ಮೌಡ್ಯವನ್ನು ಶೀರ್ಷಿಕೆಯಿಂದ ತೆಗೆದಿದ್ದೇಕೆ?


Team Udayavani, Oct 11, 2017, 5:49 AM IST

11-17.jpg

ಮೌಡ್ಯ ನಿಷೇಧದ ವಿಚಾರದ ಪರ-ವಿರೋಧ ಚರ್ಚೆಯ ಕಾವು ರಾಜ್ಯದಲ್ಲಿ ಮತ್ತೆ ಜೋರಾಗಿದೆ. ಮಂಡನೆಗೆ ತಯಾರಾಗಿರುವ ವಿಧೇಯಕವು ಕೇವಲ ಹಿಂದೂ ಧರ್ಮೀಯರನ್ನಷ್ಟೇ ಗುರಿಯಾಗಿಸುತ್ತಿದೆ ಎನ್ನುವುದು ಒಂದು ವಲಯದ ವಾದ. ಇದನ್ನು ಮಂಗಳವಾರದ “ವಾದ ವೈಖರಿ’ಯಲ್ಲಿ ರೋಹಿತ್‌ ಚಕ್ರತೀರ್ಥ ಅವರು ಮುಂದಿಟ್ಟಿದ್ದರು. ಆದರೆ ಮೌಡ್ಯ ಪ್ರತಿಬಂಧಕ ಮಸೂದೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ ಎನ್ನುತ್ತಿದ್ದಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ… 

“ಕರ್ನಾಟಕ ಅಮಾನವೀಯ, ದುಷ್ಟ, ವಾಮಾಚಾರ ಪ್ರತಿ ಬಂಧಕ ಮತ್ತು ನಿರ್ಮೂಲನ ಮಸೂದೆ 2017′ ಬರುವ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾ ಗುತ್ತಿರುವುದು ಸ್ವಾಗತಾರ್ಹ. ನಾಲ್ಕು ವರ್ಷಗಳ ನಂತರವಾದರೂ ಅದಕ್ಕೆ ಜೀವ ಬರುತ್ತಿರುವುದು ಸಂತೋಷ ತರುತ್ತಿದೆಯಾದರೂ ಎಲ್ಲ ಅಮಾನವೀಯ ಆಚರಣೆಗಳಿಗೆ ಮೂಲ ಕಾರಣವಾದ ಮೂಢನಂಬಿಕೆಯನ್ನೇ ಶೀರ್ಷಿಕೆಯಿಂದ ಕಿತ್ತೂಗೆದಿರುವುದು ಸರಿಯಲ್ಲ ಅನಿಸುತ್ತದೆ. ಏಕೆಂದರೆ ಮೂಢ ನಂಬಿಕೆ ಎಂಬುದು ಉದ್ದೇಶಪೂರ್ವಕವಾಗಿ ಜನರ ಮನಸ್ಸಿನಲ್ಲಿ ವ್ಯವಸ್ಥೆ ಬೆಳೆಸಿರುವಂತಹುದು. 

ಎಲ್ಲ ಹಾನಿಕಾರಕ ಮೂಢನಂಬಿಕೆಗಳ ಆಚರಣೆಗಳನ್ನು ಪ್ರತಿಬಂಧಿಸುವ ಆಶಯ ಭಾರತದ ಸಂವಿಧಾನದ ಮೂಲಭೂತ ಆಶಯವೇ ಆಗಿದೆ. ಭಾರತದ ಎಲ್ಲ ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ಕರ್ತವ್ಯವಾಗಿವೆ. ಅದನ್ನು ವಿರೋಧಿಸುವುದೆಂದರೆ ಸಂವಿಧಾನಕ್ಕೆ ತಡೆ ಒಡ್ಡಿದಂತೆ ಎಂಬುದನ್ನು ಎಲ್ಲ ನಾಗರಿಕರು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಶಾಸಕರು ಅರಿತುಕೊಳ್ಳಬೇಕು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಅಪ್ಪಟ ವೈಜ್ಞಾನಿಕ ಮನೋಭಾವವನ್ನು ಹೊಂದಿದವರಾಗಿದ್ದರೂ ಇಂಥದೊಂದು ಆಶಯ ಸಂವಿಧಾನದಲ್ಲಿ ವಿದ್ಯುಕ್ತ ಸ್ಥಾನ ಪಡೆದಿರಲಿಲ್ಲ. ನಂತರ 1976ರಲ್ಲಿ ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಭಾರತೀಯ ನಾಗರಿಕರ ಮೂಲಭೂತ ಕರ್ತವ್ಯಗಳು ಎಂಬ ಭಾಗ 4ಎ, 51ಎ ಅನ್ನು ಸೇರಿಸಲಾಯಿತು. ಅದರ ಪರಿಚ್ಛೇದ “ಎಚ್‌’ ಹೀಗಿದೆ- ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು ನಮ್ಮ ಇಷ್ಟಕ್ಕೆ, ನಮ್ಮ ಆಯ್ಕೆಗೆ ಬಿಟ್ಟ ಪ್ರಶ್ನೆಯಲ್ಲ, ನಾವು ಈ ದೇಶದ ನಾಗರಿಕರಾಗಿದ್ದೇವೆ. ನಾವು ದೇಶದ ಸಂವಿಧಾನಕ್ಕೆ ಬದ್ಧವಾಗಿದ್ದೇವೆ ಎಂದು ಭಾವಿಸುವುದಾದರೆ ಅದು ನಮ್ಮ ಆದ್ಯ ಕರ್ತವ್ಯ. ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು, ಪ್ರತಿಪಾದಿಸುವುದು, ಪ್ರಸಾರ ಮಾಡುವುದಷ್ಟೇ ಅಲ್ಲ. ಅದಕ್ಕೆ ಪ್ರತಿಕೂಲವಾಗಿ ಕೆಲಸ ಮಾಡುವ ವಿರೋಧಿ ಶಕ್ತಿಗಳ ವಿರುದ್ಧವೂ ಹೋರಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೇ ಪ್ರತಿಯೊಬ್ಬ ನಾಗರಿಕನು ಘನತೆ ಮತ್ತು ಗೌರವದಿಂದ ಜೀವಿಸುವ ಹಕ್ಕು ಸಂವಿಧಾನದ 21ನೇ ಅನುಚ್ಛೇದದಿಂದ ಮತ್ತು ಭಾರತದ ಸರ್ವೋತ್ಛ ನ್ಯಾಯಾಲಯದ ಅನೇಕ ತೀರ್ಪುಗಳಿಂದ ಪುಷ್ಟಿಗೊಂಡಿದೆ. 

ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ಧಾಬೋಲ್ಕರ್‌ ಮೂಢನಂಬಿಕೆಗಳ ಆಚರಣೆ ವಿರುದ್ಧ ನಡೆಸಿದ ಹೋರಾಟ ದಿಂದಾಗಿ ಪಟ್ಟಭದ್ರ ಹಿತಾಸಕ್ತಿಗಳ ವೈರತ್ವವನ್ನು ಕಟ್ಟಿಕೊಂಡಿದ್ದು 2013ರ ಆಗಸ್ಟ್‌ 20ರಂದು ಹತ್ಯೆಯಾದರು. ಆನಂತರದಲ್ಲಿ ನಡೆದ ವ್ಯಾಪಕ ಪ್ರತಿರೋಧದ ನಡುವೆ ಹತ್ಯೆಯಾದ ಒಂದು ವಾರದೊಳಗೆ ಮಹಾರಾಷ್ಟ್ರ ಸರ್ಕಾರ ಬ್ಲಾಕ್‌ ಮ್ಯಾಜಿಕ್‌ ಆರ್ಡಿನೆನ್ಸ್‌ ಎಂಬ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಇದರ ಪ್ರತಿಧ್ವನಿಯಾಗಿ ಕರ್ನಾಟಕದಲ್ಲಿ  ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರುವುದಾಗಿ ಪ್ರಸ್ತಾಪಿಸಿದರು. ಅದಕ್ಕೆ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯುನಿವರ್ಸಿಟಿ ಸಲಹಾ ಸಮಿತಿ ರಚಿಸಿತು. ಅದರಲ್ಲಿ ಕಾನೂನು ತಜ್ಞರು, ವಿಚಾರವಾದಿಗಳು, ಸಾಹಿತಿಗಳು, ಸಮಾಜವಾದಿಗಳು, ಮಠಾಧೀಶರುಗಳನ್ನು ಒಳಗೊಂಡಂತೆ ಸದಸ್ಯರಿದ್ದರು. ಮೂಢನಂಬಿಕೆ ಎಂಬುದರ ಬಗ್ಗೆಯೇ ಒಮ್ಮತದ ಪರಿಭಾಷೆ ಒಪ್ಪಿಕೊಳ್ಳಬೇಕಾಗಿತ್ತು. ಸಾವಿರಾರು ವರ್ಷಗಳಿಂದ ದೇವರು, ಧರ್ಮ, ಆರೋಗ್ಯ, ಶ್ರೇಯಸ್ಸು ಎಲ್ಲ ವಲಯಗಳಲ್ಲೂ ಅನೇಕ ಬಗೆಯ ಭಾವನೆಗಳನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿರುವ ನಮ್ಮ ಸಮಾಜದಲ್ಲಿ ಯಾವುದು ನಂಬಿಕೆ ಯಾವುದು ಮೂಢನಂಬಿಕೆ ಎಂಬುದರ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇಲ್ಲ. ಅವು ನಿರ್ಮೂಲನವಾಗುವ ಬದಲಿಗೆ ಹೆಚ್ಚಾಗಿರುವುದಕ್ಕೆ ಕೆಲವರು ಅವುಗಳನ್ನೇ ಬಂಡವಾಳ ಮಾಡಿಕೊಂಡು ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವುದು ಬಹುಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. 

ನಮ್ಮಗೆಲ್ಲರಿಗೂ ಗೊತ್ತು ಮೂಢನಂಬಿಕೆಗಳನ್ನು ಕೇವಲ ಕಾನೂನಿನ ಮೂಲಕ ನಿಷೇಧಿಸಲು ಸಾಧ್ಯವಿಲ್ಲ. ಆದರೆ ಅತೀಂದ್ರಿಯ ಅತಾರ್ಕಿಕ ನಂಬಿಕೆಗಳನ್ನು ಆಧರಿಸಿದ ಮೂಢ ನಂಬಿಕೆಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಅದರಲ್ಲಿಯೂ ವ್ಯಕ್ತಿಯ ಮಾನಸಿಕ ನೋವು, ಗೌರವ ನಷ್ಟ, ಆರ್ಥಿಕ ಹಾನಿ, ಪ್ರಾಣಹಾನಿಗೆ ಕಾರಣವಾಗುವಂತಹ ಮೂಢಾಚಾರಗಳನ್ನಾದರೂ ತಡೆಗಟ್ಟಬಹುದಲ್ಲವೇ? ವಾಸ್ತವವಾಗಿ ಇಂತಹ ಕ್ರೂರ, ದುಷ್ಟ ಆಚರಣೆಗಳಿಗೂ ದೇವರು, ಧರ್ಮಕ್ಕೂ ಸಂಬಂಧವಿಲ್ಲ. ಆದರೆ ಸುಳ್ಳು ಹೇಳಿ ಸಂಪ್ರದಾಯದ ಹೆಸರಲ್ಲಿ ಇಂಥ ಆಚರಣೆಗಳನ್ನು ಮುಗ್ಧ ಜನರು ಅದರಲ್ಲೂ ಮಹಿಳೆಯರ ಮೇಲೆ ಹೇಳಿ ಹಿಂಸಿಸಿ, ಶೋಷಿಸಿ ಆನಂದ ಪಡುವ ಮತ್ತು ಆರ್ಥಿಕ ಲಾಭ ಪಡೆಯುವ ಜನರಿಗೆ ಶಿಕ್ಷೆ ಬೇಕಲ್ಲವೇ?

ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವ ಇಚ್ಛೆಯಿಂದ ವೈಯಕ್ತಿಕ ಸಿದ್ಧಿಗಾಗಿ ಪಾಲಿಸುವ ಆಚಾರ ವಿಚಾರ ಮತ್ತು ಪದ್ಧತಿಗಳು, “”ನಂಬಿಕೆ.” ಬೇರೆಯವರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿ ಆಚರಿಸುವಂತೆ ಮಾಡುವುದು ಮೂಢನಂಬಿಕೆ. ವೈಜ್ಞಾನಿಕ ಮನೋವೃತ್ತಿಯ ಪರಿಭಾಷೆಯಲ್ಲಿ ಯಾವುದೇ ಪುರಾವೆ ಇಲ್ಲದೇ, ಪುರಾವೆಯ ನಿರೀಕ್ಷೆಯೂ ಇಲ್ಲದೇ ಒಂದು ಶಕ್ತಿ, ಸಂಗತಿ ಇದೆ. ನಡೆಯುತ್ತೆ ಎಂದು ಭಾವಿಸುವ ಮನಸ್ಥಿತಿ ನಂಬಿಕೆ, ಇಂಥ ನಂಬಿಕೆಗೆ ವಿರುದ್ಧವಾದ ಪುರಾವೆ ಸಿಕ್ಕಿದ ನಂತರವೂ ಅದನ್ನು ಉಪೇಕ್ಷಿಸಿ ಹಿಂದಿನ ನಂಬಿಕೆ ಮುಂದುವರೆಸಿಕೊಂಡು ಹೋಗುವುದು ಮೂಢನಂಬಿಕೆ. 

2013ರ ಮಸೂದೆಯು ಪ್ರಸ್ತುತ ಮಂಡಿಸಲಿರುವ ರಿಫೈನ್‌ ಆದ ಸ್ವರೂಪವನ್ನು ಪಡೆದಿದೆ. ಇದಕ್ಕೆ ಬಹುಶಃ ಜೋತಿಷ್ಯ, ವಾಸ್ತುವಿನಂತಹ ಸೋಕಾಲ್ಡ್‌ ತಜ್ಞರ, ಟಿವಿ ಮಾಧ್ಯಮದವರ 
ಬೃಹತ್‌ ಲಾಬಿಯೂ ಕಾರಣವಿರಬಹುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ದೇಹದ ಆರೋಗ್ಯ, ಮಾನಸಿಕ ಆರೋಗ್ಯ, 
ಶಿಕ್ಷಣ, ವಾಣಿಜ್ಯ, ಉದ್ಯೋಗ, ವಾಸ್ತುಶಿಲ್ಪ, ಪಾರಂಪರಿಕ ಸಮಸ್ಯೆ ಗಳು, ಕಾನೂನು ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ತಜ್ಞರು ಇರುತ್ತಾರೆ. ಅದಕ್ಕಾಗಿ ವರ್ಷಾನು ಗಟ್ಟಲೇ ಅಧ್ಯಯನ ಮಾಡಿ ಪರಿಣತಿ ಹೊಂದಿರುತ್ತಾರೆ. ಅವರು ತಮಗೆ ಗೊತ್ತಿಲ್ಲದ ಮತ್ತೂಂದು ವಿಷಯದ ಬಗ್ಗೆ ಮೂಗು ತೂರಿಸದೇ ತಮ್ಮ ಅಭಿಪ್ರಾಯ ನೀಡುತ್ತಾರೆ. ಆದರೆ ಟಿವಿಯಲ್ಲಿ ದರ್ಶನ ನೋಡುವ ಜೋತಿಷಿಗಳು ಈ ಎಲ್ಲ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಒಬ್ಬರೇ ಪರಿಹಾರ ನೀಡಬಲ್ಲ ಮಹಾ(ಅ)ಜ್ಞಾನಿಗಳಾಗಿರುತ್ತಾರೆ. ಇಂತಹ ಸ್ವಯಂ ಸಿದ್ಧಿಪುರುಷ (ಕೆಲವು ಮಹಿಳಾ ಜೋತಿಷಿಗಳು ಇದ್ದಾರೆ)ರನ್ನು ಮಸೂದೆ ಹೊರಗಿಟ್ಟಿದ್ದು ದುರಂತವೇ ಸರಿ, ಮಸೂದೆಯ ಪರಿಶೀಲನಾ ಸಮಿತಿಯು ಜೋತಿಷ್ಯದಲ್ಲಿ ಹೀಗೆ ಆಗುತ್ತದೆಂದು ಲಿಖೀತವಾಗಿ ಹೇಳುವುದಿಲ್ಲ. ಹೀಗಾಗಿ ಅದನ್ನು ಕಾಯ್ದೆಯ ವ್ಯಾಪ್ತಿಗೆ ತಂದು ಅಪರಾಧ ಎಂದು ಪರಿಗಣಿಸಿದರೆ ಸಾಬೀತು ಪಡಿಸುವುದು ಕಷ್ಟ. ಇಂದು ಜೋತಿಷ್ಯ, ವಾಸ್ತು ಬೃಹತ್‌ ವಾಣಿಜ್ಯ ಉದ್ದೇಶಗಳಾಗಿ ಸರಕುಗಳಾಗಿವೆ. ಹಣ ಪಡೆದು ಗ್ರಾಹಕ ಸೇವೆ ಒದಗಿಸುತ್ತವೆ. ಆದರೂ ಗ್ರಾಹಕ ಹಿತರಕ್ಷಣೆ ಕಾಯ್ದೆಗೆ ಒಳಪಡುವುದಿಲ್ಲ. ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ಇರುವ ರಸ್ತೆಗಳಲ್ಲಿಯೇ ದೊಡ್ಡ ದೊಡ್ಡ ಫ‌ಲಕ ಹಾಕಿಕೊಂಡು ನಡೆಸುವ ಜ್ಯೋತಿಷ್ಯಾಲಯಗಳು ಯಾವ ಟ್ರೇಡ್‌ ಲೈಸನ್ಸ್‌ ಪಡೆದಿರುತ್ತವೆ? ಇವು ಫೀ ಪಡೆಯು ವುದಿಲ್ಲ, ಕಾಣಿಕೆ, ಉಡುಗೊರೆ ಪಡೆಯುತ್ತವೆ. ರಸೀದಿ ನೀಡುವುದಿಲ್ಲ, ಸೇವೆಯ ವಸ್ತುವಿನ ಗ್ಯಾರಂಟಿ ಕೊಡುವುದಿಲ್ಲ. ಆದರೂ ಅದು ವಂಚನೆಯಲ್ಲ. ನಂಬಿಕೆ. ಒಬ್ಬ ಟಿವಿ ಜೋತಿಷಿ ಪ್ರಶ್ನೆ ಕೇಳಿದ ಗ್ರಾಮೀಣ ಪ್ರದೇಶದ ತಾಯಿಯೊಬ್ಬಳಿಗೆ “”ನಿಮ್ಮ ಮಗಳಿಂದಲೇ ನಿಮಗೆ ಇಷ್ಟೆಲ್ಲ ತೊಂದರೆಯಾಗುತ್ತಿದೆ. ಅವಳ ಜಾತಕ ಸರಿಯಿಲ್ಲ. ಅವಳಿಂದ ನಿಮ್ಮ ಹಾಗೂ ಪತಿಯ ಪ್ರಾಣಕ್ಕೂ ಸಂಚಕಾರವಿದೆ” ಎಂದು ಬೊಗಳೆ ಬಿಟ್ಟಾಗ ಅದನ್ನು ನಂಬಿದ ತಾಯಿ ತನ್ನ ಪತಿಯೊಂದಿಗೆ ಸೇರಿ ತನ್ನದೇ ಕರುಳ ಕುಡಿಯನ್ನು ಹತ್ಯೆಗೈದಿದ್ದು, ಮಾಧ್ಯಮದಲ್ಲಿ ವರದಿಯಾಗಿತ್ತು. ಈಗ ಹತ್ಯೆಗೈದ ತಂದೆ, ತಾಯಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದರೆ, ಅವರಿಂದ ಕೃತ್ಯ ಮಾಡಿಸಲು ಪ್ರೇರಣೆ ನೀಡಿದ ಜೋತಿಷಿ ಮಾತ್ರ ಟಿವಿಯಲ್ಲಿ ಅದೇ ಠೀವಿಯಲ್ಲಿ ಕುಳಿತು ಮತ್ತೂಬ್ಬ ತಾಯಿಗೆ ಮತ್ತೂಂದು ಕೃತ್ಯವೆಸಗಲು ಪ್ರೇರೇಪಿಸುತ್ತಿರುತ್ತಾನೆ. ಆ ಜೋತಿಷಿಗೆ ಶಿಕ್ಷೆ ಯಾರು ಕೊಡಬೇಕು?

ಏನೇ ಇರಲಿ ಮಡೆಸ್ನಾನದಂತಹ ಆಚರಣೆಗಳು, ಅಮಾನ ವೀಯ ಕೃತ್ಯಗಳು, ಮಹಿಳೆಯರನ್ನು ಲೈಂಗಿಕವಾಗಿ ಶೋಷಿ
ಸುವ ಬೆತ್ತಲೆ ಸೇವೆಯಂತಹ ಆಚರಣೆಗಳನ್ನು ಮಟ್ಟಹಾಕುವ ಮಸೂದೆಯನ್ನು ವಿಧಾನಸಭಾ ಚುನಾವಣೆ ಮುಂದಿರುವಾ ಗಲೂ ಧೈರ್ಯವಾಗಿ ಸರಕಾರ ಮಂಡನೆ ಮಾಡುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ. ಕಾನೂನು ಸಚಿವರು ಹೇಳಿದಂತೆ ಒಮ್ಮೆ ಕಾನೂನು ಜಾರಿಗೆ ಬಂದ ನಂತರ ಆಗುವ ಬೆಳವಣಿಗೆ ಗಮನಿಸಿ ತಿದ್ದುಪಡಿ ತರುತ್ತಾ ಹೋಗಬಹುದು. ಅದೊಂದು ಸಮಾಧಾನದ ಅಂಶ. 

ಇದು ಅನೇಕ ವರುಷಗಳ ತಪಸ್ಸಿನ ಹೋರಾಟಕ್ಕೆ ಸಂದ ಜಯ ಎಂದು ಭಾವಿಸೋಣ. ಕುವೆಂಪು ಅವರ ಮಾತಿನಂತೆ “ಮೌಡ್ಯತೆಯ ಮಾರಿಯನು ಹೊರದೂಡಲೇ ತನ್ನಿ, ವಿಜ್ಞಾನದೀವಿಗೆಯ ಹಿಡಿಯಬನ್ನಿ’. ನಾವೆಲ್ಲರೂ ವೈಜ್ಞಾನಿಕ ಮನೋಭಾವದ ಬೆಳಕಿ ನಲ್ಲಿ ನಮ್ಮ ಬದುಕುಗಳನ್ನ ಹಸನುಗೊಳಿಸಿಕೊಳ್ಳೋಣ. ನಮ್ಮ ದೇಶದ ಸಾಮಾಜಿಕ, ಆರ್ಥಿಕ ಹಿನ್ನಡೆಗೂ ಮೂಲ ಕಾರಣ ಮೂಢನಂಬಿಕೆಗಳು ಎನ್ನುವುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ನೆನಪಿನಲ್ಲಿಟ್ಟುಕೊಳ್ಳಬೇಕು. 

ಎಚ್‌.ನರಸಿಂಹಯ್ಯನವರಂತಹ ವಿಚಾರವಾದಿಗಳು ಕಟ್ಟಿದ ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರಂತಹ ವಿಚಾರವಾದಿಗಳು ಹತ್ಯೆಯಾಗಿ ಎಲ್ಲರೂ ದಿಗ್ಭ್ರಮೆಯಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ಅಮಾನವೀಯ, ದುಷ್ಟ, ವಾಮಾ
ಚಾರ ಪ್ರತಿಬಂಧಕ ಮಸೂದೆ ಮಂಡನೆಗೊಂಡು ಜಾರಿಯಾಗಲು ಹೊರಟಿರುವುದು ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಸಮಾಧಾನ ತಂದು ಕೊಟ್ಟಿರುವುದು ಸತ್ಯ. ಮಹಾರಾಷ್ಟ್ರದಲ್ಲಿ ಕಾಯ್ದೆ ಜಾರಿಯಾದ ನಂತರ ನರಬಲಿ ಪ್ರಕರಣಗಳಲ್ಲಿ ಇಸ್ಲಾಂ ಧರ್ಮದ ಅನೇಕರು ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾರೆಂಬುದು ಪ್ರಮುಖ ಅಂಶ.

(ಚರ್ಚೆಗೆ ಮುಕ್ತ ಆಹ್ವಾನ- [email protected])

ಡಾ| ವಸುಂಧರಾ ಭೂಪತಿ, ಅಧ್ಯಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.