕೊಳ್ಳೆ ಹೊಡೆಯುತ್ತಾರೆ. ಇಂದಿನ ವೈದ್ಯಕೀಯ ಶಿಕ್ಷಣ ಹೇಗಿದೆ ಎಂದು ತಿಳಿಯಲು ಈ ಉದಾಹರಣೆ ನೋಡಿ.

ಅವನೊಬ್ಬ ಶ್ರೀಮಂತ ಉದ್ಯಮಿ. ಆತನಿಗೆ ಮಗ ಡಾಕ್ಟರ್‌ ಆಗಬೇಕೆಂಬ ಹಂಬಲ. ಆದರೆ ಹಲವಾರು ಬಾರಿ ಪ್ರವೇಶ ಪರೀಕ್ಷೆ ತೆಗೆದುಕೊಂಡರೂ ಅವನಿಗೆ ಮೆಡಿಕಲ್‌ ಸೀಟು ಸಿಗುವುದಿಲ್ಲ. ಆಗ ಅವನ ತಂದೆ ಕೋಟಿಗಟ್ಟಲೆ ಹಣ ತೆತ್ತು ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿಗೆ ಸೇರಿಸುತ್ತಾನೆ, ತನ್ನ ಹಣಬಲದಿಂದಲೇ ಅವನನ್ನು ಪಾಸ್‌ ಮಾಡಿಸುತ್ತಾನೆ. ಮುಂದೆ ಆ ಉದ್ಯಮಿಯೇ ಮಗನಿಗೊಂದು ಹೈಟೆಕ್‌ ಆಸ್ಪತ್ರೆ ಕಟ್ಟಿಸಿಕೊಡುತ್ತಾನೆ. ಇದು ಇಷ್ಟಕ್ಕೆ ನಿಲ್ಲದೆ ಯಾವುದೋ ಭ್ರಷ್ಟ ಫಾರ್ಮಾಸ್ಯುಟಿಕಲ್‌ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಆ ಕಂಪನಿಯ ಕಳಪೆ ಔಷಧಗಳನ್ನೇ ನೀಡಿ ಸಾಮಾನ್ಯ ಜನರ ಪಾಲಿಗೆ ಯಮರಾಯನಾಗುತ್ತಾನೆ. ಇತ್ತೀಚೆಗಂತೂ ಕಣ್ಣು ಹಾಯಿಸಿದಲ್ಲೆಲ್ಲ ಹೈಟೆಕ್‌ ಆಸ್ಪತ್ರೆಗಳು. ವಿಪರ್ಯಾಸ ಎಂದರೆ ನಮ್ಮ ಜನರು ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಒಲವುಳ್ಳವರಾಗಿರುತ್ತಾರೆ. ಇದಕ್ಕೆ ಸರಕಾರಿ ಆಸ್ಪತ್ರೆಗಳ ಕಳಪೆ ನಿರ್ವಹಣೆಯೂ ಒಂದು ಕಾರಣ.

ಕೋಚಿಂಗ್‌ ಹೆಸರಲ್ಲಿ ಹಣ ಸುಲಿಗೆ
ಎಂಜಿನಿಯರಿಂಗ್‌, ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆಂದೇ ಕೋಚಿಂಗ್‌ ಸೆಂಟರ್‌ಗಳಿವೆ. ಇವುಗಳ ಕೆಲಸವೂ ವರ್ಷಪೂರ್ತಿ ಪ್ರವೇಶ ಪರೀಕ್ಷೆಗೆ ಟ್ರೈನಿಂಗ್‌ ಕೊಡುವ ನೆಪದಲ್ಲಿ ಹಣ ಕೀಳುವುದು. ಕೆಲವು ವಿದ್ಯಾರ್ಥಿಗಳು ಪೋಷಕರಲ್ಲಿ ದಂಬಾಲು ಬಿದ್ದು ಕೋಚಿಂಗ್‌ ಸೆಂಟರ್‌ಗಳ ಕದ ಬಡಿದರೆ ಇನ್ನು ಕೆಲವು ಪೋಷಕರು ಏನೇ ಆದರೂ ತಮ್ಮ ಮಗ/ಮಗಳು ಮೆಡಿಕಲ್‌ ಮಾಡಬೇಕು ಎಂದು ಮಕ್ಕಳ ಒಪ್ಪಿಗೆ ಇರದಿದ್ದರೂ ಬಲವಂತದಿಂದ ಸೇರಿಸುತ್ತಾರೆ. ಇಂದು ದುರ್ವ್ಯಸನಗಳಿಗೆ ಈಡಾಗುತ್ತಿರುವ ಬಹುತೇಕ ಬಹಳ ಯುವಕ ಯುವತಿಯರು ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಎಂಬುದು ಇನ್ನೊಂದು ಆಘಾತಕಾರಿ ಸಂಗತಿ. ಇಂದು ನಮ್ಮ ದೇಶದ ಜನಸಂಖ್ಯೆ ಶೇ. 50ಕ್ಕೂ ಹೆಚ್ಚು ಭಾಗ ಯುವಜನಾಂಗ. ಅವ್ಯವಸ್ಥೆಗಳ ಗೂಡಾಗಿರುವ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಎಷ್ಟು ಉತ್ತಮ ನಾಗರಿಕರನ್ನು ದೇಶಕ್ಕೆ ನೀಡಬಲ್ಲವು? ತಮ್ಮ ಮಕ್ಕಳನ್ನು ಡಾಕ್ಟರ್‌ ಅಥವಾ ಎಂಜಿನಿಯರ್‌ ಮಾಡಿಸುತ್ತೇನೆ ಎಂದು ತೀರ್ಮಾನಿಸುವ ಮುನ್ನ ಎಲ್ಲ ತಂದೆ ತಾಯಂದಿರು ಕೇಳಿಕೊಳ್ಳಲೇಬೇಕಾದ ಪ್ರಶ್ನೆ ಇದು.

– ಶಶಿಕಿರಣ್‌ 

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.