ವಿಂಬಲ್ಡನ್ ಆಡಲಿರುವ ಅಮ್ಮ ಅಜರೆಂಕಾ!
Team Udayavani, May 24, 2017, 12:01 PM IST
ಪ್ಯಾರಿಸ್: ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ, ಬೆಲರೂಸ್ನ ವಿಕ್ಟೋರಿಯಾ ಅಜರೆಂಕಾ ಈ ಬಾರಿಯ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಆಡುವು ದಾಗಿ ಹೇಳಿದ್ದಾರೆ.
ಇದರ ಲ್ಲೇನು ವಿಶೇಷ ಎನ್ನುತ್ತೀರಾ? ಅಜರೆಂಕಾ ಗ್ರ್ಯಾನ್ಸ್ಲಾಮ್ ಆಡ ಲಿಳಿಯುತ್ತಿರುವುದು “ಅಮ್ಮ’ನಾದ ಬಳಿಕ!
27ರ ಹರೆಯದ ವಿಕ್ಟೋರಿಯಾ ಅಜರೆಂಕಾ 7 ತಿಂಗಳ ಹಿಂದೆ ಗಂಡುಮಗು “ಲಿಯೋ’ಗೆ ಜನ್ಮವಿತ್ತಿದ್ದರು. ಅನಂತರ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ಈಗ ಅಭ್ಯಾಸ ಆರಂಭಿಸಿ ಸ್ಪರ್ಧಾತ್ಮಕ ಟೆನಿಸ್ಗೆ ಮರಳುವ ಹುಮ್ಮಸ್ಸಿನಲ್ಲಿದ್ದಾರೆ. “ನನ್ನ ತರಬೇತಿ ಜಾರಿಯಲ್ಲಿದೆ. ಟೆನಿಸ್ ಸ್ಪರ್ಧೆಗಿಳಿಯಲು ಸಿದ್ಧಳಾಗಿದ್ದೇನೆ. ಜತೆಗೆ ತಾನು ಲಂಡನ್ ಮತ್ತು ವಿಂಬಲ್ಡನ್ ನೋಡಬೇಕೆಂದು ಮಗ ಲಿಯೋ ಕಿಂಡಾ ಹೇಳುತ್ತಿದ್ದಾನೆ…’ ಎಂದು ಅಜರೆಂಕಾ ತುಸು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
“ಗ್ರಾಸ್ ಕೋರ್ಟ್ನಲ್ಲೇ ಅತ್ಯಂತ ಮಹತ್ವದ್ದೆನಿಸಿದ ವಿಂಬಲ್ಡನ್ನಲ್ಲಿ ಆಡುವುದು ನನ್ನ ಯೋಜನೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಿಮಗೆ ಬೆಳವಣಿಗೆಗಳನ್ನು ತಿಳಿಸುತ್ತ ಇರುತ್ತೇನೆ…’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು