CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೇರಳಕ್ಕೆ ಬಂತು 38 ಅಡಿ ಉದ್ದದ ಲಿಮೋಸಿನ್‌ ಕಾರು!

ಕಕ್ಕನಾಡ್‌: ಅಮೆರಿಕದಂತಹ ಮುಂದು ವರಿದ ದೇಶಗಳಲ್ಲಿ ಕಾಣಸಿಗುವ ಲಿಮೋಸಿನ್‌ ಕಾರೊಂದು ಕೇರಳಕ್ಕೆ ಬಂದಿದೆ. ಕಕ್ಕನಾಡ್‌ ಸಾರಿಗೆ ಕಚೇರಿಗೆ ಈ ಕಾರನ್ನು ನೋಂದಣಿ ಮಾಡುವ ಸಲು ವಾಗಿ ತಂದಾಗ ಅದನ್ನು ನೋಡಲು ಮತ್ತು ಕಾರಿನ ಜತೆಗೆ ಸೆಲ್ಫಿ ತೆಗೆಯಲು ಜನರು ಮುಗಿಬಿದ್ದರು. 

ಈ ಕಾರು ಬರೋಬ್ಬರಿ 38 ಅಡಿ ಉದ್ದವಿದೆ. ಅಂದರೆ ಬಹುತೇಕ ನಮ್ಮ ಬಸ್ಸಿನಷ್ಟೇ ಉದ್ದ. ದುಬಾಯಿಯಲ್ಲಿ ಉದ್ಯಮಿಯಾಗಿರುವ ಹಾಗೂ ಸಿನೆಮ್ಯಾಕ್ಸ್‌ ಮಲ್ಟಿಪ್ಲೆಕ್ಸ್‌ ಗಳ ಮಾಲಕ ಚೆಂಗನ್ನೂರಿನ ನಿವಾಸಿ ಬಾಬು ಜಾನ್‌ ಮತ್ತು ಪಂಜಾಬಿನ ಉದ್ಯಮಿ ಗುರುದೇವ್‌ ಸಿಂಗ್‌ ಕಾರಿನ ಜಂಟಿ ಮಾಲಕರು. 

ಕೇರಳಕ್ಕೆ ಬರುವ ಮೊದಲು ಕಾರು ದುಬಾಯಿ ಯಲ್ಲಿ ಓಡಾಡುತ್ತಿತ್ತು. ಇಷ್ಟಕ್ಕೂ ಈ ಕಾರನ್ನು ಇಲ್ಲಿಗೆ ತಂದಿರುವುದು ಸಿನೆಮಾ ಶೂಟಿಂಗ್‌ಗಾಗಿ. ಆರು ತಿಂಗಳ ಹಿಂದೆಯೇ ಹಡಗಿನಲ್ಲಿ ಬಂದ ಕಾರು ರಸ್ತೆಗಿಳಿಯಲು ಅನುಮತಿ ಸಿಗದೆ ಕೊಚ್ಚಿ ಬಂದರಿನಲ್ಲಿತ್ತು. ಕಸ್ಟಮ್ಸ್‌ ಮತ್ತು ಕೇರಳದ ನ್ಯಾಯಾಲಯ ಅನುಮತಿ ನೀಡದ ಕಾರಣ ಮಾಲಕರು ಬೆಂಗಳೂರು ಕಸ್ಟಮ್ಸ್‌, ಅಬಕಾರಿ ಮತ್ತು ಸೇವಾತೆರಿಗೆ ನ್ಯಾಯ ಮಂಡಳಿಯ ಮೆಟ್ಟಿಲೇರಿ ಅನುಮತಿ ಪಡೆದುಕೊಂಡಿದ್ದಾರೆ. ಮಟ್ಟಂಚೇರಿ ಆರ್‌ಟಿಒದಲ್ಲಿ ಕಾರನ್ನು ತಾತ್ಕಾಲಿಕವಾಗಿ ನೋಂದಾಯಿಸಲಾಗಿದೆ. ಕೆಎಲ್‌ 7 ಸಿಎಲ್‌ 6666 ಎಂಬ ನಂಬರನ್ನು 25,000 ರೂ. ಕೊಟ್ಟು ಕಾದಿರಿಸಿದ್ದಾರೆ. ಈ ನಂಬರ್‌ ಸಿಕ್ಕಿದ ಬಳಿಕ ಖಾಯಂ ನೋಂದಣಿಯಾಗಲಿದೆ. 

ಥ್ರಿಲ್ಲರ್‌ ಚಿತ್ರವೊಂದರ ಶೂಟಿಂಗ್‌ಗಾಗಿ ಕಾರನ್ನು ತರಲಾಗಿದೆ. ಕೇರಳ ಮತ್ತು ಪಂಜಾಬ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಕ್ಲೈಮ್ಯಾಕ್ಸ್‌ ಸೇರಿದಂತೆ ಹಲವು ಮುಖ್ಯ ದೃಶ್ಯಗಳು ಲಿಮೋಸಿನ್‌ ಕಾರಿನೊಳಗೆ ಚಿತ್ರೀಕರಣಗೊಳ್ಳಲಿದೆ. 

ಆದರೆ ಕೇರಳದ ರಸ್ತೆಗಳಲ್ಲಿ ಕಾರನ್ನು ಚಲಾಯಿಸುವುದೇ ದೊಡ್ಡ ಸಮಸ್ಯೆ. ನೇರ‌ ರಾಷ್ಟ್ರೀಯ ಹೆದ್ದಾರಿಗಳಲ್ಲಾದರೆ ಸರಾಗವಾಗಿ ಚಲಾಯಿಸಬಹುದು. ಆದರೆ ನಗರದೊಳಗೆ ತರಲು ಭಾರೀ ಸಮಸ್ಯೆಯಾಗುತ್ತದೆ. ತಿರುವುಗಳಲ್ಲಿ ಕಾರು ಸಿಕ್ಕಿ ಬಿದ್ದಾಗ ಟ್ರಾಫಿಕ್‌ ಜಾಮ್‌ ಆಗಿ ಬೈಸಿಕೊಳ್ಳಬೇಕಾಗುತ್ತದೆ. 

ಕಾರಿನ ವಿಶೇಷ‌ಗಳು
*  ಉದ್ದ -38 ಅಡಿ
* ಬೆಲೆ- 8 ಕೋ. ರೂ. 
* ಮೋಡೆಲ್‌ -ಕ್ಯಾಡಿಲಾಕ್‌  ಎಸ್ಕಲೇಡ್‌ ಲಿಮೋಸಿನ್‌ 

ಲಿಮೋಸಿನ್‌ ಜಗತ್ತಿನ ಅತಿ ಉದ್ದದ ಕಾರುಗಳು. ಒಳಗೆ 18 ಮಂದಿಗೆ ಸ್ಥಳವಕಾಶವಿದೆ. ಚಾಲಕನಿಗೆ ಪ್ರತ್ಯೇಕ  ಕ್ಯಾಬಿನ್‌ ಇದ್ದು, ಒಳಗಿನ ವ್ಯವಹಾರ ಗಳು ಅವನಿಗೆ ಕಾಣಿಸುವುದಿಲ್ಲ.   ಕಂಪ್ಯೂ ಟರ್‌, ಟಿವಿ, ಮ್ಯೂಸಿಕ್‌ ಸಿಸ್ಟಂ, ಮಿನಿ ಬಾರ್‌, ವಾಶ್‌ ಬೇಸಿನ್‌ ಮುತಾದ ಸೌಲಭ್ಯಗಳು ಇವೆ.  ಚಿಕ್ಕ ಬಿಸಿನೆಸ್‌ ಮೀಟಿಂಗ್‌ ಮತ್ತಿತರ ಕೂಟಗಳನ್ನು ಕಾರಿನೊಳಗೆ ಆಯೋಜಿಸಬಹುದು. ಶ್ರೀಮಂತರ ಲಿಮೋಸಿನ್‌ ಕಾರುಗಳ ಒಳ ಭಾಗ ವನ್ನು ತಮ್ಮ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿ ಕೊಳ್ಳುತ್ತಾರೆ. ಕೆಲವು ಲಿಮೋ ಸಿನ್‌ಗಳ ಒಳಗಡೆ ಮಿನಿ ಥಿಯೇಟರ್‌ ಕೂಡ ಇದೆ. 

Back to Top