Updated at Sat,24th Jun, 2017 3:51PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗುಜರಾತ್‌ ಲಯನ್ಸ್‌ಗೆ ಸೇಡಿನ ಪಂದ್ಯ

ಕಳೆದ ಋತುವಿನಲ್ಲಿ ಕೆಕೆಆರ್‌ ತಂಡವು ಎರಡು ಬಾರಿ ಗುಜರಾತ್‌ ಲಯನ್ಸ್‌ಗೆ ಶರಣಾಗಿತ್ತು. ಆದರೆ ಈ ಬಾರಿ ಕೆಕೆಆರ್‌ ಭರ್ಜರಿ ಪ್ರದರ್ಶನ ನೀಡಿ ಗುಜರಾತ್‌ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಲಿನ್‌ ಮತ್ತು ಗಂಭೀರ್‌ ಅವರು ಮುರಿಯದ ಮೊದಲ ವಿಕೆಟಿಗೆ 184 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಗುಜರಾತ್‌ಗೆ 10 ವಿಕೆಟ್‌ಗಳ ಸೋಲು ಉಣಿಸಿದ್ದರು. ಇದೀಗ ಸೇಡು ತೀರಿಸಿಕೊಳ್ಳುವ ಅವಕಾಶ ಗುಜರಾತ್‌ಗೆ ಸಿಕ್ಕಿದೆ.

ಲಯನ್ಸ್‌ ಘರ್ಜಿಸಬೇಕಾದರೆ ಅಗ್ರ ಬ್ಯಾಟಿಂಗ್‌ ಕ್ರಮಾಂಕ ಸ್ಥಿರ ನಿರ್ವಹಣೆ ನೀಡುತ್ತಿರುವ ಕೆಕೆಆರ್‌ನ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಸ್ಪಿನ್ನರ್‌ಗಳಾದ ಸುನೀಲ್‌ ನಾರಾಯಣ್‌, ಕುಲದೀಪ್‌ ಯಾದವ್‌ ಮತ್ತು ಯೂಸುಫ್ ಪಠಾಣ್‌ ಅವರು ಒಟ್ಟಾರೆ 9 ಓವರ್‌ಗಳಲ್ಲಿ 43 ರನ್‌ ವೆಚ್ಚದಲ್ಲಿ ಡೇವಿಡ್‌ ವಾರ್ನರ್‌, ಶಿಖರ್‌ ಧವನ್‌ ಮತ್ತು ದೀಪಕ್‌ ಹೂಡ ಅವರ ವಿಕೆಟನ್ನು ಹಾರಿಸಿ ಹೈದರಾಬಾದ್‌ ವಿರುದ್ಧ 17 ರನ್ನುಗಳ ಗೆಲುವು ದಾಖಲಿಸಲು ನೆರವಾಗಿದ್ದರು.

ಗುಜರಾತ್‌ನ ವಿದೇಶಿ ಆಟಗಾರರಾದ ಡ್ವೇನ್‌ ಸ್ಮಿತ್‌ ಮತ್ತು ಆರನ್‌ ಫಿಂಚ್‌ ಇಷ್ಟರವರೆಗಿನ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಇದರಿಂದಾಗಿ ತಂಡದ ಬಲ ಹೆಚ್ಚಿಸಲು ಜಾಸನ್‌ ರಾಯ್‌ ಮತ್ತು ಜೇಮ್ಸ್‌ ಫಾಕ್ನರ್‌ ಅವರನ್ನು ಆಡಿಸುವ ಸಾಧ್ಯತೆಯಿದೆ. ಇದೇ ವೇಳೆ ಝಾರ್ಖಂಡಿನ ಆರಂಭಿಕ ಇಶಾನ್‌ ಕಿಶನ್‌ ಅವರ ಬ್ಯಾಟಿಂಗ್‌ ಕ್ರಮಾಂಕ ಬದಲಿಸುವ ಸಾಧ್ಯತೆಯೂ ಇದೆ.

ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಗಾಯಗೊಂಡಿರುವುದು ತಂಡಕ್ಕೆ ಹೊಡೆತವಾಗಿದೆ. ಅವರು ಕಳೆದ ಋತುವಿನಲ್ಲಿ ಆಡಿದ 15 ಪಂದ್ಯಗಳಿಂದ 17 ವಿಕೆಟ್‌ ಉರುಳಿಸಿದ್ದರು. ಆಲ್‌ರೌಂಡರ್‌ ರವೀಂದ್ರ ಜಡೇಜ ತಂಡಕ್ಕೆ ಮರಳಿದ್ದರೂ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸಿಲ್ಲ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಜಡೇಜ ತನ್ನ 4 ಓವರ್‌ಗಳ ದಾಳಿಯಲ್ಲಿ 53 ರನ್‌ ಬಿಟ್ಟುಕೊಟ್ಟಿದ್ದರು.


More News of your Interest

Back to Top