Updated at Tue,25th Apr, 2017 12:25AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸರ್ಫರಾಜ್‌ ಖಾನ್‌ ಬದಲಿಗೆ ಹರ್‌ಪ್ರೀತ್‌ ಸಿಂಗ್‌ ಆಯ್ಕೆ

ಬೆಂಗಳೂರು: ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಗಾಯಗೊಂಡಿರುವ ಸರ್ಫರಾಜ್‌ ಖಾನ್‌ ಬದಲಿಗೆ  ಮಧ್ಯಪ್ರದೇಶದ ಕ್ರಿಕೆಟಿಗ ಹರ್‌ಪ್ರೀತ್‌ ಸಿಂಗ್‌ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಪ್ರತಿ ನಿಧಿಸಲಿದ್ದಾರೆ. 

19ರ ಹರೆಯದ ಸರ್ಫರಾಜ್‌ ಖಾನ್‌ ಅವರು ತಂಡದ ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ  ಮಧ್ಯಪ್ರದೇಶವನ್ನು ಪ್ರತಿನಿಧಿಸಿದ ಮಧ್ಯಮ ಕ್ರಮಾಂಕದ ಆಟಗಾರರಾಗಿರುವ ಹರ್‌ಪ್ರೀತ್‌ ಸಿಂಗ್‌ ಅವರನ್ನು ಹೆಸರಿನ ಗೊಂದಲದಿಂದಾಗಿ ಹರಾಜಿನ ವೇಳೆ ಯಾವ ಫ್ರಾಂಚೈಸಿ ಕೂಡ ಖರೀದಿಸಿರಲಿಲ್ಲ.
 
ಐಪಿಎಲ್‌ ಹರಾಜಿನ ಮೊದಲು ಹರ್‌ಪ್ರೀತ್‌ ಸಿಂಗ್‌ ಅವರು ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಗರಿಷ್ಠ ರನ್‌ ಗಳಿಸಿದ ಆಟಗಾರರಾಗಿ ಮೂಡಿ ಬಂದಿದ್ದರು. ಮಧ್ಯ ವಲಯ ತಂಡದೆದುರು ಆಡಿದ ಅವರು 4 ಪಂದ್ಯಗಳಿಂದ 211 ರನ್‌ ಗಳಿಸಿದ್ದರು. ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಆಡಿದ 5 ಪಂದ್ಯಗಳಿಂದ 271 ರನ್‌ ಗಳಿಸಿದ್ದರು.


More News of your Interest

Trending videos

Back to Top