ಆರ್ಥಿಕಾಭಿವೃದ್ಧಿಯ ಗುರಿ-ಅಪವ್ಯಯಗಳು


Team Udayavani, May 6, 2017, 3:45 AM IST

ANKANA-2.jpg

ಬಡತನ ನಿವಾರಣೆಯ ಪ್ರಯತ್ನದಲ್ಲಿ ಭಾರತ ಇನ್ನೂ ಹಲವು ಪ್ರಯತ್ನಗಳನ್ನು ಮಾಡಬೇಕಾಗಿರುವುದರಿಂದ ಪೂರ್ಣವಾಗಿ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯನ್ನು ಬೆಂಬಲಿಸುವ ಸಮೃದ್ಧ ಕಾಲ ಇನ್ನೂ ಬಂದಿಲ್ಲ.

ತನಗೆ ಖುಷಿ ನೀಡುವ ವಸ್ತು ಮತ್ತು ಸೇವೆಗಳನ್ನು ಸಂಗ್ರಹಿಸುತ್ತಾ ಇಲ್ಲವೇ ಅನುಭೋಗಿಸುತ್ತಾ ಹೋದಂತೆ ವ್ಯಕ್ತಿಗೆ ತಾನು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದೇನೆ ಅನಿಸುತ್ತದೆ. ಇಂಥ ಅನಿಸಿಕೆ ಸಮಗ್ರವಾಗಿ ಪಸರಿಸಿದಂತೆಲ್ಲ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎನ್ನಬಹುದು. ಮೊದಲಿಲ್ಲದ ಸರಕು ಮತ್ತು ಸೇವೆಗಳ ಅನುಭೋಗ ಈಗ ಹೆಚ್ಚು ಲಭ್ಯವಾಗುತ್ತದೆ. ಆಹಾರ, ಮನೆ, ಬಟ್ಟೆ, ರಸ್ತೆ, ಸಂಪರ್ಕ ಸಾಧನ, ವಾಹನ, ವಿದ್ಯುತ್‌, ವೈದ್ಯಕೀಯ ಸೇವೆ, ವಿದ್ಯೆ ಎಲ್ಲವೂ ಮಾನಸಿಕ ನೆಮ್ಮದಿ ನೀಡುವ ಹಂತಕ್ಕೆ ವ್ಯಕ್ತಿ ಮತ್ತು ದೇಶ ತಲುಪುವುದೇ ಆರ್ಥಿಕಾಭಿವೃದ್ಧಿ.

ಆರ್ಥಿಕಾಭಿವೃದ್ಧಿಯ ಮುಖ್ಯ ಗುರಿ ಮನುಷ್ಯನ ಯೋಗಕ್ಷೇಮವನ್ನು ಹೆಚ್ಚಿಸುವುದೇ ಆಗಿದ್ದರೂ ಅದರಲ್ಲಿ ಸೇರ್ಪಡೆಗೊಂಡಿರುವ ವಿವಿಧ ವರ್ಗಗಳ ಆಸಕ್ತಿಗನುಗುಣವಾಗಿ ಅಭಿವೃದ್ಧಿಯ ನೀತಿಯನ್ನು ರೂಪಿಸಬೇಕಾಗುತ್ತದೆ. ಇಂತಹ ನೀತಿಗಳು ಒಂದೇ ಗುರಿಯ ದಿಕ್ಕಿನಲ್ಲಿ ಆರ್ಥಿಕತೆಯನ್ನು ಕೊಂಡೊಯ್ಯುತ್ತವೆ ಎನ್ನಲಾಗದು. ದೇಶದ ಸಮಗ್ರ ಯೋಗಕ್ಷೇಮವನ್ನು ನಿಖರವಾಗಿ ಅಳೆಯುವ ಮಾಪನಗಳಿಲ್ಲದಿರುವುದರಿಂದ ನೋವು-ಸಂತಸಗಳ ಸಮ್ಮಿಲನದ ಅನಂತರವೂ ಮೊದಲಿಗಿಂತ ಹೆಚ್ಚು ಎತ್ತರದ ಮಟ್ಟಕ್ಕೆ ತಲುಪಿದರೆ ಆರ್ಥಿಕ ನೀತಿಗಳು ಫ‌ಲದಾಯಕ ಎನ್ನಬಹುದು.

ಆರ್ಥಿಕಾಭಿವೃದ್ಧಿಯ ಮುಖ್ಯ ಗುರಿ: ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಬಡತನ ಕಡಿಮೆಗೊಳಿಸಿ ಅಥವಾ ನಿರ್ಮೂಲನಗೊಳಿಸಿ ಜನರು ಸುಖದಾಯಕವಾಗಿರುವಂತೆ ಮಾಡುವುದೇ ಮುಖ್ಯ ಗುರಿ. ಆದರೆ ಈ ಗುರಿಯನ್ನು ತಲುಪಬೇಕಾದರೆ ಇನ್ನೂ ಕೆಲವು ಗುರಿಗಳು ಇರಬೇಕಾಗುತ್ತವೆ. ಮುಖ್ಯವಾಗಿ ಸಂಪನ್ಮೂಲಗಳ ಸಂಚಯನವಾಗಬೇಕು. ಭೂಮಿ, ಶ್ರಮ ಬಂಡವಾಳ, ಸಂಘಟನಾ ಚತುರತೆ ಮುಂತಾದ ಸಂಪತ್ತುಗಳನ್ನು ಬಳಸಿಕೊಳ್ಳಬೇಕು. ಅಂದರೆ ಅಭಿವೃದ್ಧಿಯ ಇನ್ನೊಂದು ಗುರಿ ಉದ್ಯೋಗ ಸೃಷ್ಟಿ. ಹೆಚ್ಚು ಸಂಪನ್ಮೂಲಗಳನ್ನು ಉಪಯೋಗಿಸಬೇಕು. ಇಲ್ಲಿ ಜನರಿಗೆ ಉದ್ಯೋಗ ನೀಡುವ ಮುಖ್ಯ ಉದ್ದೇಶ ಇರುವುದರಿಂದ ನೂರಾರು ನಮೂನೆಯ ವಸ್ತು-ಸೇವೆಗಳ ಉತ್ಪಾದನೆಗೆ ಅವಕಾಶ ಮಾಡುವಂಥ ಆರ್ಥಿಕ ನೀತಿಗಳನ್ನು ರೂಪಿಸಬೇಕಾಗುತ್ತದೆ. ಒಂದೇ ವಸ್ತುವನ್ನು ನೂರಾರು ರೀತಿಯಲ್ಲಿ ಪ್ಯಾಕ್‌ ಮಾಡುವುದು, ಹಲವು ರೀತಿಯಲ್ಲಿ ಮಾರಾಟ ಮಾಡುವುದು ಎಲ್ಲವೂ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ “ಗ್ರಾಹಕನೇ ರಾಜ’. ಹೀಗಾಗಿ “ಏನನ್ನು ಉತ್ಪಾದಿಸಬೇಕು’, “ಹೇಗೆ ಉತ್ಪಾದಿಸಬೇಕು’, “ಯಾರಿಗಾಗಿ ಉತ್ಪಾದಿಸಬೇಕು’ ಎಂಬುದನ್ನು ನಿರ್ಧರಿಸುವ ಆಯ್ಕೆ ಗ್ರಾಹಕನಿಗಿರುತ್ತದೆ. ಒಂದು ವೇಳೆ ಸರಕಾರ ಏನನ್ನು ಉತ್ಪಾದಿಸಬೇಕು ಎಂಬ ಮಿತಿ ಹೇರಿದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನು ಬಯಸುವ ವಸ್ತು ವೈವಿಧ್ಯವಿರುವುದಿಲ್ಲ. ಅದಿಲ್ಲದಿದ್ದರೆ ಹಲವು ನಮೂನೆಯ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಿಲ್ಲ. 

ವಸ್ತು ವೈವಿಧ್ಯದ ಅಪವ್ಯಯಗಳು!: ಉದ್ಯೋಗ ಸೃಷ್ಟಿಯೇ ನಮ್ಮ ಮುಖ್ಯ ಗುರಿಯಾಗಿರುವುದರಿಂದ ದೇಶದಲ್ಲಿ ಒಂದೇ ವಸ್ತುವನ್ನು ಹಲವು ರೂಪ, ಹಲವು ರೀತಿ, ಹಲವು ಪ್ರಮಾಣಗಳಲ್ಲಿ ಉತ್ಪಾದಿಸುವ ಅವಕಾಶ ಇದೆ. ಹೀಗಾದಾಗ ಸಂಪನ್ಮೂಲಗಳ ಬಳಕೆಯ ಪ್ರಮಾಣವೂ ಹೆಚ್ಚುತ್ತದೆ. ದಿನಬಳಕೆ ವಸ್ತುಗಳು ಗ್ರಾಹಕನ ಕೈಗೆ ತಲುಪುವ ಮುಂಚೆ ಸರಿಯಾದ ಪ್ಯಾಕಿಂಗ್‌ ಆಗಬೇಕಾಗುತ್ತದೆ. ನೂರಾರು ನಮೂನೆಯ ವಸ್ತುಗಳನ್ನು ತಯಾರಿಸುವಾಗ ಪ್ಯಾಕಿಂಗ್‌ಗೆ ಎಷ್ಟೋ ಕಾಗದ, ಪ್ಲಾಸ್ಟಿಕ್‌, ಖನಿಜ, ರಾಸಾಯನಿಕ ಮತ್ತು ಶ್ರಮ ಅಪವ್ಯಯವಾಗುತ್ತದೆ. ಇಂತಹ ಪ್ಯಾಕಿಂಗ್‌ ವ್ಯವಸ್ಥೆಯನ್ನು ತಪ್ಪಿಸಲು ಅಥವಾ ಸರಳಗೊಳಿಸಲು ಸಾಧ್ಯವಿಲ್ಲವೇ? ಇಲ್ಲಿ ಬಳಸಲಾಗುವ ಸಂಪನ್ಮೂಲಗಳನ್ನು ಅತಿ ಮುಖ್ಯ ಉದ್ದೇಶಗಳಿಗೆ ಬಳಸಿದರೆ ಎಷ್ಟೋ ನಮೂನೆಯ ಕೊರತೆಗಳನ್ನು ತಪ್ಪಿಸಬಹುದು. ಉದ್ಯೋಗ ಸೃಷ್ಟಿಯೇ ಅಭಿವೃದ್ಧಿಯ ಗುರಿ ಆಗಿರುವುದರಿಂದ ಇಂತಹ ಅಪವ್ಯಯಗಳನ್ನು ಸಹಿಸಿಕೊಳ್ಳಬೇಕು. 

ನೈಸರ್ಗಿಕ ಸಂಪನ್ಮೂಲಗಳ ಸಂಚಯನ-ಅಪವ್ಯಯ ಉದ್ಯೋಗ ಸೃಷ್ಟಿಯ ಗುರಿಯಿರುವ ಅರ್ಥವ್ಯವಸ್ಥೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿಕೊಳ್ಳಲು ಆದ್ಯತೆ ನೀಡುವ ಆರ್ಥಿಕ ನೀತಿ ರೂಪಿಸಲು ರಾಜಕೀಯ ಒತ್ತಡಗಳು ಹೆಚ್ಚು. ನಿರ್ದಿಷ್ಟ ಅವಧಿಯಲ್ಲಿ ಬಳಸಲ್ಪಡುವ ಎಲ್ಲ ನೈಸರ್ಗಿಕ ಸಂಪತ್ತುಗಳಿಗೆ ಆ ಅವಧಿಯಲ್ಲಿ ಬೇಡಿಕೆ ಇದೆಯೇ ಎಂಬುದನ್ನು ನೋಡದೆ ಅವುಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಮುಖ್ಯ ನೀಡಲಾಗುತ್ತದೆ. ನಮಗೆ ಲಭ್ಯವಿರುವ, ಮಿತ ಮತ್ತು ನವೀಕರಿಸಲಾಗದ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿ ಮಾಡುವ ನಗರೀಕರಣ ಮಾತ್ರ ನಮಗೆ ಸಾಕೇ ಎಂಬುದು ಪ್ರಶ್ನೆ. ಅಂದರೆ ಸರಳ ಮಾದರಿಯ ಕಟ್ಟಡ, ವಸತಿ, ಕೈಗಾರಿಕಾ ಸಂಕೀರ್ಣಗಳ ರಚನೆಯಿಂದಲೂ ಈಗಿನಷ್ಟೇ ಮೌಲ್ಯದ ವ್ಯಾಪಾರ-ವಹಿವಾಟನ್ನು ಮಾಡಲು ಸಾಧ್ಯವಿದೆ. 

ಸಂಪರ್ಕ ಮಾಧ್ಯಮ ಕ್ರಾಂತಿ-ಅಪವ್ಯಯ: ಆಧುನಿಕ ಆರ್ಥಿಕಾಭಿವೃದ್ಧಿಯ ಉದ್ಯೋಗಾಧಾರಿತ ಆರ್ಥಿಕ ನೀತಿಯ ಇನ್ನೊಂದು ಮುಖ್ಯ ಗುರಿ ಸಂಪರ್ಕ ಮಾಧ್ಯಮ ಕ್ಷೇತ್ರದ ಕ್ರಾಂತಿ. ಕೇವಲ ರೇಡಿಯೋ ಮತ್ತು ಪತ್ರಿಕಾ ಮಾಧ್ಯಮ ಪ್ರಬಲವಾಗಿದ್ದ ಕಾಲದಲ್ಲಿ ಜನರು ಸರಕಾರ ನೀಡುವ ಆಹಾರಧಾನ್ಯಗಳಿಗಾಗಿ ಸರತಿ ನಿಲ್ಲುತ್ತಿರಲಿಲ್ಲ. ಶುದ್ಧ ಗಾಳಿ, ಶುದ್ಧ ನೀರು ಸೇವಿಸಿ ವಿಷಮುಕ್ತ ಪರಿಸರದಲ್ಲಿ ಬದುಕುತ್ತಿದ್ದರು. ಇಂದು ಒಬ್ಬೊಬ್ಬನ ಕೈಯಲ್ಲಿ ಒಂದೆರಡು ಮೊಬೈಲ್‌ ಫೋನ್‌ಗಳು, ಎಲ್ಲೆಂದರಲ್ಲಿ ಕಂಪ್ಯೂಟರ್‌ಗಳು, ಇಂಟರ್‌ನೆಟ್‌ ಸೌಲಭ್ಯ. ಆದರೆ ಕುಡಿಯುವ ನೀರಿಗಾಗಿ, ಸರಕಾರದ ಆಹಾರ ಧಾನ್ಯಕ್ಕಾಗಿ, ಉಚಿತಗಳ ಮಹಾಪೂರಗಳಿಗಾಗಿ ಕಾಯುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಇದೊಂದು ಶುಷ್ಕ ಅಭಿವೃದ್ಧಿ. ಒಬ್ಬನಿಗೆ ಕೇವಲ ಫೋನ್‌ ಮಾಡುವ ಉದ್ದೇಶಕ್ಕೆ ಮಾತ್ರ ಮೊಬೈಲ್‌ ಫೋನ್‌ ಬೇಕು ಎಂದರೂ ಅವನು ಆ ಮೊಬೈಲ್‌ ಫೋನ್‌ನಲ್ಲಿ ತಾನು ಬಳಸದ ಏನೇನೋ ಸೇವೆಗಳನ್ನು ಕಡ್ಡಾಯವಾಗಿ ಕೊಳ್ಳಬೇಕು. ಅಂದರೆ, ಇಲೆಕ್ಟ್ರಾನಿಕ್‌ ಸಂಪರ್ಕ ಸಾಧನಗಳು ಗ್ರಾಹಕನಿಗೆ ಬೇಕಾದ್ದು, ಬೇಡದ್ದು ಎರಡನ್ನೂ ಒತ್ತಾಯಪೂರ್ವಕವಾಗಿ ನೀಡುತ್ತವೆ. ಗ್ರಾಹಕನಿಗೆ ಅದು ಬೇಡವಾಗಿದ್ದರೂ, ಅಲ್ಲಿ ಪ್ರಕೃತಿಯ ಯಾವುದೋ ಬೆಲೆ ಬಾಳುವ ಸಂಪತ್ತಿನ ಬಳಕೆಯಾಗಿದೆ ಮತ್ತು ಅದು ಅಪವ್ಯಯಗೊಂಡಿದೆ ಎಂಬುದು ಮಾತ್ರ ಸತ್ಯ.

ಸ್ವಾಮ್ಯಯುತ ಪೈಪೋಟಿ ಮತ್ತು ಅಪವ್ಯಯಗಳು: ವಸ್ತುವೊಂದರ ಬೆಲೆ ಸಾರ್ವತ್ರಿಕ ಸಮತೋಲನ ವ್ಯವಸ್ಥೆಯಲ್ಲಿ ಹಲವಾರು ಚಲಕಗಳ ಸಹಯೋಗದಿಂದ ನಿರ್ಧರಿಸಲ್ಪಡುತ್ತದೆ.  ಇಂತಹ ಮಾರುಕಟ್ಟೆ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ, ಇರುವ ಆವಶ್ಯಕತೆಗಿಂತ ಜಾಸ್ತಿ ಉತ್ಪಾದನೆ ಆಗುವ ಸಾಧ್ಯತೆಯೂ ಇರುತ್ತದೆ. ಈ ರೀತಿ ಅತಿ ಉತ್ಪಾದನೆಯು ಬೇಡಿಕೆ ಕೊರತೆಯಿಂದಲ್ಲ, ಲಾಭದ ಆಮಿಷದಿಂದ ಉತ್ಪಾದಕರು ಯಥೇತ್ಛವಾಗಿ ಸಂಪನ್ಮೂಲಗಳನ್ನು ಬಳಸಿದ್ದರಿಂದ ಸೃಷ್ಟಿಯಾಗಿರುತ್ತದೆ. ಹೀಗೆ ಮಾರಾಟ ಮಾಡುವಾಗ ಅಥವಾ ವಸ್ತುವೊಂದನ್ನು ಉತ್ಪಾದಿಸುವಾಗ ವಸ್ತು ವೈವಿಧ್ಯದ ಹೆಸರಿನಲ್ಲಿ ಅನಗತ್ಯವಾಗಿ ನೈಸರ್ಗಿಕ ಅಥವಾ ಮಾನವ ಸಂಪನ್ಮೂಲ ಬಳಕೆಯಾಗುತ್ತದೆ. ಇದರಿಂದಾಗಿ ವಸ್ತು ಅನಗತ್ಯ ದುಬಾರಿಯಾಗುವುದಲ್ಲದೇ ದೇಶದ ನೈಸರ್ಗಿಕ ಸಂಪತ್ತು ಅಪವ್ಯಯವಾಗುತ್ತದೆ. 

ಕೃಷಿ ಕ್ಷೇತ್ರದ ಅವಗಣನೆ: ಹೆಚ್ಚುತ್ತಿರುವ ಯುವಶಕ್ತಿಗೆ ಕೆಲಸ ನೀಡುವುದು ನಗರೀಕರಣದಿಂದ ಸಾಧ್ಯ ಎಂಬ ತಪ್ಪು ಕಲ್ಪನೆ ಆರ್ಥಿಕ ತಜ್ಞರಲ್ಲಿದೆ. ಕೃಷಿ ಕ್ಷೇತ್ರವು ಎಲ್ಲ ಕಾಲದಲ್ಲೂ ಸಾಂಪ್ರದಾಯಿಕವಾಗಿಯೇ ಇರುತ್ತದೆ ಎಂಬ ಊಹೆ ಇದಕ್ಕೆ ಮುಖ್ಯ ಕಾರಣ. ಸ್ವಾವಲಂಬಿ ಗ್ರಾಮೀಣ ಆರ್ಥಿಕತೆ, ಪರಿಸರಸ್ನೇಹಿ ಆರ್ಥಿಕ ನೀತಿ, ಕೃಷಿ ಸಂಬಂಧಿ ಚಟುವಟಿಕೆಗಳ ಅಭಿವೃದ್ಧಿ, ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಸೂಕ್ತ ಕೃಷಿ, ಕಿರು ನೀರಾವರಿ ಯೋಜನೆ, ಸಸ್ಯಮೂಲದ ಇಂಧನ ತಯಾರಿಕೆ, ಅಂತರ ಬೇಸಾಯ, ಬಳಕೆಯಾಗದ ಕೃಷಿಯೋಗ್ಯ ಭೂಮಿಯ ಬಳಕೆ ಮುಂತಾಗಿ ಪ್ರೋತ್ಸಾಹ ಆದ್ಯತೆ ನೀಡಿದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ದುರದೃಷ್ಟವಶಾತ್‌ ಇತ್ತೀಚೆಗಿನ ವರ್ಷಗಳಲ್ಲಿ ಅತೀ ಹೆಚ್ಚು ಉದ್ಯೋಗ ನೀಡುವ ಕೃಷಿ ಕ್ಷೇತ್ರವನ್ನೇ ಕಡೆಗಣಿಸಲಾಗಿದೆ. ಮನುಷ್ಯನ ಹಸಿವು ನಿವಾರಣೆಯಾಗಬೇಕಾದರೆ ಬೇಸಾಯ ಬೇಕು. ಕೈಗಾರಿಕೆಗಳಿಗೆ ಮುಮ್ಮುಖ ಉದ್ಯೋಗ ಸೃಷ್ಟಿ ಸಾಮರ್ಥ್ಯ ಮಾತ್ರವಿದ್ದರೆ ಕೃಷಿಗೆ ಹಿಮ್ಮುಖ ಮತ್ತು ಮುಮ್ಮುಖ ಎರಡೂ ಪರಿಣಾಮದ ಉದ್ಯೋಗ ಸಾಮರ್ಥ್ಯವಿದೆ.

ಒಟ್ಟಿನಲ್ಲಿ ಬಡತನ ನಿವಾರಣೆಯ ಪ್ರಯತ್ನದಲ್ಲಿ ಭಾರತ ಇನ್ನೂ ಹಲವು ಪ್ರಯತ್ನಗಳನ್ನು ಮಾಡಬೇಕಾಗಿರುವುದರಿಂದ ಪೂರ್ಣವಾಗಿ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯನ್ನು ಬೆಂಬಲಿಸುವ ಸಮೃದ್ಧ ಕಾಲ ಇನ್ನೂ ಬಂದಿಲ್ಲ. 1991ರಿಂದೀಚೆಗೆ ಉದಾರೀಕರಣ ಮತ್ತು ಖಾಸಗೀಕರಣದ ಮೂಲಕ ಪ್ರಗತಿಯ ದರ ಹೆಚ್ಚಾದರೂ ಇದರಲ್ಲಿ ಉದ್ವೇಗ, ಒತ್ತಡ, ಪರಿಸರ ನಿರ್ಮೂಲನೆ ಸಾಕಷ್ಟು ಕಂಡುಬಂದಿದೆ. ಜನರ ಅನುಭೋಗ ಪ್ರವೃತ್ತಿಯಲ್ಲಿ ಬದಲಾವಣೆ ಆಗಿದೆ ನಿಜ. ಆದರೆ ಸಾಮೂಹಿಕ ಯೋಗಕ್ಷೇಮವನ್ನು ಅವರು ಅನುಭೋಗಿಸುವ ಶುದ್ಧ ಆಹಾರ, ನೀರು, ಗಾಳಿ, ಒತ್ತಡ ರಹಿತ ಜೀವನಗಳಿಗೆ ಹೋಲಿಸಿದಾಗ ಆರ್ಥಿಕ ಪ್ರಗತಿ ಸಮಾಧಾನಕರವಾಗಿಲ್ಲ. ಮಾರುಕಟ್ಟೆ ಅರ್ಥವ್ಯವಸ್ಥೆ, ಸ್ವಾಮ್ಯಯುತ ಪೈಪೋಟಿ ಹಾಗೂ ಉದ್ಯೋಗ ಸೃಷ್ಟಿಯ ಆರ್ಥಿಕ ಗುರಿಗಳು ದೇಶದ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪತ್ತುಗಳನ್ನು ಧಾರಾಳವಾಗಿ ಅಪವ್ಯಯ ಮಾಡಿವೆ. ಉತ್ಪಾದನಾ ವೈವಿಧ್ಯದ ಸ್ಪರ್ಧೆ ಮತ್ತು ಜಾಹೀರಾತು ವೆಚ್ಚಗಳಲ್ಲಿ ಸ್ಪರ್ಧೆಯಿರುವುದರಿಂದ ವಸ್ತುವೊಂದು ಗ್ರಾಹಕನಿಗೆ ದುಬಾರಿಯಾಗುವುದಲ್ಲದೇ ದೇಶದ ಅಮೂಲ್ಯ ಸಂಪತ್ತಿನ ಅಪವ್ಯಯವೂ ಆಗುತ್ತದೆ. ಸ್ವಾಮ್ಯಯುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಅಪವ್ಯಯಗಳ ಬಗ್ಗೆ ಸರಕಾರ ಸೂಕ್ತ ನೀತಿಯನ್ನು ರೂಪಿಸುವುದರೊಂದಿಗೆ, ಒಂದು ವಸ್ತುವಿನ ಮಾರಾಟವನ್ನು ಅತೀ ಸಣ್ಣ ಯುನಿಟ್‌ಗಳಲ್ಲಿ ಪ್ಯಾಕ್‌ ಮಾಡಿ ಮಾರಾಟ ಮಾಡುವ ವ್ಯವಸ್ಥೆಯನ್ನು ನಿಯಂತ್ರಿಸಬೇಕು. ಮಾರುಕಟ್ಟೆ ಅರ್ಥವ್ಯವಸ್ಥೆ, ಜಾಗತೀಕರಣ, ಖಾಸಗೀಕರಣದಂತಹ ಆರ್ಥಿಕ ನೀತಿಯನ್ನು ನಾವು ಬೆಂಬಲಿಸುವುದರೊಂದಿಗೆ ಅಲ್ಲಿ ಆಗುತ್ತಿರುವ ಅಪವ್ಯಯಗಳ ಬಗ್ಗೆ ಕೂಡ ಸರಿಯಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಎಂ. ಚೆನ್ನ ಪೂಜಾರಿ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.