Updated at Wed,24th May, 2017 9:31AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

17 ಅಬಾರ್ಶನ್‌, ಕ್ಯಾನ್ಸರ್‌ ರೋಗಿ ಭಾರತೀಯ ಮಹಿಳೆ ಈಗ 4 ಮಕ್ಕಳ ತಾಯಿ !

ಲಂಡನ್‌ : ಈ ಜಗತ್ತಿನಲ್ಲಿ ಪವಾಡಗಳಿಗೆ ಎಂದೂ ಕೊನೆ ಇಲ್ಲ; ಅನೇಕ ಪವಾಡಗಳು ಬದುಕಿನಲ್ಲಿ ನಂಬಿಕೆ ಕಳೆದುಕೊಂಡವರಿಗೆ ಹೊಸ ಭರವಸೆಯನ್ನು ನೀಡುತ್ತವೆ. ಈ ಮಾತಿಗೆ ಇಲ್ಲೊಂದು ಜ್ವಲಂತ ಉದಾಹಣೆ ಇದೆ.

ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ 32ರ ಹರೆಯದ ಲಿಟಿನಾ ಕೌರ್‌ ಎಂಬ ಮಹಿಳೆಗೇ ಈ ತನಕ 17 ಬಾರಿ ಗರ್ಭಪಾತವಾಗಿವೆ. ಆಕೆಗೆ ಇನ್ನೆಂದೂ ಮಗುವಾಗಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ದೈವಾನುಗ್ರಹದಿಂದ ಆಕೆ ಕೊನೆಗೂ ನಾಲ್ಕು ಹೆಣ್ಣು  ಮಕ್ಕಳ ಮಾತೆಯಾಗಿದ್ದಾಳೆ;  ಆಕೆಯ ಮಾತೃತ್ವದ ತಪಸ್ಸು ಫ‌ಲಪ್ರದವಾಗಿದೆ.

ಲಿಟಿನಾ ಕೌರ್‌ ತನ್ನ 18ರ ಹರೆಯದಿಂದಲೇ ತೀವ್ರವಾದ ಮೈಲಾಯ್ಡ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ಇದು ಒಂದು ಬಗೆಯ ತೀವ್ರ ಮಟ್ಟದ ಕ್ಯಾನ್ಸರ್‌ ಕಾಯಿಲೆ. ಇದರ ಪರಿಣಾಮವಾಗಿ ಲಿಟಿನಾಗೆ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಅದಾಗಿ ವೈದ್ಯರು ಆಕೆಗೆ ನಿನಗೆಂದೂ ಮಕ್ಕಳಾಗದು ಎಂದು ಹೇಳಿದ್ದರು. 

ಲಿಟಿನಾಗೆ ಮದುವೆಯಾದದ್ದು 2007ರಲ್ಲಿ; ಆಕೆಗೆ ಮೊದಲ ಗರ್ಭಪಾತವಾದದ್ದು 2010ರಲ್ಲಿ. ಐದು ವರ್ಷಗಳ ತರುವಾಯ ಆಕೆ ಗರ್ಭಿಣಿಯಾದಳು. ಹಾಗೆ ಮೊದಲ ಹೆಣ್ಣು ಮಗು ಕಿರಣ್‌ಗೆ 2015ರ ಸೆಪ್ಟಂಬರ್‌ನಲ್ಲಿ  ಜನ್ಮ ನೀಡಿದಳು. ಆ ಬಳಿಕ ಲಿಟಿನಾ ತನ್ನ ನಾಲ್ಕು ಎಂಬ್ರಿಯೋಗಳನ್ನು ಆಸ್ಪತ್ರೆ ಮೂಲಕ ವರ್ಗಾಯಿಸಿ ಭಾರತದಲ್ಲಿ ಬಾಡಿಗೆ ತಾಯಂದಿರ ಮೂಲಕ ಕಾಜಲ್‌ ಮತ್ತು ಕವಿತಾ ಎಂಬ ಇಬ್ಬರು ಅವಳಿ ಜವಳಿ ಮಕ್ಕಳ ಮಾತೆಯಾದಳು. 

ಅದಾಗಿ 2016ರ ಜೂನ್‌ನಲ್ಲಿ ಲಿಟಿನಾ ನಾಟಿಂಗಂ ನ ಕ್ವೀನ್ಸ್‌ ಮೆಡಿಕಲ್‌ ಸೆಂಟರ್‌ನಲ್ಲಿ ಹೆಣ್ಣು ಮಗುವಿಗೆ (ಕಿಯರಾ) ಜನ್ಮ ನೀಡಿದಳು. 

ತೀವ್ರ ಮಟ್ಟದ ಕ್ಯಾನ್ಸರ್‌ ಪೀಡಿತೆಯಾಗಿದ್ದ  ತನಗೆ ಮಗುವೇ ಆಗದೆಂದು ವೈದ್ಯರು ಹೇಳಿದ ಹೊರತಾಗಿಯೂ ತಾನೀಗ ನಾಲ್ಕು ಮಕ್ಕಳ ತಾಯಿಯಾಗಿರುವುದು ಲಿಟಿನಾಗೆ ಅತ್ಯಂತ ಸಂತಸ, ಸಂತೃಪ್ತಿಯ ಹಾಗೂ ಸಾರ್ಥಕ ಬದುಕಿಗೆ ಕಾರಣವಾಗಿದೆ. 


More News of your Interest

Trending videos

Back to Top