ಬಿದ್ದಾಟಂಡ ಕಪ್ ಹಾಕಿ: ಗೋಲಿನ ಸುರಿಮಳೆಗೈದ ಅಂಜಪರವಂಡ
Team Udayavani, Apr 22, 2017, 10:26 AM IST
ಮಡಿಕೇರಿ: ಬಿದ್ದಾಟಂಡ ಕಪ್ ಹಾಕಿಯ ಶುಕ್ರವಾರದ ಪಂದ್ಯದಲ್ಲಿ ಬಲಿಷ್ಠ ಅಂಜಪರವಂಡ ತಂಡ ಗೋಲಿನ ಸುರಿಮಳೆಗೈಯುವ ಮೂಲಕ ಎದುರಾಳಿ ತಂಡವನ್ನು ಮಣಿಸಿ ಮುಂದಿನ ಸುತ್ತನ್ನು ನಿರಾಯಾಸವಾಗಿ ಪ್ರವೇಶಿಸಿತು. ಬಿದ್ದಾಟಂಡ ಕಪ್ ಹಾಕಿ ಪಂದ್ಯಾವಳಿಯ ಹಾಟ್ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಅಂಜ ಪರವಂಡ ತಂಡ 5 – 0 ಗೋಲುಗಳ ಅಂತರದಿಂದ ಎದುರಾಳಿ ಮಾಳೆಯಂಡ ತಂಡವನ್ನು ನಿರಾಯಾಸವಾಗಿ ಮಣಿಸಿತು. ಅಂಜಪರವಂಡ ತಂಡದ ರೋಷನ್ ಎರಡು, ಕಾರ್ಯಪ್ಪ, ವಿನಯ್ ಮತ್ತು ಚಿರಾಗ್ ಚೆಂಗಪ್ಪ ಅವರು ತಲಾ ಒಂದು ಗೋಲು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನೊಂದು ಪಂದ್ಯದಲ್ಲಿ ಪಾಂಡಂಡ ತಂಡ 3-1 ಗೋಲುಗಳ ಅಂತರದಿಂದ ನಾಟೋಳಂಡವನ್ನು, ಮಂಡೀರ 2-0 ಯಿಂದ ಪೆಮ್ಮುಡಿಯಂಡ ವಿರುದ್ಧ, ಬೊಳಿಯಾಡಿರ 2-1 ಅಂತರದಿಂದ ಮನೆಯಪಂಡವನ್ನು, ಕಂಬೆಯಂಡ 2-1ರಿಂದ ಅಳಮೇಂಗಡವನ್ನು, ಅಮ್ಮಾಟಂಡ 4-1 ಗೋಲಿನಿಂದ ನೆಲ್ಲೀರ ವಿರುದ್ಧ ಗೆಲುವು ಸಾಧಿಸಿದವು. ಚೇನಂಡ ತಂಡ 4-0 ಗೋಲುಗಳ ಅಂತರದಿಂದ ಚಟ್ಟಂಗಡವನ್ನು, ಇಟ್ಟಿàರ ತಂಡ 6-1 ಗೋಲುಗಳ ಭಾರೀ ಅಂತರದಿಂದ ಪಳಂಗಿಯಂಡ ತಂಡವನ್ನು ಸೋಲಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ