ಉಮರ್ ಅಕ್ಮಲ್ ಬದಲು ಹ್ಯಾರಿಸ್
Team Udayavani, May 24, 2017, 12:08 PM IST
ಲಾಹೋರ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳ ಲಿರುವ ಪಾಕಿಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾ ಗಿದೆ. ಗಾಯಾಳು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಉಮರ್ ಅಕ್ಮಲ್ ಬದಲು ಎಡಗೈ ಬ್ಯಾಟ್ಸ್ ಮನ್ ಹ್ಯಾರಿಸ್ ಸೊಹೈಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.
2 ಫಿಟ್ನೆಸ್ ಟೆಸ್ಟ್ಗಳಲ್ಲೂ ಉಮರ್ ಅಕ್ಮಲ್ ತೇರ್ಗಡೆ ಯಾಗದ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಪಾಕ್ ಆಯ್ಕೆ ಸಮಿತಿ ಅಧ್ಯಕ್ಷ ಇಂಝಮಾಮ್ ಉಲ್ ಹಕ್ ಹೇಳಿದರು. ಅಕ್ಮಲ್ ಸ್ಥಾನಕ್ಕೆ ಮತ್ತೂಬ್ಬ ಎಡಗೈ ಬ್ಯಾಟ್ಸ್ ಮನ್ ಉಮರ್ ಅಮೀನ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಹ್ಯಾರಿಸ್ಅವರಿಗೆ ಅದೃಷ್ಟ ಒಲಿಯಿತು.
ಪಾಕಿಸ್ಥಾನ ತಂಡ: ಸಫìರಾಜ್ ಅಹ್ಮದ್ (ನಾಯಕ), ಅಹ್ಮದ್ ಶೆಹಜಾದ್, ಅಜರ್ ಅಲಿ, ಬಾಬರ್ ಆಜಂ, ಫಾಹಿಮ್ ಅಶ್ರಫ್, ಹಸನ್ ಅಲಿ, ಇಮಾದ್ ವಾಸಿಮ್, ಜುನೇದ್ ಖಾನ್, ಮೊಹ ಮ್ಮದ್ ಆಮಿರ್, ಮೊಹಮ್ಮದ್ ಹಫೀಜ್, ಶಾಬಾದ್ ಖಾನ್, ಶೋಯಿಬ್ ಮಲಿಕ್, ವಹಾಬ್ ರಿಯಾಜ್, ಫಕರ್ ಜಮಾನ್, ಹ್ಯಾರಿಸ್ ಸೊಹೈಲ್.