Updated at Sun,23rd Jul, 2017 9:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಛೇ.. ಮದುಮಗನ ಸಮೇತ ಬಾವಿಗೆ ಹಾರಿದ ಕುದುರೆ!Viral Video

ಲಕ್ನೋ: ಇಲ್ಲಿನ ಗೊಂಡಾ ಎಂಬಲ್ಲಿನ ಕಾಜಿ ತಹರಾರ್‌ ಎಂಬಲ್ಲಿ ಮದುವೆ ದಿಬ್ಬಣ ಸಾಗುತ್ತಿದ್ದ ವೇಳೆ ಮದುಮಗ ಕುಳಿತಿದ್ದ ಕುದುರೆ ಹೆದರಿ ತೆರೆದ ಬಾವಿಗೆ ಹಾರಿದ ಘಟನೆ ನಡೆದಿದೆ. ಅದೃಷ್ಟವಷಾತ್‌ ಮದುಮಗ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಕುದುರೆಯೂ ಸಣ್ಣ ಗಾಯಗಳಿಗೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದೆ. 

ದಿಬ್ಬಣ ಸಾಗುವ ವೇಳೆ ಪಟಾಕಿ ಸಿಡಿಸಿದರಿಂದ ಕಂಗಾಲಾದ ಕುದುರೆ ದಿಕ್ಕಾಪಾಲಾಗಿ ಓಡಿ ಮದುಮಗನ ಸಮೇತ ಬಾವಿಗೆ ಬಿದ್ದಿದೆ. ನೆಂಟರಿಷ್ಟರೆಲ್ಲ ಅನಿರೀಕ್ಷಿತ ದೃಶ್ಯನೋಡಿ ಕಂಗಾಲಾಗಿ ಹೋಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಜೆಸಿಬಿ ಯಂತ್ರ ತರಿಸಿ ಕುದುರೆ ಮತ್ತು ಮದುಮಗನನ್ನು ಮೇಲಕ್ಕೆತ್ತಿದ್ದಾರೆ.


Back to Top