ತಮಿಳುನಾಡಿನಲ್ಲಿ ಮರಳಿ ಚುನಾವಣೆ ನಡೆಸಬೇಕಿತ್ತು


Team Udayavani, Feb 19, 2017, 2:46 AM IST

18-ANKANA-3.jpg

ತ.ನಾಡಿನಲ್ಲಿ ಸರಕಾರ ರಚನೆಗೆ ಶಶಿಕಲಾ ಆಹ್ವಾನಿಸುವ ಮುನ್ನ ಸುಪ್ರೀಂ ಕೋರ್ಟ್‌ ತೀರ್ಪಿಗೆಕಾದ  ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ನಿರ್ಧಾರವನ್ನು ಬೆಂಬಲಿಸಿದ್ದ ತ.ನಾಡು ಪ್ರದೇಶ ಕಾಂಗ್ರೆಸ್‌ ಕಮಿಟಿ ಮಾಜಿ ಅಧ್ಯಕ್ಷ ಇವಿಕೆಎಸ್‌ ಇಳಂಗೋವನ್‌ ಅದೇ ರಾಜ್ಯಪಾಲರು ಶಶಿಕಲಾ ಬೆಂಬಲಿಗ ಪಳನಿಸ್ವಾಮಿಗೆ ಸರಕಾರ ರಚಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿದ್ದಾರೆ. ಯಾಕೆ ಅನ್ನುವುದಕ್ಕೆ ಉತ್ತರ ಇಳಂಗೋವನ್‌ ರೆಡಿಫ್ ಡಾಟ್‌ ಕಾಮ್‌ಗೆ ನೀಡಿದ ಈ ಸಂದರ್ಶನದಲ್ಲಿದೆ.

ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಪ್ರಸ್ತುತ ತುಂಬ ಪ್ರಕ್ಷುಬ್ಧವಾಗಿದೆಯಲ್ಲ?
ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಪ್ರಕ್ಷುಬ್ಧ ಮಾತ್ರವಷ್ಟೇ ಅಲ್ಲ, ತುಂಬಾ ಅಸ್ಥಿರವೂ ಆಗಿದೆ. ನನಗೆ ತೋರುವ ಒಂದೇ ಒಂದು ಪರಿಹಾರವೆಂದರೆ ಈಗಿರುವ ವಿಧಾನಸಭೆ ವಿಸರ್ಜಿಸಿ ಮತ್ತೆ ಹೊಸದಾಗಿ ಚುನಾವಣೆ ನಡೆಸುವುದು. ಹಾಗೆ ಮಾಡಿದರಷ್ಟೇ ಎಲ್ಲವೂ ತಹಬಂದಿಗೆ ಬಂದೀತು, ಇಲ್ಲವಾದರೆ ಈ ಹಗ್ಗಜಗ್ಗಾಟ ಮುಂದುವರಿಯುತ್ತಲೇ ಇರುತ್ತದೆ. ಪನ್ನೀರ್‌ಸೆಲ್ವಮ್‌, ಪಳನಿಸ್ವಾಮಿ, ಶಶಿಕಲಾ- ಇಂತಹ ಜನರ ಬಗ್ಗೆ ತಮಿಳುನಾಡಿನ ಜನರು ರೋಸಿಹೋಗಿದ್ದಾರೆ ಅನ್ನುವುದು ಸ್ಪಷ್ಟ. ಜನರು ಕೂಡ ಚುನಾವಣೆಯನ್ನು ಬಯಸಿದ್ದಾರೆ. ಚುನಾವಣೆ ನಡೆಸುವೊಂದೇ ಪರಿಹಾರ.

ಆದರೆ, ಸಾರ್ವಜನಿಕ ಭಾವನೆ ಎಂಬ ಒಂದೇ ಕಾರಣಕ್ಕಾಗಿ ರಾಜ್ಯಪಾಲರು ಚುನಾವಣೆಯ ಮೊರೆಹೊಗಬಹುದೇ? ಪಳನಿಸ್ವಾಮಿ ಈಗ ಬಹುಮತವನ್ನು ಸಾಬೀತುಪಡಿಸಿದ್ದಾರಲ್ಲ?  
ತಮಿಳುನಾಡಿನಲ್ಲಿ ಜನರ ಅಭಿಪ್ರಾಯ ಶಶಿಕಲಾ ಪರವಾಗಿ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಜನರು ಆಕೆಯನ್ನು ಕಳೆದ 30 ವರ್ಷಗಳಲ್ಲಿ ಕಂಡಿದ್ದಾರೆ, ಆಕೆ ಎಂಥವರು ಅನ್ನುವುದನ್ನು ಅನುಭವಿಸಿದ್ದಾರೆ. ಜಯಲಲಿತಾ ಅವರಿಗೆ ಆಪ್ತರಾಗಿದ್ದರು ಎಂದ ಮಾತ್ರಕ್ಕೆ ಶಶಿಕಲಾ ಮುಖ್ಯಮಂತ್ರಿಯಾಗಕೂಡದು ಅಂದವರೇ ಅಧಿಕ. ಈಗ, ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಆಕೆ ಸೆರೆವಾಸ ಅನುಭವಿಸುತ್ತಿದ್ದರೂ ಎಐಎಡಿಎಂಕೆ ಆಕೆಯ ಕಪಿಮುಷ್ಠಿಯಲ್ಲಿದೆ. ಈಗ ರೂಪುಗೊಂಡಿರುವ ಸರಕಾರದ್ದೂ ಅದೇ ಕತೆ. ಇದು ಜನಾಭಿಪ್ರಾಯಕ್ಕೆ, ಮತದಾರರ ಆಶಯಕ್ಕೆ ವಿರುದ್ಧವಾದುದು ಅಲ್ಲವೇ? ಶಶಿಕಲಾ ಮತ್ತು ಆಕೆಯ ನಿಯಂತ್ರಣದಲ್ಲಿ ಇರುವ ಪಳನಿಸ್ವಾಮಿ ಪರ ಶಾಸಕರು ಕಳೆದ ಹಲವಾರು ದಿನಗಳಿಂದ ಚೆನ್ನೈಯಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಅವರು ತಮ್ಮ ಸ್ವಕ್ಷೇತ್ರಕ್ಕೆ ಹಿಂದಿರುಗಲಿ, ಆಗ ಅವರಿಗೆ ಜನಾಭಿಪ್ರಾಯ ಏನೆಂಬುದು ಗೊತ್ತಾಗುತ್ತದೆ. ರಾಜೀನಾಮೆ ನೀಡುವಂತೆ ಮತದಾರರೇ ಒತ್ತಡ ತರುತ್ತಾರೆ.  

ಅಂದರೆ, ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರು ಜನಾಭಿಪ್ರಾಯಕ್ಕೂ ಬೆಲೆ ಕೊಡಬೇಕು, ಬರೇ ಶಾಸಕ ಬಲದ ಅಂಕಗಣಿತಕ್ಕೆ ಮಾತ್ರ ಅಲ್ಲ ಅನ್ನುತ್ತಿದ್ದೀರಾ?    
ನಿಜ. ರಾಜ್ಯಪಾಲರು ಪಳನಿಸ್ವಾಮಿ ಅಥವಾ ಪನ್ನೀರ್‌ಸೆಲ್ವಮ್‌ ಅವರಿರುವ ಶಾಸಕ ಬಲವನ್ನಷ್ಟೇ ಗಣನೆಗೆ ತೆಗೆದುಕೊಳ್ಳುವ ಬದಲು ತಮಿಳುನಾಡಿನ ಜನರ ಭಾವನೆಗಳು ಯಾವ ಕಡೆಗಿವೆ ಎಂಬುದರ ಬಗೆಗೂ ಯೋಚಿಸಬೇಕಾಗಿತ್ತು. ನಾನು ಸಂವಿಧಾನ ಏನು ಹೇಳುತ್ತದೆ ಅಥವಾ ಈ ಸಂಬಂಧವಾದ ಕಾನೂನು ಮತ್ತು ನಿಯಮಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಆದರೆ ಭಾರತದ ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನು ರಾಜ್ಯಪಾಲರು ಜನರ ಭಾವನೆಗಳಿಗೂ ಬೆಲೆ ಕೊಡಬೇಕಾಗಿತ್ತು ಎಂದೇ ಭಾವಿಸಿದ್ದೇನೆ. 

ಜನರು ತಮ್ಮ ಬಗ್ಗೆ ಹೊಂದಿರುವ ಹೊಂದಿರುವ ಖಚಿತ ಅಭಿಪ್ರಾಯದ ಪ್ರಾಬಲ್ಯವನ್ನು ಅಳೆಯುವಲ್ಲಿ ಪಳನಿಸ್ವಾಮಿಗೆ ಬೆಂಬಲ ನೀಡಿರುವ ಶಾಸಕರು ವಿಫ‌ಲರಾಗಿದ್ದಾರೆಯೇ?  
ಜಯಲಲಿತಾ ತೊಂದರೆಗೀಡಾಗಿದ್ದೇ ಶಶಿಕಲಾ ಅವರಿಂದ ಎಂಬುದು ತಮಿಳುನಾಡಿನ ಜನರ ಖಚಿತ ಅಭಿಪ್ರಾಯ ಮತ್ತು ಆಕೆ ರಾಜಕೀಯ ಪ್ರವೇಶಿಸಬಾರದು ಎಂದೇ ಅವರು ಬಯಸಿದ್ದಾರೆ. ಈಗ ಆಕೆ ಜೈಲಿನಲ್ಲಿದ್ದಾರೆ ನಿಜ. ಆದರೆ ಶಾಸಕರನ್ನೆಲ್ಲ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ. ಈ ಶಾಸಕರ ಬಗ್ಗೆ ಜನರು ತೀರಾ ಆಕ್ರೋಶಗೊಂಡಿರುವುದು ಇದೇ ಕಾರಣಕ್ಕಾಗಿ. ಶಾಸಕರು ಈ ವಿದ್ಯಮಾನವನ್ನು ಇನ್ನುಳಿದ ನಾಲ್ಕೂವರೆ ವರ್ಷತ.ನಾಡು ಪ್ರ. ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷರದಲ್ಲಿ ಉಳಿಯುವ ಅವಕಾಶವನ್ನಾಗಿಯಷ್ಟೇ ತೆಗೆದುಕೊಂಡಿದ್ದಾರೆ. ಆದರೆ ತಮ್ಮ ತಮ್ಮ ಕ್ಷೇತ್ರಕ್ಕೆ ಹಿಂದಿರುಗಿದಾಗ ಅವರಿಗೆ ಎಲ್ಲವೂ ತಿಳಿಯುತ್ತದೆ. ಜನರೇ ಬಲವಂತದಿಂದ ಅವರ ರಾಜೀನಾಮೆ ಕೊಡಿಸುತ್ತಾರೆ. 

ದೀರ್ಘ‌ಕಾಲಿಕ ರಾಜಕೀಯ ಜೀವನದ ದೂರದೃಷ್ಟಿ ಇರುತ್ತಿದ್ದರೆ ಈ ಶಾಸಕರು ಹೀಗೆ ಮಾಡುತ್ತಿರಲಿಲ್ಲ ಅಲ್ಲವೇ? ಕ್ಷಣಿಕ ಅಧಿಕಾರದ ಆಸೆಗಾಗಿ ಯಾಕೆ ಅವರು ಹೀಗೆ ಮಾಡುತ್ತಿದ್ದಾರೆ?
ನಿಮ್ಮ ಅಭಿಪ್ರಾಯ ನಿಜ. ದೀರ್ಘ‌ ರಾಜಕೀಯ ಇನ್ನಿಂಗ್ಸ್‌ ಕಟ್ಟುವ ದೂರಾಲೋಚನೆ ಇರುತ್ತಿದ್ದರೆ ಅವರು ಪಳನಿಸ್ವಾಮಿ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ. ಅವರು ತತ್‌ಕ್ಷಣಕ್ಕೆ ತಮ್ಮ ಮುಂದಿರುವ ನಾಲ್ಕೂವರೆ ವರ್ಷಗಳ ಅಧಿಕಾರ ಅವಕಾಶದ ಬಗ್ಗೆ ಮಾತ್ರ ಯೋಚಿಸಿದ್ದಾರೆ. 

ಸದನದಲ್ಲಿ ವಿಶ್ವಾಸಮತ ಯಾಚನೆಯ ತನಕವೂ ಶಾಸಕರು ರೆಸಾರ್ಟ್‌ನಲ್ಲಿಯೇ ಉಳಿದುಕೊಂಡಿದ್ದರಲ್ಲ. ಇದು ಪ್ರಜಾತಂತ್ರದ ಅಣಕವಲ್ಲವೆ?    
ಗೂಂಡಾಗಳನ್ನು ಬಳಸಿ ಶಾಸಕರನ್ನು ಒಂದೆಡೆ ಹಿಡಿದಿಡುವುದು ಪ್ರಜಾತಂತ್ರಕ್ಕೆ ಒಂದು ಸವಾಲೇ ನಿಜ. ಪಳನಿಸ್ವಾಮಿ ಅವರನ್ನು ಸರಕಾರ ರಚಿಸಲು ಆಹ್ವಾನಿಸುವುದಕ್ಕೆ ಮುನ್ನ ರಾಜ್ಯಪಾಲರು ಈ ವಿಚಾರಗಳನ್ನೆಲ್ಲ ಯಾಕೆ ಗಣನೆಗೆ ತೆಗೆದುಕೊಂಡಿಲ್ಲ ಅನ್ನುವುದು ನನಗೆ ಅಚ್ಚರಿ ಹುಟ್ಟಿಸಿದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಿ ಮರಳಿ ಚುನಾವಣೆ ಘೋಷಿಸುವ ಬಗ್ಗೆ ಆಲೋಚಿಸಬೇಕಿತ್ತು. ಅದು ಉತ್ತಮ ನಿರ್ಧಾರವಾಗಿರುತ್ತಿತ್ತು. ಪಳನಿಸ್ವಾಮಿ ಅವರಿಗೆ ಬೆಂಬಲ ಸೂಚಿಸಿರುವ ಶಾಸಕರು ಅಧಿಕಾರದ ಲಾಲಸೆ ಹೊಂದಿರುವುದರಿಂದ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲೂ ರಾಜಕೀಯ ಹೊಸ ತಿರುವ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ನನಗಿತ್ತು. ಅದೃಷ್ಟವಶಾತ್‌ ಹಾಗಾಗಲಿಲ್ಲ. ಆದರೆ ಮತ್ತೆ ಚುನಾವಣೆ ನಡೆಸಿದರೆ ಮಾತ್ರ ಸ್ಥಿರ ಸರಕಾರ ಸ್ಥಾಪನೆಯಾಗಲು ಸಾಧ್ಯ ಅನ್ನುವುದು ನನ್ನ ಖಚಿತ ಅಭಿಪ್ರಾಯ. 

ಚುನಾವಣೆ ನಡೆದರೆ ಡಿಎಂಕೆ ಗೆಲ್ಲುತ್ತದೆಯೇ?     
ಖಂಡಿತ. ಡಿಎಂಕೆ – ಕಾಂಗ್ರೆಸ್‌ ಮೈತ್ರಿಕೂಟ ಜಯಭೇರಿ ಬಾರಿಸುತ್ತದೆ. ಜನರು ಎಐಎಡಿಎಂಕೆ ಬಗ್ಗೆ ರೋಸಿಹೋಗಿದ್ದಾರೆ.

ಆದರೆ ಡಿಎಂಕೆ ಇಮೇಜ್‌ ಕೂಡ ಚೆನ್ನಾಗಿಲ್ಲವಲ್ಲ?     
ರಾಜ್ಯ ಹೊಂದಿರುವ ಪರ್ಯಾಯ ಆಯ್ಕೆ ಅದೊಂದೇ. ತ.ನಾಡಿನ ಮೂರು ದೊಡ್ಡ ಪಕ್ಷಗಳೆಂದರೆ ಎಐಎಡಿಂಕೆ, ಡಿಎಂಕೆ ಮತ್ತು ಕಾಂಗ್ರೆಸ್‌ ಮಾತ್ರ. ಇನ್ನಾéವ ಪಕ್ಷವೂ ಗೆದ್ದುಬಂದಿಲ್ಲ. ಜನಾಭಿಪ್ರಾಯ ಎಐಎಡಿಎಂಕೆಗೆ ವಿರೋಧವಾಗಿರುವ ಕಾರಣ ನಮ್ಮ ಮೈತ್ರಿಕೂಟ ಖಂಡಿತ ಜಯ ಗಳಿಸುತ್ತದೆ.

ಇವಿಕೆಎಸ್‌, ತ.ನಾಡು ಪ್ರ. ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.