Updated at Mon,24th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪಾಕ್‌ ಪ್ರಧಾನಿ ಸಮ್ಮುಖದಲ್ಲಿ ಗಾಯತ್ರೀ ಮಂತ್ರ ಹಾಡಿದ ಹಿಂದೂ ಹುಡುಗಿ

ಕರಾಚಿ : ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಸಮ್ಮುಖದಲ್ಲೇ, ಹೋಳಿ ಕಾರ್ಯಕ್ರಮದಲ್ಲಿ, ಹಿಂದೂ ಹುಡುಗಿಯೊಬ್ಬಳು ಗಾಯಂತ್ರಿ ಮಂತ್ರವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ನಿಬ್ಬೆರಗುಗೊಳಿಸಿ ದ್ದಾಳೆ.

ಕಳೆದ ಮಾರ್ಚ್‌ 15ರಂದು ಕರಾಚಿಯಲ್ಲಿ ಹಿಂದೂಗಳು ಏರ್ಪಡಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಭಾಗವಹಿಸಿದ್ದರು. 

ಅನ್ಯ ಧರ್ಮೀಯರನ್ನು ಬಲವಂತದಿಂದ ಮತಾಂತರಿಸುವುದು ಇಸ್ಲಾಂ ನಲ್ಲಿ ಅಪರಾಧವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ ಷರೀಫ್, ಪಾಕಿಸ್ಥಾನದಲ್ಲಿನ ಮತೀಯ ಅಲ್ಪಸಂಖ್ಯಾಕರ ಹಕ್ಕುಗಳನ್ನು ರಕ್ಷಿಸುವುದಕ್ಕೆ ತಮ್ಮ ಸರಕಾರ ಬಲವಾಗಿ ಬದ್ಧವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನರೋಧಾ ಮಾಲಿನಿ ಎಂಬ ಹಿಂದೂ ಹುಡುಗಿ ವೇದಿಕೆಯಲ್ಲಿ ಸ್ವಸ್ತಿ ವಾಚನದ ರೂಪದಲ್ಲಿ ಗಾಯತ್ರಿ ಮಂತ್ರವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದಳು. ಆ ಸಂದರ್ಭದಲ್ಲಿ ವೇದಿಕೆಯಲ್ಲಿದ್ದವರು ಹಾಗೂ ಸಭಿಕ ವರ್ಗದವರು ಯಾವ ರೀತಿಯ ಪ್ರತಿಕ್ರಿಯೆ ತೋರಿದರು ಎಂಬುದಕ್ಕೆ ಇಲ್ಲಿರುವ ವೈರಲ್‌ ವಿಡಿಯೋ ಸಾಕ್ಷಿಯಾಗಿದೆ. 


More News of your Interest

Trending videos

Back to Top