ನಮೋ 3 ವರ್ಷ: ಗಿಮಿಕ್‌ಗಳು ಇನ್ನು ಸಾಕು


Team Udayavani, May 27, 2017, 2:25 AM IST

Kumaraswamy-H-D-4-600.jpg

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ, ಬಹುಚರ್ಚಿತವಾಗುವಂತೆಯೂ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಕಾರ ಮಾಡಿದ್ದೇನು? ಎದ್ದದ್ದೆಲ್ಲಿ? ಬಿದ್ದಿದ್ದೆಲ್ಲಿ? ಈ ಕುರಿತಾಗಿ ರಾಜಕೀಯ ನಾಯಕರ ವಸ್ತುನಿಷ್ಠ ಅಭಿಪ್ರಾಯ ಇಲ್ಲಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೂರು ವರ್ಷಗಳಲ್ಲಿ ಪ್ರಧಾನಿ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಘೋಷಣೆ­ಯೊಂದಿಗೆ ಮಾಡಿದ ಭಾಷಣಗಳು, ‘ಮನ್‌ಕಿ ಬಾತ್‌’ ಮೂಲಕ ಆಡಿದ ಮಾತುಗಳು ಕೇಳಲು ಹಿತವಾಗಿತ್ತು ಎನ್ನುವುದು ಬಿಟ್ಟರೆ ಬೇರೇನೂ ಆಗಿಲ್ಲ. ಚುನಾವಣೆಗೆ ಮುನ್ನ ಅವರು ದೇಶದ ಜನರ ಮುಂದಿಟ್ಟಿದ್ದ ಕನಸುಗಳು ನನಸಾಗಿಲ್ಲ. ದೇಶದ ಅಭಿವೃದ್ಧಿ ಮಾಡುವುದು ಎಂದರೆ ಕನಸುಗಳ ಮಾರ್ಕೆಟಿಂಗ್‌ ಮಾಡುವುದಲ್ಲ. ಭಯೋತ್ಪಾದನೆ ನಿಲ್ಲಲಿಲ್ಲ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆತ್ಮಹತ್ಯೆ ನಿಲ್ಲಲಿಲ್ಲ, ನಿರಂತರ ಬರಕ್ಕೆ ತುತ್ತಾದ ಕರ್ನಾ­ಟಕದ ಬಗ್ಗೆ ಕೇಂದ್ರ ಸರ್ಕಾರ ಕರುಣೆ ತೋರಲಿಲ್ಲ. ಮಾತಿನ ಮೋಡಿ ಮೂಲಕ ‘ಐ ವಾಷ್‌’ ಹಾಗೂ ‘ಮೈಂಡ್‌ ವಾಷ್‌’ ಮಾಡುತ್ತಿರುವುದಷ್ಟೇ ಇವರ ಸಾಧನೆ. ಕೆಲವೇ ಆಯ್ದ ಕೈಗಾರಿಕೋದ್ಯಮಿಗಳ ಕಪಿ ಮುಷ್ಠಿಯಲ್ಲಿ ಕೇಂದ್ರ ಸರ್ಕಾರ ಸಿಲುಕಿದೆ. ಚುನಾವಣೆಗೆ ಮುಂಚೆ ಬಿಜೆಪಿ ಬಿಂಬಿಸಿಕೊಂಡಿದ್ದ ಪರಿ ನೋಡಿದರೆ ಇಡೀ ದೇಶದ ಸಮಗ್ರ ಚಿತ್ರಣ ಬದಲಾಗುತ್ತದೆ ಎಂದು ನಿರೀಕ್ಷಿಸಿದ್ದೇನೋ ಹೌದು. ಆದರೆ,  ಸರ್ಕಾರ ಸಾಗಿ ಬಂದ ಹಾದಿ ನೋಡಿದರೆ ಯಾವುದೇ ಜಾದೂ ನಡೆಯಲಿಲ್ಲ. ‘ಒನ್‌ ಮ್ಯಾನ್‌’ ಶೋ ದೇಶದ ಜನರಿಗೂ ಅರ್ಥವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬ ನಾಣ್ಣುಡಿ ನೆನಪಾಗುತ್ತದೆ. ಮೂರು ಅಂಶಗಳನ್ನು ರಾಜ್ಯದ ಜನತೆ ಮುಂದಿಡುತ್ತೇನೆ. ಪ್ರಧಾನಮಂತ್ರಿ ಫ‌ಸಲ್‌ ಭಿಮಾ ಯೋಜನೆಯಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. 

ಕರ್ನಾಟಕದಲ್ಲಿ ಕಳೆದ ವರ್ಷ 2500 ಕೋಟಿ ರೂ. ಪ್ರೀಮಿಯಂ ರೈತರು ಪಾವತಿಸಿದ್ದಾರೆ. ಆದರೆ, ಬೆಳೆನಷ್ಟಕ್ಕೆ ರೈತರಿಗೆ ವಿಮೆಕೊಟ್ಟಿಲ್ಲ. ದೇಶಾದ್ಯಂತ 80 ಸಾವಿರ ಕೋಟಿ ರೂ. ರೈತರಿಂದ ಪ್ರೀಮಿಯಂ ಪಾವತಿ­ಯಾಗಿದೆ ಎಂಬ ಅಂದಾಜು ಇದೆ. ಹಾಗಾದರೆ, ಇಷ್ಟು ದೊಡ್ಡ ಮೊತ್ತ ಯಾರಿಗೆ ತಲುಪಿದೆ? ಕೇಂದ್ರ ಸರ್ಕಾರ ಒಪ್ಪಂದ ಮಾಡಿ­ಕೊಂಡಿರುವ ಆ ವಿಮಾ ಕಂಪನಿಗೂ ಮೋದಿ ಅಥವಾ ಬಿಜೆಪಿಗೆ  ಸಂಬಂಧ ಇದೆಯಾ ಎಂಬ ಅನುಮಾನವೂ ಇದೆ. ಸ್ಮಾರ್ಟ್‌ ಸಿಟಿ, ಅಮೃತ್‌ ಸಿಟಿ ಯೋಜನೆಗಳಡಿ ಕೇಂದ್ರ ಸರ್ಕಾರ ಕೊಡುವ ಹಣಕ್ಕಿಂತ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಭರಿಸುವ ಹಣವೇ ಹೆಚ್ಚು. ಆ ಯೋಜನೆಗೆ ಆಯ್ಕೆ­ಯಾ­ಗಬೇಕಾದರೆ ಕೊಳೆಗೇರಿ ಇರಬಾರದು, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದೆಲ್ಲಾ ಷರತ್ತುಗಳಿವೆ. ಎಲ್ಲವೂ ಸರಿ ಇದ್ದರೆ ಯೋಜನೆ ಯಾಕೆ ಬೇಕು? 

ಸ್ವಚ್ಛ ಭಾರತ್‌ ಬಗ್ಗೆ ದೊಡ್ಡದಾಗಿ ಹೇಳಿ­ಕೊಳ್ಳುತ್ತಾರೆ. ಪ್ರಾರಂಭದಲ್ಲಿ ಗರಿ ಗರಿ ಬಟ್ಟೆ ಹಾಕಿಕೊಂಡು ಪೊರಕೆ ಹಿಡಿದು ಮಾಧ್ಯಮಗಳಿಗೆ ಪೋಸ್‌ ಕೊಟ್ಟಿದ್ದು ಬಿಟ್ಟರೆ ಏನೂ ಆಗಲಿಲ್ಲ. ಮುಂದಿನ 2 ವರ್ಷದಲ್ಲಾದರೂ ಮೋದಿ ‘ಗಿಮಿಕ್‌’­ಗಳಿಗೆ ಒತ್ತುಕೊಡು­ವುದು ಬಿಟ್ಟು ಜನಸಾಮಾನ್ಯರ ಸಮಸ್ಯೆ ನಿವಾರಿಸಲು ಮುಂದಿನ ವರ್ಷಗಳಲ್ಲಿ  ಪ್ರಯತ್ನಪಡಲಿ.

– ಎಚ್‌.ಡಿ.ಕುಮಾರಸ್ವಾಮಿ ; ಮಾಜಿ ಮುಖ್ಯಮಂತ್ರಿಗಳು

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.