ಭಾವೈಕ್ಯದ ಶಾಂತಿವನ, ಬೃಂದಾವನ


Team Udayavani, Aug 9, 2017, 7:10 AM IST

09-STATE-16.jpg

ಶ್ರೀಗುರು ರಾಘವೇಂದ್ರರು ಸಶರೀರ ಬೃಂದಾವನಸ್ಥರಾಗಿ ಇಂದಿಗೆ 346 ವಸಂತಗಳು ಉರುಳಿದವು. ಯಾವುದೇ ಘಟನೆ ಅಥವಾ ವಿಷಯ ಯುಗ ಯುಗಾಂತರಗಳಲ್ಲಿ ಸದಾ ಪ್ರಜ್ವಲಿಸಿ ಜನ ಸಾಮಾನ್ಯರ ನಂಬಿಕೆಗೆ ಪಾತ್ರವಾದರೆ, ಅಂತಹ ವಿಚಾರಗಳಲ್ಲಿ ನಿಜವಾದ ಹಿನ್ನೆಲೆ ಹಾಗೂ ಬಲವಾದ ಆಧಾರಗಳು ಇದ್ದೇ ಇರುತ್ತವೆ. ಶತಮಾನ ಉರುಳುತ್ತಿದ್ದರೂ, ಗುರುಸಾರ್ವಭೌಮರ ಕೀರ್ತಿ ಪ್ರಪಂಚದೆಲ್ಲೆಡೆ ಪ್ರಕಾಶಮಾನವಾಗಿ ಮಿನುಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಭಕ್ತರು ಸ್ವಯಂ ಪ್ರೇರಣೆಯಿಂದ ಪ್ರಪಂಚದಾದ್ಯಂತ 2000ಕ್ಕೂ ಹೆಚ್ಚಿನ ಮೃತ್ತಿಕಾ ಬೃಂದಾವನಗಳನ್ನು ನಿರ್ಮಿಸಿರುತ್ತಾರೆ. ಇಂದು ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌, ಅಮೆರಿಕ, ಕೆನಡಾದಲ್ಲಿ ಕೂಡ ಗುರುರಾಜರ ಬೃಂದಾವನ ರಾರಾಜಿಸುತ್ತಿವೆ. ಭಾರತ ನಿಜವಾಗಿ ಒಂದು ಪುಣ್ಯ ಭೂಮಿ, ಸಾಧು ಸಂತರ ತವರೂರು. ಈ ದೇಶದ ಚರಿತ್ರೆಯ ಪುಟಗಳನ್ನು ತಿರುವಿಹಾಕಿದಾಗ ಸುಮಾರು ಮೂರುವರೆ ಶತಮಾನಗಳ ಹಿಂದೆ ಸರ್ವಧರ್ಮ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬಂದು ವಿಶ್ವಶಾಂತಿಗೆ ಜೀವನವನ್ನೇ ಮುಡುಪಾಗಿಟ್ಟ ಯತಿಶ್ರೇಷ್ಠರಲ್ಲಿ “ಶ್ರೀ ರಾಘವೇಂದ್ರ ಸ್ವಾಮಿಗಳು’ ಅಗ್ರಗಣ್ಯರು. ಇವರ ಅಪಾರ ಕೊಡುಗೆಯಿಂದಾಗಿ ಸಕಲರು ಇವರನ್ನು “ಗುರುರಾಜ’ ಎಂದೇ ಸಂಬೋಧಿಸುತ್ತಾರೆ. ಕಲ್ಪವೃಕ್ಷ ಹಾಗೂ ಕಾಮಧೇನುವಿನಂತೆ ಬಯಸಿದ್ದನ್ನು ಜಾತಿ ಮತ, ಬಡವ ಬಲ್ಲಿದ, ಸ್ತ್ರೀ ಪುರುಷ, ಸ್ವದೇಶಿ ವಿದೇಶಿ ಎನ್ನುವ ಭೇದ ಭಾವಗಳಿಲ್ಲದೇ ಶ್ರೀಗುರುಗಳು ಕರುಣಿಸುತ್ತಿರುವುದರಿಂದ “ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನವೇ’ ಎನ್ನುವುದು.

ಬ್ರಹ್ಮಲೋಕದಲ್ಲಿದ್ದ ಶಂಕುಕರ್ಣ ಬ್ರಹ್ಮದೇವರ ಶಾಪದ ಫ‌ಲವಾಗಿ, ಶಾಪವನ್ನು ವರವಾಗಿ ಸ್ವೀಕರಿಸಿ, ಕೃತಯುಗದಲ್ಲಿ ಪ್ರಹ್ಲಾದರಾಜರಾಗಿ, ದ್ವಾಪರದಲ್ಲಿ ಬಾಹ್ಲಿಕ ರಾಜರಾಗಿ, ಕಲಿಯುಗದಲ್ಲಿ ವ್ಯಾಸರಾಯರು ಹಾಗೂ ರಾಘವೇಂದ್ರರಾಗಿ ಅವತಾರ ಎತ್ತುತ್ತಾರೆ. ಇವರು ಕ್ರಿ.ಶ 1595ರಲ್ಲಿ ಮನ್ಮಥನಾಮ ಸಂವತ್ಸರದ ಫಾಲ್ಗುಣ ಶುಕ್ಲ ಸಪ್ತಮಿ ಗುರುವಾರ, ಶ್ರೀಮತಿ ಗೋಪಮ್ಮ ಹಾಗೂ ಶ್ರೀ ತಿಮ್ಮಣ್ಣ ಭಟ್ಟರೆಂಬ ದಂಪತಿಗಳ ಉದರದಲ್ಲಿ, ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ವೆಂಕಣ್ಣ ಭಟ್ಟರು. ಇವರಿಗೆ ವೆಂಕಮ್ಮ ಎನ್ನುವ ಸಹೋದರಿ, ಹಾಗೂ ಗುರುರಾಜನೆಂಬ ಅಣ್ಣ ಇದ್ದರು. ತಿಮ್ಮಣ್ಣ ಭಟ್ಟರು ಕಡುಬಡವರಾಗಿದ್ದು, ಮುಂದೆ ವಿದ್ಯಾಭ್ಯಾಸಕ್ಕೆಂದು ಅವರ ಕುಲಗುರುಗಳಾದ ಶ್ರೀ ಸುಧೀಂದ್ರ ತೀರ್ಥರಲ್ಲಿ ವೆಂಕಣ್ಣನನ್ನು ಕುಂಭಕೋಣಕ್ಕೆ ಕರೆದೊಯ್ದು ಮಠದಲ್ಲಿ ಬಿಡುತ್ತಾರೆ. ವೆಂಕಣ್ಣನನ್ನು ವೆಂಕಟನಾಥ ಎಂಬುದಾಗಿ ಮಠದಲ್ಲಿ ಸಂಬೋಧಿಸುತ್ತಿದ್ದರು. ವೆಂಕಟನಾಥನು ಅಪ್ರತಿಮ ಪ್ರತಿಭೆಯುಳ್ಳವನಾಗಿದ್ದು, ಸುಧೀಂದ್ರ ತೀರ್ಥರ ಕರಕಮಲ ಸಂಜಾತನಾಗಿ ಸ್ವಾಮಿಗಳ ಪ್ರೀತಿಗೆ ಪಾತ್ರನಾದನು. ಶ್ರೀ ರಾಘವೇಂದ್ರ ಸ್ವಾಮಿಗಳು ಸನ್ಯಾಸ ಸ್ವೀಕಾರ ಮಾಡಿದ ನಂತರ ಲೋಕ ಕಲ್ಯಾಣಕ್ಕಾಗಿ ದ್ವೆ„ತ ಮತ ಪ್ರಚಾರ ಮಾಡುತ್ತಾ ಸಂಚಾರ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಬಹಳಷ್ಟು ಪವಾಡಗಳು ನಡೆಯುತ್ತವೆ.

ಶ್ರೀ ರಾಘವೇಂದ್ರರು ಮೂಲತಃ “ಮಾಧ್ವ ದ್ವೆ„ತ’ ಸಿದ್ಧಾಂತ ಪ್ರತಿಪಾದಕರು. ಆದರೆ ಇವರು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ಸಮನ್ವಯಾಚಾರ್ಯರೆಂಬುದು ಸಕಲ ಆಧಾರಗಳಿಂದ ಸ್ಪಷ್ಟಪಡುತ್ತದೆ. ಸರ್‌ ಥಾಮಸ್‌ ಮನ್ರೊà ದೊರೆಗೆ ದರ್ಶನ, ಆದವಾನಿ ನವಾಬ ಮಂಚಾಲೆ ಗ್ರಾಮದಾನವಾಗಿ ಕೊಟ್ಟ ವಿಚಾರ, ಇವರ ಸರ್ವಧರ್ಮ ಪ್ರೇಮವನ್ನು ಪ್ರತಿಪಾದಿಸುತ್ತಿದೆ. ಜನರು ಗಮನಿಸಬೇಕಾದ ಒಂದು ಮುಖ್ಯ ವಿಚಾರವೆಂದರೆ, ಶ್ರೀ ರಾಘವೇಂದ್ರರು ಹಿಂದೂ ಧರ್ಮದ ಯತಿಗಳಾದರೂ, ಇಂದು ಮಂತ್ರಾಲಯಕ್ಕೆ ಪ್ರತಿ ದಿವಸ ಬರುವ ಭಕ್ತಾದಿಗಳಲ್ಲಿ ಎಲ್ಲಾ ಮತೀಯರೂ ಬಹುಸಂಖ್ಯೆಯಲ್ಲಿದ್ದಾರೆ. ಇದೇ ಕಾರಣದಿಂದಾಗಿ ಇವರನ್ನು ವಿಶ್ವಗುರು ಎಂಬುದಾಗಿ ಜಗತ್ತು ಕೊಂಡಾಡುತ್ತಿದೆ. ಶ್ರೀ ರಾಘವೇಂದ್ರರ ಮೂಲ ಬೃಂದಾವನ ಮಂತ್ರಾಲಯ. ಅಂದಿನ ಆದವಾನಿ ನವಾಬನಾಗಿದ್ದ ಸಿದ್ದಿ ಮಸೂದ್‌ ಖಾನ್‌ ದಾನವಾಗಿಕೊಟ್ಟ ಸ್ಥಳ. ಈ ಪ್ರೀತಿಯ ದ್ಯೋತಕವಾಗಿ ತಮ್ಮ ಬೃಂದಾವನದ ತುದಿಯಲ್ಲಿ ಮುಸ್ಲಿಂ ಆರ್ಕಿಟೆಕ್ಚರ್‌ ಮಾದರಿಯ “ಗುಮ್ಮಟ’ವನ್ನು ಸ್ವತಃ ಹೇಳಿ ಇರಿಸಿಕೊಂಡಿದ್ದಾರೆ. ಈ ಅದ್ಭುತ ಕೆಲಸ ಮಾಡಿದ ಏಕೈಕ ಹಿಂದೂ ಗುರುಗಳಿವರು. 

ಮಂತ್ರಾಲಯದ ಮೂಲ ಬೃಂದಾವನ ಹಿಂದಿನ ಬಾಗಿಲಲ್ಲಿ ಪ್ರವೇಶಿಸಿ ಈ ಸುಂದರ ವಾಸ್ತು ಶಿಲ್ಪಿ ಗುಮ್ಮಟವನ್ನು ವೀಕ್ಷಿಸಬಹುದು. ಇನ್ನೂ ಆಶ್ಚರ್ಯಕರ ವಿಚಾರವೆಂದರೆ ಸಿದ್ದಿ ಮಸೂದ್‌ ಖಾನ್‌ ಗೋರಿಯನ್ನು ಆತನ ಇಚ್ಛೆಯಂತೆ ಮಂಚಾಲೆ ಗ್ರಾಮದಲ್ಲಿ   ನಿರ್ಮಿಸಲಾಗಿರುವುದು. ಇದೊಂದು ಹಿಂದೂ-ಮುಸ್ಲಿಂ ಭಾವೈಕ್ಯದ ಬಹುದೊಡ್ಡ ಸಂಕೇತ. 

ಇನ್ನೊಂದೆಡೆ ಗುರುಸಾರ್ವಭೌಮರು ಸಶರೀರ ಬೃಂದಾವನಸ್ಥರಾಗಿ (ಕ್ರಿ.ಶ. 1671) 135 ವರ್ಷಗಳ ನಂತರ, ಅಂದರೆ ಕ್ರಿ.ಶ. 1806ರಲ್ಲಿ ಅಂದಿನ ಬಳ್ಳಾರಿ ಕಲೆಕ್ಟರ್‌ ಬ್ರಿಟಿಷ್‌ “ಸರ್‌ ಥಾಮಸ್‌ ಮನ್ರೊ’ ಅವರಿಗೆ ಬೃಂದಾವನದಿಂದ ಹೊರಬಂದು ದರ್ಶನ ನೀಡಿ ಇಂಗ್ಲಿಷಿನಲ್ಲಿ ಮಾತುಕತೆ ನಡೆಸಿದರು ಎಂದು ಸ್ವತಃ ಮನ್ರೊà ಸಾಹೇಬರೇ ಬರೆದುಕೊಂಡಿದ್ದಾರೆ. 

ಶ್ರೀ ಮಂತ್ರಾಲಯದಲ್ಲಿ ಯುಗಯುಗಾಂತರಗಳಿಂದ ಬಂದಿರುವ ಪಂಚಲೋಹ, ಬಂಗಾರ, ಬೆಳ್ಳಿ ಪ್ರತಿಮೆಗಳಿವೆ. ಅತ್ಯಂತ ಪುರಾತನ ಹಾಗೂ ಪ್ರಾಚೀನವಾದ ಮೂಲರಾಮದೇವರು, ಗರುಡವಾಹನ ಲಕ್ಷ್ಮೀ ನಾರಾಯಣ, ಷೋಡಶ ಬಾಹು ನರಸಿಂಹ ದೇವರು, ವ್ಯಾಸರಮುಷ್ಟಿ, 32 ಅಪರೂಪದ ಸಾಲಿಗ್ರಾಮಗಳು, ಹಯಗ್ರೀವ ದೇವರು, ವೇದವ್ಯಾಸ, ಹಿರಣ್ಯಗರ್ಭ ಸಾಲಿಗ್ರಾಮ, ಕಂಚಿ ವರದರಾಜ, ವಿಠ್ಠಲ, ಶ್ರೀ ರಾಯರೇ ಜೀವಿತ ಕಾಲದಲ್ಲಿ ತಯಾರಿಸಿದ ಚಿನ್ನದ ಸಂತಾನ ಗೋಪಾಲಕೃಷ್ಣ ಹೀಗೆ ಹತ್ತು ಹಲವು ಅಪರೂಪದ ಸಂಗ್ರಹಗಳಿವೆ. ಶ್ರೀ ರಾಘವೇಂದ್ರರು ಉಡುಪಿಯಲ್ಲಿ ಕೆಲಕಾಲ ತಂಗಿ, ಶ್ರೀ ಕೃಷ್ಣನ ಸೇವೆ ಸಲ್ಲಿಸಿದರು. ಇವರು ತಾವೇ ರಚಿಸಿದ “ಇಂದು ಎನಗೆ ಗೋವಿಂದಾ, ನಿನ್ನಯ ಪಾದಾರವಿಂದವ ತೋರೋ ಮುಕುಂದ’ ಎನ್ನುವ ಹಾಡನ್ನು ವೀಣಾ ವಾದ್ಯದೊಂದಿಗೆ ನುಡಿಸುತ್ತಿರುವಾಗ ಉಡುಪಿ ಶ್ರೀ ಕೃಷ್ಣ ಕುಣಿದಾಡುತ್ತಿದ್ದನಂತೆ. 

ರಾಯರ ಮಂತ್ರಾಕ್ಷತೆ ದಿವೌಷಧವೆಂದು ಬಹಳಷ್ಟು ಭಕ್ತರು ನಂಬುತ್ತಾರೆ. ಶ್ರೀ ರಾಯರ ಆರಾಧನೆ ಪ್ರಪಂಚದಾದ್ಯಂತ ಬಹು ಸಂಭ್ರಮದಿಂದ ನಡೆಯುವುದರೊಂದಿಗೆ  ಸುಮಾರು 200 ಕ್ವಿಂಟಾಲ್‌ ಮಂತ್ರಾಕ್ಷತೆ ವಿತರಣೆಯಾಗುತ್ತದೆ. ರಾಯರ ಪರಿಮಳ ಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಧನ್ಯರಾಗುತ್ತಾರೆ. ಒಟ್ಟಿನಲ್ಲಿ ಸುಖ, ಶಾಂತಿ, ಸಮೃದ್ಧಿಯ ಸಂಕೇತವೇ ಶ್ರೀ ಗುರು ರಾಘವೇಂದ್ರ ಸನ್ನಿಧಿ ಎನ್ನುವುದರಲ್ಲಿ ಬೇರೆ ಮಾತಿಲ್ಲ. 
ಮೂರುವರೆ ಶತಮಾನಗಳ ಹಿಂದೆಯೇ “ಜಾತಿಗಿಂತ ನೀತಿ ಮೇಲು, ಮಡಿಗಿಂತ ಭಕ್ತಿ ಮೇಲು’ ಎನ್ನುವ ಮೂಲ ತತ್ವವನ್ನು ಹಾಗೂ “ಉತ್ಛ-ನೀಚ, ಬಡವ ಬಲ್ಲಿದ’ ಎನ್ನುವ ಭೇದಭಾವವಿಲ್ಲದೆ ಜಗತ್ತಿಗೆ ಸಾರಿದ ಮಹಾಮಹಿಮರು ಶ್ರೀ ರಾಘವೇಂದ್ರರು. 

ಶ್ರೀ ಕ್ಷೇತ್ರ ಮಂತ್ರಾಲಯ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲೂಕಿನಲ್ಲಿದೆ. ಈ ಕ್ಷೇತ್ರ ಬಳ್ಳಾರಿಯಿಂದ 135 ಕಿ.ಮಿ. ಹಾಗೂ ರಾಯಚೂರಿನಿಂದ 45 ಕಿ.ಮಿ. ದೂರದಲ್ಲಿದೆ. ಶ್ರೀಮಠವು ಇಲ್ಲಿ ಆಗಮಿಸುವ ಭಕ್ತಾದಿಗಳಿಗೆ ಭೋಜನ ಹಾಗೂ ವಸತಿ ಸೌಕರ್ಯ ಒದಗಿಸುತ್ತದೆ. ಮಂತ್ರಾಲಯ ಒಂದು ಶಾಂತಿ ವನದಂತಿದ್ದು ಭಕ್ತಾದಿಗಳು ಇಲ್ಲಿ ಜೀವನದ ಜಂಜಾಟವನ್ನು ಮರೆತು ಸುಖ, ಶಾಂತಿ, ಸಮೃದ್ಧಿಯನ್ನು ಅನುಭವಿಸುತ್ತಾರೆ.

ಶ್ರೀ ಗುರುರಾಜರು ಸಶರೀರ ಬೃಂದಾವನಸ್ಥರಾದ್ದರಿಂದ, ಇವರಲ್ಲಿ ಬರುವ ಭಕ್ತಾದಿಗಳು ಭಕ್ತಿಯಿಂದ ಸೇವೆ ಸಲ್ಲಿಸುವ ವೇಳೆ ಅವರಿಗೆ ರಾಯರ ಇರುವಿಕೆ ಒಂದಲ್ಲಾ ಒಂದು ರೀತಿಯಲ್ಲಿ ಅನುಭವಕ್ಕೆ ಬರುತ್ತದೆ. ಕೆಲವರಿಗೆ ಸ್ವಪ್ನದಲ್ಲಿ ಬಂದು ಬವಣೆ ಪರಿಹರಿಸುವುದೂ ಉಂಟು. ಕಲಿಯುಗದ ಕಾಮಧೇನು, ಕಲ್ಪವೃಕ್ಷವೆನಿಸಿದ ಗುರುಸಾರ್ವಭೌಮರು ಸಕಲರನ್ನು ರಕ್ಷಿಸಿ, ತಮ್ಮ ಪುಣ್ಯವನ್ನು ಹಂಚುತ್ತಾರೆ. 

ಶ್ರೀಗುರುಗಳು ಪ್ರಹ್ಲಾದನಾಗಿ ಅವತರಿಸಿದಾಗ, ಹತ್ತು ಸಾವಿರ ವರ್ಷದ ಹರಿನಾಮ ಸ್ಮರಣೆ ಮಾಡಿ ಗಳಿಸಿದ ಅಪಾರ ಪುಣ್ಯ, ಭಕ್ತಾದಿಗಳಿಗೆ ಸದಾ ಹಂಚುತ್ತಾರೆ. ಶ್ರೀರಾಮನು ವನವಾಸದಲ್ಲಿದ್ದಾಗ ವಿಶ್ರಾಂತಿ ಪಡೆದನೆನ್ನಲಾದ ಬಂಡೆಯನ್ನು ಕೊರೆದು ರಾಯರ ಬೃಂದಾವನ ನಿರ್ಮಿಸಲಾಗಿದೆ. ಹಾಗೂ ನಿರ್ಮಿಸಿದ ಬೃಂದಾವನ ಪ್ರಹ್ಲಾದರು ಯಜ್ಞಮಾಡಿದ ಸ್ಥಳದಲ್ಲಿದೆ. 

ಇಂದು ಗುರುಸಾರ್ವಭೌಮರ 346ನೇ ಆರಾಧನೆ. ಶ್ರೀ ರಾಯರು ಕರುಣಾಳು “ನೀನೇಗತಿ’ ಎಂದವರಿಗೆ ಅಭಯ ಹಸ್ತ ನೀಡಿ ಕಾಪಾಡುತ್ತಾರೆ. “ಕರೆದಲ್ಲಿಗೆ ಬರುವ ವರಮಂತ್ರಾಲಯದಲ್ಲಿರುವ’ ಎನ್ನುವ ದಾಸವಾಣಿ ಎಂದಿಗೂ ಹುಸಿಯಾಗಲಾರದು. ಅಂತಹ ಪುಣ್ಯನಿಧಿ, ದಿವ್ಯಮೂರ್ತಿ, ಸಕಲರನ್ನು ಹರಸಿ ರಕ್ಷಿಸಲಿ. 

ಯು.ಪಿ. ಪುರಾಣಿಕ್‌

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.