CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬುದ್ಧಿಮಾಂದ್ಯ ಮಕ್ಕಳ ಜತೆ ಸಮಯ ಕಳೆದ ಕೊಹ್ಲಿ

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಗುರುವಾರ ಬೆಳಗ್ಗೆ ಇಲ್ಲಿನ ತಮಹಾರ್‌ಗೆ ಭೇಟಿ ನೀಡಿ ಬುದ್ಧಿಮಾಂದ್ಯ ಮಕ್ಕಳ ಜತೆ ಕೆಲವು ಸಮಯ ಕಳೆದು ಸಂಭ್ರಮಿಸಿದರು. ಅವರೊಂದಿಗೆ ಆರ್‌ಸಿಬಿ ತಂಡದ ಸದಸ್ಯರಾದ ಎಬಿ ಡಿ'ವಿಲಿಯರ್ ಮತ್ತು ಶೇನ್‌ ವಾಟ್ಸನ್‌ ಕೂಡ ಸೇರಿಕೊಂಡರು.

ಐಪಿಎಲ್‌ ಕ್ರಿಕೆಟ್‌ ಕೂಟದಲ್ಲಿ ಭಾಗವಹಿಸಲು ಆಟಗಾರರು ಬಿಡುವಿಲ್ಲದ ಪ್ರಯಾಣ ಮತ್ತು ಅಭ್ಯಾಸ ನಡೆಸಬೇಕಾಗುತ್ತದೆ. ಇದರ ನಡುವೆಯೂ ಕೊಹ್ಲಿ ವಿಶೇಷ ಅಭಿಮಾನಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸುತ್ತಾರೆ.

ಕೊಹ್ಲಿ ಭಾರತೀಯ ತಂಡದ ನಾಯಕ ಮತ್ತು ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಆದರೆ ಮಕ್ಕಳ ಕಲ್ಯಾಣಕ್ಕಾಗಿ ಅವರು ಕೆಲ ಸಮಯ ಮೀಸಲಿಡುತ್ತಿದ್ದಾರೆ.

Back to Top