CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿಂಹದ ಮೇಲೆ ಪಾಕ್‌ ವರನ ಸವಾರಿ!: ವೈರಲ್‌ ವಿಡಿಯೋ 

ಮುಲ್ತಾನ್‌: ಮುದುಮಗ ಕುದುರೆ, ಕಾರು,ಬೈಕ್‌ನಲ್ಲಿ ಬರುವುದು  ಸಾಮಾನ್ಯ .ಆದರೆ ಪಾಕಿಸ್ತಾನದಲ್ಲಿ ಮದುಮಗನೊಬ್ಬ ಸಿಂಹದ ಮೇಲೆಯೇ ಸವಾರಿ ಮಾಡಿ ಇದೀಗ ಭಾರೀ ಸುದ್ದಿಯಾಗಿದ್ದಾನೆ. ವರನ ಸಿಂಹ ಸವಾರಿಯ ವಿಡಿಯೋ ಇದೀಗ ವೈರಲ್‌ ಆಗಿದೆ. 

ಶೇಖ್‌ ಮೊಹಮದ್‌ಗೆ ಎಲ್ಲರಂತೆ ಕುದುರೆಯ ಮೇಲೆ ಕುಳಿತು ತೆರಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಎನಾದರೊಂದು  ವಿಭಿನ್ನತೆ ಇರಲಿ ಎಂದು ಸಿಂಹದ ಮೇಲೆ ಸವಾರಿ ಮಾಡಲು ಮುಂದಾಗಿದ್ದಾನೆ. ಸಿಂಹದ ಬೆನ್ನೇರಿ ಹೋಗುವುದು ದುಸ್ಸಾಹಸವಾದ ಕಾರಣ ಸಿಂಹವಿದ್ದ ಪಂಜರದ ಮೇಲೆ ಕುಳಿತು  ವಿವಾಹ ವೇದಿಕೆಯತ್ತ ತೆರಳಿದ್ದಾನೆ. 

ಶೇಖ್‌ ಮೊಹಮದ್‌ಗೆ ಯುವತಿಯ ಕಡೆಯಿಂದಲೂ ಅಪಾರ ಪ್ರಮಾಣದ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. 

ತನ್ನ ಸಿಂಹ ಸವಾರಿಯ ಆಸೆ ಈಡೆರಿಸಿದ ತಂದೆಗೆ ಶೇಖ್‌ ಧನ್ಯವಾದ ಸಲ್ಲಿಸಿದ್ದಾನಂತೆ. 

Back to Top