ಪಠಾಣ್ ಆಯ್ತು,ಸಂಪ್ರದಾಯವಾದಿಗಳಿಂದ ಮತ್ತೆ ಶಮಿಗೆ ಬುದ್ದಿವಾದ!
Team Udayavani, Jul 20, 2017, 3:43 PM IST
ಹೊಸದಿಲ್ಲಿ: ವೇಗಿ ಇರ್ಫಾನ್ ಪಠಾಣ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಪತ್ನಿಯ ಪೋಟೋ ಸಾಕಷ್ಟು ಸುದ್ದಿ ಮಾಡಿದ ಬೆನ್ನಲ್ಲೇ ಭಾರತ ತಂಡದ ಇನ್ನೋರ್ವ ವೇಗಿ ಮೊಹಮ್ಮದ್ ಶಮಿಯ ಫೋಟೋ ವೊಂದಕ್ಕೆ ಸ್ವಯಂಘೋಷಿತ ಇಸ್ಲಾಂ ಸಂಪ್ರದಾಯವಾದಿಗಳು ಟೀಕೆಗಳ ಮಳೆ ಸುರಿಸಿದ್ದಾರೆ.
ಶಮಿ ಪುತ್ರಿ ಆಯಿರಾಳ 2 ನೇ ವರ್ಷದ ಬರ್ತ್ಡೇ ಆಚರಣೆಯ ಫೋಟೋವೊಂದನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಫೋಟೋದಲ್ಲಿ ಶಮಿ ಪತ್ನಿ ಹಿಜಬ್ ಧರಿಸಿರಲಿಲ್ಲ. ಇದನ್ನೇ ಹಲವರು ಆಕ್ಷೇಪಿಸಿದ್ದಾರೆ.
ಶಮಿ ಈ ರೀತಿ ಬರ್ತ್ ಡೇ ಆಚರಿಸಿಕೊಳ್ಳಬೇಡಿ. ಮೊದಲು ನಿಮ್ಮ ಪತ್ನಿಗೆ ಹಿಜಬ್ ಧರಿಸಲು ಹೇಳಿ .. ಹೀಗೆ ನೂರಾರು ಕಮೆಂಟ್ಗಳನ್ನು ಮಾಡಿದ್ದಾರೆ.
ಕಳೆದ ವರ್ಷವೂ ಶಮಿ ಅವರ ಪತ್ನಿಯೊಂದಿಗಿನ ಫೋಟೋವೊಂದಕ್ಕೆ ಸಂಪ್ರದಾಯವಾದಿಗಳು ತೀವ್ರ ಟೀಕೆ ಮಾಡಿದ್ದರು.
ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಶಮಿ ‘ಈ ಇಬ್ಬರು ನನ್ನ ಜೀವನ(ಪತ್ನಿ ಮತ್ತು ಪುತ್ರಿ)ಮತ್ತುಜೀವನ ಸಂಗಾತಿಗಳು. ನನಗೆ ಏನು ಮಾಡಬೇಕು , ಹೇಗೆ ಇರಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ನಾವು ಮಾನವನಾಗಿ ಹೇಗೆ ಬದುಕಬೇಕು ಎನ್ನುವ ಕುರಿತು ಆಲೋಚಿಸಬೇಕಾಗಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…