ಚೈನಾಮನ್‌: ಅಪರೂಪದ ಬೌಲಿಂಗ್‌ ತಳಿ

Team Udayavani, Mar 26, 2017, 3:49 PM IST

chainaman.jpg

ಚೈನಾಮನ್‌!
ಇದು ಕ್ರಿಕೆಟಿನ ಅಪರೂಪದ ಬೌಲಿಂಗ್‌ ಶೈಲಿ. ಎಡಗೈಯಲ್ಲಿ ಲೆಗ್‌ ಸ್ಪಿನ್‌ ಮಾಡುವ ಬೌಲಿಂಗ್‌ ನಮೂನೆಗೆ “ಚೈನಾಮನ್‌’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಪ್ಪೆಯಂತೆ ಹಾರುತ್ತ ಬೌಲಿಂಗ್‌ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪಾಲ್‌ ಆ್ಯಡಮ್ಸ್‌ ಅವರನ್ನೊಮ್ಮೆ ಕಲ್ಪಿಸಿಕೊಳ್ಳಿ. ಪಕ್ಕಾ ಚೈನಾಮನ್‌ ಬೌಲಿಂಗಿಗೆ ಆ್ಯಡಮ್ಸ್‌ಗಿಂತ ಉತ್ತಮ ಉದಾಹರಣೆ ಇಲ್ಲ!
ಧರ್ಮಶಾಲಾದಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದ ಕುಲದೀಪ್‌ ಯಾದವ್‌ ಹಾಗೂ ಅವರು ಮೊದಲ ದಿನವೇ ಸಾಧಿಸಿದ ಯಶಸ್ಸಿ ನಿಂದಾಗಿ ಚೈನಾಮನ್‌ ಬೌಲಿಂಗ್‌ ಮತ್ತೆ ಸುದ್ದಿಯಲ್ಲಿದೆ.

ಭಾರತದ ಪ್ರಥಮ ಚೈನಾಮನ್‌!
ಇಲ್ಲೊಂದು ಸಂಗತಿಯನ್ನು ಹೆಮ್ಮೆ ಹಾಗೂ ಅಷ್ಟೇ ಅಚ್ಚರಿಯಿಂದ ಹೇಳಬೇಕಿದೆ. ಕುಲದೀಪ್‌ ಯಾದವ್‌ ಭಾರತೀಯ ಟೆಸ್ಟ್‌ ಇತಿಹಾಸದ ಪ್ರಪ್ರಥಮ ಚೈನಾಮನ್‌ ಬೌಲರ್‌!

ಇಲ್ಲಿ ಇನ್ನೂ ಒಂದು ಸ್ವಾರಸ್ಯಕರ ಸಂಗತಿ ಇದೆ. ಭಾರತದ ಪುರುಷರ ಟೆಸ್ಟ್‌ಗಿಂತ ಮೊದಲೇ ವನಿತಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೈನಾಮನ್‌ ಬೌಲರ್‌ ಕಾಣಿಸಿಕೊಂಡಿದ್ದಾರೆ. ಈಕೆಯ ಹೆಸರು ಪ್ರೀತಿ ಡಿಮ್ರಿ. ಇವರೂ ಕುಲದೀಪ್‌ ಯಾದವ್‌ ಅವರಂತೆ ಉತ್ತರ ಪ್ರದೇಶದವರು. ಪ್ರೀತಿ ಡಿಮ್ರಿ 2006-2010ರ ನಡುವಿನ ಅವಧಿಯಲ್ಲಿ 2 ಟೆಸ್ಟ್‌ ಹಾಗೂ 23 ಏಕದಿನ ಪಂದ್ಯ ಗಳನ್ನಾಡಿದ್ದಾರೆ. ಉರುಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆ 33.

ಸಮಕಾಲೀನ ದೇಶಿ ಕ್ರಿಕೆಟ್‌ನಲ್ಲೂ ಚೈನಾಮನ್‌ ಬೌಲರ್‌ಗಳು ವಿರಳ. ಭೂತಗನ್ನಡಿ ಹಿಡಿದು ನೋಡಿದಾಗ ಕರ್ನಾಟಕದ ಶಿವಿಲ್‌ ಕೌಶಿಕ್‌ ಒಬ್ಬರಷ್ಟೇ ಕಂಡುಬರುತ್ತಾರೆ. ಗುಜರಾತ್‌ ಲಯನ್ಸ್‌ ಮತ್ತು ಹುಬ್ಬಳ್ಳಿ ಟೈಗರ್ ಪರ ಕೌಶಿಕ್‌ ಆಡಿದ್ದಾರೆ. ದಕ್ಷಿಣ ಆಫ್ರಿಕಾದ ಪಾಲ್‌ ಆ್ಯಡಮ್ಸ್‌ ಶೈಲಿಯಲ್ಲೇ ಬೌಲಿಂಗ್‌ ನಡೆಸುವ ಕೌಶಿಕ್‌ ಭಾರೀ ಕುತೂಹಲ ಮೂಡಿಸಿದ್ದಾರೆ. ಧರ್ಮಶಾಲಾದಲ್ಲಿ ಟೆಸ್ಟ್‌ ಆಡಲಿಳಿದ ಕುಲದೀಪ್‌ ಯಾದವ್‌ ಐಪಿಎಲ್‌ನಲ್ಲಿ ಕೆಕೆಆರ್‌ ತಂಡದ ಸದಸ್ಯ. ಇದಿಷ್ಟು ಭಾರತದ ಚೈನಾಮನ್‌ ಬೌಲರ್‌ಗಳ ಕಿರು ಇತಿಹಾಸ.

ಇದರ ಮೂಲ ಚೀನ!
ಬಲಗೈ ಹಾಗೂ ಎಡಗೈ ಬ್ಯಾಟ್ಸ್‌ಮನ್‌ಗಳಿಬ್ಬರ ಪಾಲಿಗೂ ಹೆಚ್ಚು ಅಪಾಯಕಾರಿಯಾದ ಈ ಎಸೆತಗಳ ಮೂಲ ಚೀನ ಎಂಬುದೊಂದು ಕೌತುಕ! ಎತ್ತಣ ಕ್ರಿಕೆಟ್‌, ಎತ್ತಣ ಚೀನ?!

ವೆಸ್ಟ್‌ ಇಂಡೀಸಿನ ಎಲ್ಲಿಸ್‌ ಅಚೋಂಗ್‌ 1933ರಷ್ಟು ಹಿಂದೆ ಇಂಥದೊಂದು ವಿಶಿಷ್ಟ ಶೈಲಿಯ ಬೌಲಿಂಗ್‌ ನಡೆಸಿ ವಿಶ್ವ ಮಟ್ಟದಲ್ಲಿ ಸುದ್ದಿಯಾದರು. ಅದು ಇಂಗ್ಲೆಂಡ್‌ ಎದುರಿನ ಓಲ್ಡ್‌ ಟ್ರಾಫ‌ರ್ಡ್‌ ಟೆಸ್ಟ್‌. ಮೂಲತಃ ಅಚೋಂಗ್‌ ಎಡಗೈ ಆರ್ಥ ಡಾಕ್ಸ್‌ ಸ್ಪಿನ್ನರ್‌ ಆಗಿದ್ದರು. ಆದರೆ ಅವರ ಎಸೆತವೊಂದು ಆಫ್ಸ್ಟಂಪ್‌ನಾಚೆ ಪಿಚ್‌ ಆದ ಬಳಿಕ “ಶಾರ್ಪ್‌ ಟರ್ನ್’ ಪಡೆದು ಇಂಗ್ಲೆಂಡಿನ ವಾಲ್ಟರ್‌ ರಾಬಿನ್ಸ್‌ ಅವರ ಸ್ಟಂಪನ್ನು ಎಗರಿಸಿತು.

ಇಂಥದೊಂದು ವಿಶಿಷ್ಟ ಹಾಗೂ ಅಷ್ಟೇ ಘಾತಕ ಎಸೆತಕ್ಕೆ ಔಟಾದುದನ್ನು ಸಹಿಸದ ರಾಬಿನ್ಸ್‌ ಸಿಟ್ಟಿನಿಂದ ಕುದಿಯ ತೊಡಗಿದರು. ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ ಅಚೋಂಗ್‌ ಅವರನ್ನು “ಫ್ಯಾನ್ಸಿ ಬೀಯಿಂಗ್‌ ಡನ್‌ ಬೈ ಎ ಬ್ಲಿಡಿ ಚೈನಾಮನ್‌…’ ಎಂದು ಬೈಯುತ್ತ ಹೋದರು!

ಅಂದಹಾಗೆ ಎಲ್ಲಿಸ್‌ ಅಚೋಂಗ್‌ ಮೂಲತಃ ಚೀನದವರು. ಟೆಸ್ಟ್‌ ಕ್ರಿಕೆಟ್‌ ಆಡಿದ ಚೀನ ಮೂಲದ ಮೊದಲ ಆಟಗಾರ
ನೆಂಬುದು ಇವರ ಪಾಲಿನ ಹೆಗ್ಗಳಿಕೆ. ಅಂದಿನಿಂದ “ಲೆಫ್ಟ್ ಹ್ಯಾಂಡ್‌ ರಿಸ್ಟ್‌ ಸ್ಪಿನ್ನರ್‌’ಗಳಿಗೆ ಚೈನಾಮನ್‌ ಬೌಲರ್ ಎಂದು ಕರೆಯುವುದು ರೂಢಿಯಾಯಿತು!

ಇವರ ಸಂಖ್ಯೆ ವಿರಳ
ಕ್ರಿಕೆಟ್‌ ಇತಿಹಾಸದಲ್ಲಿ ಇಂಥ ಚೈನಾಮನ್‌ ಬೌಲರ್‌ಗಳ ತಳಿ ಬಹಳ ವಿರಳ. ಅಬ್ಬಬ್ಟಾ ಎಂದರೆ 30 ಮಂದಿ ಬೌಲರ್‌ಗಳು ಸಿಕ್ಕಾರು. ಆದರೆ ಯಾರೂ ವಿಶ್ವ ಮಟ್ಟದಲ್ಲಿ ಸುದ್ದಿಯಾದವರಲ್ಲ. ಇಂಥ ಕೆಲವು ಹೆಸರುಗಳೆಂದರೆ ಚಕ್‌ ಫ್ಲೀಟ್‌ವುಡ್‌ ಸ್ಮಿತ್‌, ಜಾರ್ಜ್‌ ಟ್ರೈಬ್‌, ಜಾನಿ ವಾಡ್ಲ್ì, ಗ್ಯಾರಿ ಸೋಬರ್, ಲಿಂಡ್ಸೆ ಕ್ಲೈನ್‌, ಜಾನಿ ಮಾರ್ಟಿನ್‌, ಡೇವಿಡ್‌ ಸಿಂಕಾಕ್‌, ಇಶಾನ್‌ ಅಲಿ, ಬರ್ನಾರ್ಡ್‌ ಜೂಲಿಯನ್‌, ಪಾಲ್‌ ಆ್ಯಡಮ್ಸ್‌, ಬ್ರಾಡ್‌ ಹಾಗ್‌, ಬ್ಯೂ ಕ್ಯಾಸನ್‌, ಡೇವ್‌ ಮೊಹಮ್ಮದ್‌, ಮೈಕಲ್‌ ರಿಪ್ಪನ್‌, ಲಕ್ಷಣ ಸಂದಕನ್‌. 

ಇವರಲ್ಲಿ ಎಡಗೈ ವೇಗಿಯಾಗಿದ್ದ ಸೋಬರ್ ಹೆಸರು ಅಚ್ಚರಿ ಮೂಡಿಸುತ್ತದೆ. ಆದರೆ ಇವರು ಆಗಾಗ ರಿಸ್ಟ್‌ ಸ್ಪಿನ್‌ ಮೂಲಕವೂ ವಿಕೆಟ್‌ ಕಬಳಿಸಿದ್ದುಂಟು. ಅಂದಹಾಗೆ ಅಚೋಂಗ್‌ ಸಹಿತ ಇವರ್ಯಾರೂ ಸ್ಪೆಷಲಿಸ್ಟ್‌ ಚೈನಾಮನ್‌ ಬೌಲರ್‌ಗಳಲ್ಲ. ಇವರೆಲ್ಲ “ಫಿಂಗರ್‌ ಸ್ಪಿನ್‌’ ಮೂಲಕವೂ ಗುರುತಿಸಿಕೊಂಡಿದ್ದರು. ಸಮಕಾಲೀನರಲ್ಲಿ ಶ್ರೀಲಂಕಾದ ಸಂದಕನ್‌ ಹೆಚ್ಚು ಚಾಲ್ತಿಯಲ್ಲಿದ್ದಾರೆ.

ಕುಲದೀಪ್‌ ಮೊದಲು ವೇಗಿ !
ಇಲ್ಲಿ  ಕುಲದೀಪ್‌ ಯಾದವ್‌ ಕುರಿತಂತೆ ಸ್ವಾರಸ್ಯವೊಂದಿದೆ. ಅವರು ಮೂಲತಃ ಚೈನಾಮನ್‌ ಬೌಲರ್‌ ಆಗಿರಲಿಲ್ಲ. ಕಾನ್ಪುರ ಕ್ರಿಕೆಟ್‌ ಅಕಾಡೆಮಿಗೆ ಸೇರಿಕೊಳ್ಳುವಾಗ ಅವರೋರ್ವ ವೇಗದ ಬೌಲರ್‌. ವೇಗದ ಬೌಲಿಂಗ್‌ನತ್ತಲೇ ಅವರಿಗೆ ಹೆಚ್ಚಿನ ಆಸಕ್ತಿ. ಆದರೆ ಕೋಚ್‌ ಕಪಿಲ್‌ ಪಾಂಡೆ ಸಲಹೆ ಮೇರೆಗೆ ಅತ್ಯಂತ ವಿರಳವಾದ ಎಡಗೈ ರಿಸ್ಟ್‌ ಸ್ಪಿನ್‌ ಬೌಲಿಂಗ್‌ ನಡೆಸುವಂತೆ ಸೂಚನೆ ಬಂತು. ಮೊದಮೊದಲು ಇದು ಭಾರೀ ಕಠಿನವೆನಿಸಿತು. ಇದು ಸಾಧ್ಯವಿಲ್ಲ ಎಂದು ಅತ್ತದ್ದೂ ಉಂಟು. ಆದರೀಗ ಕುಲದೀಪ್‌ ಹೆಚ್ಚು  ಸಂತೃಪ್ತ ಕ್ರಿಕೆಟಿಗ!

- ಎಚ್‌. ಪ್ರೇಮಾನಂದ ಕಾಮತ್‌

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.