Updated at Tue,30th May, 2017 5:25PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗರ್ಭಿಣಿಯ ಉಬ್ಬು ಹೊಟ್ಟೆಯನ್ನು ಕಂಡ ಒರಾಂಗೂಟನ್‌ ಮಾಡಿದ್ದೇನು ? Watch

ಲಂಡನ್‌ : ಪ್ರೀತಿ, ಮಮತೆ, ವಾತ್ಸವ್ಯ, ಭಾವಪರವಶತೆಯೇ ಮೊದಲಾದ  ಉತ್ಕಟ ಸಂವೇದನೆಗಳು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ; ಪ್ರಾಣಿ ಪಕ್ಷಿಗಳಲ್ಲೂ ಇರುತ್ತವೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ನಮಗೆ ಸಿಗುತ್ತವೆ. ಆ ರೀತಿಯ ನಿದರ್ಶನಕ್ಕೆ ಇಲ್ಲೊಂದು ವಿಡಿಯೋ ಚಿತ್ರಿಕೆ ಕೂಡ ಸಾಕ್ಷಿಯಾಗಿದೆ.

ಲಂಡನ್‌ನ ಮೃಗಾಲಯಕ್ಕೆ ಪತಿಯೊಂದಿಗೆ ಹೋಗಿದ್ದ ಏಳು ತಿಂಗಳ ಗರ್ಭಿಣಿಯೋರ್ವಳು ಗಾಜಿನ ಆವರಣದೊಳಗಿರುವ ಗಂಡು ಒರಾಂಗೂಟನ್‌ ಗೆ ಕುತೂಹಲಕ್ಕಾಗಿ ತನ್ನ ಉಬ್ಬಿದ ಹೊಟ್ಟೆಯನ್ನು ತೋರಿಸಿದಳು.

ಗರ್ಭಿಣಿಯ ಉಬ್ಬು ಹೊಟ್ಟೆಯನ್ನು  ಕಾಣುತ್ತಲೆ ಒರಾಂಗೂಟನ್‌ ಒಮ್ಮೆಲೆ ಭಾವಪರವಶವಾಯಿತು. ಅದು ತನ್ನ ಗಾಜಿನ ಅವರಣಕ್ಕೆ ಅಂಟಿಕೊಂಡು ತನ್ನ ಮುಖವನ್ನು ಗರ್ಭಿಣಿಯ ಹೊಟ್ಟೆಗೆ ತಾಕಿಸಿ ವಿಚಿತ್ರವಾದ ಆನಂದವನ್ನು ಪಡೆಯಿತು. ಕೊನೆಗೆ ಆಕೆಯ ಹೊಟೆಗೆ ಕಿಸ್‌ ನೀಡಿ ಸಂಭ್ರಮಿಸಿತು.

ಈ ರೋಚಕ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು ಅದೀಗ ಇಲ್ಲಿದೆ.  ಪ್ರಾಣಿ ಸಂವೇದನೆಯ ಉತ್ಕಟತೆಯನ್ನು  ನೀವೂ ನೋಡಿ ಆನಂದಿಸಿ !


More News of your Interest

Trending videos

Back to Top