Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟೆಕ್ಸಾಸ್‌ ದೇವದೂತನ ಪ್ರಕಾರ 3ನೇ ಮಹಾಯುದ್ಧ ಮೇ 13ರಂದು ಆರಂಭ !

ಟೆಕ್ಸಾಸ್‌ : ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆಯ ನಡುವೆ ಅಮೆರಿಕ, ರಶ್ಯ ಮತ್ತು ಉತ್ತರ ಕೊರಿಯ ನಡುವೆ ಒಂದೇ ಸಮನೆ ಸಮರೋತ್ಸಾಹದ ಮಾತುಗಳು ಒಂದೆಡೆ  ಕೇಳಿಬರುತ್ತಿವೆಯಾದರೆ ಇನ್ನೊಂದೆಡೆ ಸ್ವಯಂಘೋಷಿತ ದೇವದೂತನೊಬ್ಬ ತನಗೆ "ಮೂರನೇ ಜಾಗತಿಕ ಯುದ್ಧ' ನಿರ್ದಿಷ್ಟವಾಗಿ ಯಾವ ದಿನಾಂಕದಂದು ಆರಂಭಗೊಳ್ಳುತ್ತದೆ ಎಂದು ತನಗೆ ತಿಳಿದಿರುವುದಾಗಿ ಹೇಳಿಕೊಂಡಿದ್ದಾನೆ.

ಇದೇ ಸ್ವಯಂಘೋಷಿತ ದೇವದೂತನು ಈ ಮೊದಲು ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಡೊನಾಲ್ಡ್‌ ಟ್ರಂಪ್‌ ಅವರೇ ಗೆಲ್ಲುತ್ತಾರೆ ಎಂಭ ಭವಿಷ್ಯ ನುಡಿದಿದ್ದ.

ಈ ಸ್ವಯಂಘೋಷಿತ ಅತಿಮಾನುಷ ದೇವದೂತನು "ನಾನು ಬೈಬಲ್‌ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ್ದೇನೆ; ಹಾಗಾಗಿ ಈ ವಿಶ್ವದಲ್ಲಿ ಯಾವ ದಿನಾಂಕದಂದು ಪರಮಾಣು ಸಮರ ಸ್ಫೋಟಗೊಳ್ಳುತ್ತದೆ ಎಂದು ನನಗೆ ಗೊತ್ತಿದೆ' ಎಂದು ಹೇಳಿಕೊಂಡಿರುವುದಾಗಿ ಡೇಲಿ ಸ್ಟಾರ್‌ ವರದಿ ಮಾಡಿದೆ.

ಈ ಸ್ವಯಂ ಘೋಷಿತ ದೇವದೂತನ ಹೆಸರು ಕ್ಲೇರ್‌ವೊಯಾಂಟ್‌ ಹೊರೇಶಿಯೋ ವಿಲೇಗಾಸ್‌ ಎಂಬುದಾಗಿದೆ. 2015ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಅವರೇ ಗೆಲ್ಲುತ್ತಾರೆ ಎಂದು ಈತ ಭವಿಷ್ಯ ನುಡಿದಿದ್ದ. 

ಅಷ್ಟು ಮಾತ್ರ ಅಲ್ಲ; ಟ್ರಂಪ್‌ ಅವರು ಉಜ್ವಲವಾಗಿ ಹೊಳೆದು ಬೆಳಗುವ ಅರಸನಾಗಿ ಮೂಡಿ ಬರಲಿದ್ದಾರೆ ಮತ್ತು ಅವರೇ ಮೂರನೇ ಮಹಾ ಯುದ್ಧಕ್ಕೆ ಕಾರಣರಾಗುತ್ತಾರೆ ಎಂದು ವಿಲೇಗಾಸ್‌ 2015ರಲ್ಲೇ ಹೇಳಿದ್ದ.

ಟ್ರಂಪ್‌ ಸಿರಿಯಾ ಮೇಲೆ ಆಕ್ರಮಣ ಮಾಡುತ್ತಾರೆ ಮತ್ತು ಇದರ ಫ‌ಲವಾಗಿ ರಶ್ಯ, ಉತ್ತರ ಕೊರಿಯ ಮತ್ತು ಚೀನ ಮೂರನೇ ಮಹಾ ಯುದ್ಧಕ್ಕೆ ಪಾದಾರ್ಪಣೆ ಮಾಡುತ್ತವೆ ಎಂದೂ ವಿಲೇಗಾಸ್‌ ಹೇಳಿದ್ದ.

ಟೆಕ್ಸಾಸ್‌ನಲ್ಲಿ ವಾಸಿಸಿಕೊಂಡಿರುವ ವಿಲೇಗಾಸ್‌ ಓರ್ವ ಕ್ಯಾಥೋಲಿಕ್‌ ಅನುಯಾಯಿ. ಹಿಂದೆ ಆತ ಹೇಳಿದ್ದ ಮಾತುಗಳು ಹೀಗಿವೆ : ನಾನೊಂದು ಕನಸು ಕಂಡೆ. ಅದರಲ್ಲಿ ಬೆಂಕಿಯ ಭಾರೀ ದೊಡ್ಡ ಉಂಡೆಗಳು ಆಗಸದಿಂದ ಭೂಮಿಗೆ ಅಪ್ಪಳಿಸುವುದನ್ನು ಕಂಡೆ'. 

ಟ್ರಂಪ್‌ ಅವರು ಹೊಳೆದು ಬೆಳಗುವ ಅರಸನಾಗಿ ಪಟ್ಟಾಭಿಷಿಕ್ತರಾಗಲಿದ್ದಾರೆ ಎಂದು ವಿಲೇಗಾಸ್‌ ಎರಡು ವರ್ಷಗಳ ಹಿಂದೆಯೇ ಹೇಳಿದ್ದ. 

ವಿಲೇಗಾಸ್‌ ಪ್ರಕಾರ ಇದೇ ವರ್ಷ ಮೇ 13 - ಕ್ರಿಸ್ತನ ತಾಯಿ, ವರ್ಜಿನ್‌ ಮೇರಿ , ಅಂದರೆ ಅವರ್‌ ಲೇಡಿ ಆಫ್ ಫಾತಿಮಾ ಧರೆಗಿಳಿದು ಬಂದ ನೂರನೇ ವರ್ಷಾಚರಣೆಯ ದಿನ - ಅಂದು ಮೂರನೇ ಮಹಾ ಯುದ್ಧ ಸ್ಫೋಟಗೊಳ್ಳುತ್ತದೆ. 

ಈ ವರ್ಷ ಮೇ 13ರಿಂದ ಅಕ್ಟೋಬರ್‌ 13ರ ತನಕ ನಡೆಯುವ ಮೂರನೇ ಮಹಾ ಯುದ್ಧವು ವಿಶ್ವದಲ್ಲಿ ಅಪಾರ ಪ್ರಮಾಣದ ಸಾವು, ನೋವು, ಆಘಾತ, ನಾಶ ನಷ್ಟವನ್ನು ಉಂಟು ಮಾಡಲಿದೆ. ಅಮೆರಿಕದ ಹಿಟ್‌ ಲಿಸ್ಟ್‌ನಲ್ಲಿ ಇರುವ ಮುಂದಿನ ದೇಶ ಉತ್ತರ ಕೊರಿಯ ಎನಿಸಲಿದೆ. 

ಸ್ವಯಂ ಘೋಷಿತ ದೇವದೂತನ ವಿಲೇಗಾನ್‌ ಹೀಗೆ ಹೇಳುತ್ತಾನೆ : ದೇವರನ್ನು ನನ್ನನ್ನು ಏಕಾಂಗಿಯಾಗಿ ಇರಿಸಿದ್ದಾನೆ; ನನಗೆ ಮಕ್ಕಳಿಲ್ಲ; ಜನರಿಗೆ ದೇವ ಸಂದೇಶವನ್ನು ತಿಳಿಸುವುದಕ್ಕೆಂದೇ ದೇವರು ನನ್ನನ್ನು ಧರೆಗೆ ಕಳುಹಿಸಿದ್ದಾನೆ'. 


More News of your Interest

Trending videos

Back to Top