Updated at Wed,29th Mar, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಖಾಸಗಿ ಆಸ್ಪತ್ರೆಗಳ ಕೋಪಕ್ಕೆ ಹೊಸ ಕಾಯ್ದೆ ಕಾರಣ

ಬೆಂಗಳೂರು: ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳು ವಾಜಪೇಯಿ ಆರೋಗ್ಯ ಸೇವೆ, ರಾಜೀವ್‌ಗಾಂಧಿ ಆರೋಗ್ಯ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆಗಳ ಸೇವೆ ಸ್ಥಗಿತಗೊಳಿಸುವುದಾಗಿ ಸೋಮವಾರ ಹೇಳಿದ್ದವು. ಸರ್ಕಾರ ಈ ಯೋಜನೆಗಳ 100 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿದ್ದರೂ, ಮೂಲ ಕಾರಣ 
"ಕರ್ನಾಟಕ ವೈದ್ಯಕೀಯ ಸೇವೆಗಳ ನಿಯಂತ್ರಣ ಕಾಯ್ದೆ' ಎಂದು ತಿಳಿದುಬಂದಿದೆ.

ಹೌದು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ
"ಕರ್ನಾಟಕ ವೈದ್ಯಕೀಯ ಸೇವೆಗಳ ನಿಯಂತ್ರಣ ಕಾಯ್ದೆ' ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕರಡು ಸಹ ಸಿದ್ದಗೊಂಡಿದ್ದು, ಫೆಬ್ರವರಿ 6ರಿಂದ ಆರಂಭವಾಗುವ ಮುಂದಿನ ಜಂಟಿ ಅಧಿವೇಶನ ಅಥವಾ ಬಜೆಟ್‌ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಅದು ಅಂಗೀಕಾರಗೊಂಡರೆ ತಮಗೆ ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಮಾಲೀಕರು ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದೆ ಕಾಯ್ದೆಯಲ್ಲಿ?: ಎಲ್ಲ ಕಡೆ ಚಿಕಿತ್ಸೆಗೆ ನಿಗದಿಪಡಿಸಿರುವ ದರ ಪಟ್ಟಿ ಪ್ರದರ್ಶಿಸಬೇಕು. ಆರೋಗ್ಯ ವಿಮೆ ಯೋಜನೆಗಳಲ್ಲಿ ಸರ್ಕಾರಿ
ಆಸ್ಪತ್ರೆಗಳಲ್ಲಿ ಸೇವೆ ಸಿಗದಿದ್ದಾಗ ಮಾತ್ರ ಖಾಸಗಿ ಆಸ್ಪತ್ರೆ ಅಥವಾ ನರ್ಸಿಂಗ್‌ ಹೋಂಗಳಿಗೆ ಹೋಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಇದ್ದೂ ಖಾಸಗಿ ಆಸ್ಪತ್ರೆಗೆ ಹೋದರೆ ಕ್ಲೈಮ್‌ ಬರುವುದಿಲ್ಲ. ಆರೋಗ್ಯ ವಿಮೆ ಯೋಜನೆಗಳಲ್ಲಿ ಸೇವೆ ಪಡೆಯುವ ಸಂದರ್ಭಗಳಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ ಖಾಸಗಿ ಆಸ್ಪತ್ರೆಗಳ ವಿರುದ್ದ ದೂರು ಬಂದರೆ ವಿಚಾರಣೆ ಮಾಡುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ.

"ವೈದ್ಯರ ಮೇಲೆ ಗೂಂಡಾಗಿರಿ ಸಹಿಸಲ್ಲ' 

ಬೆಂಗಳೂರು: ಕರ್ತವ್ಯನಿರತ ವೈದ್ಯರ ಮೇಲಿನ ಗೂಂಡಾಗಿರಿಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ವೈದ್ಯರ ಮೇಲೆ ಹಲ್ಲೆ ನಡೆಸಿದವರು ಅಥವಾ ಗೂಂಡಾಗಿರಿ ಪ್ರದರ್ಶಿಸಿದವರು ಸಂಸದರೇ ಇರಲಿ, ಎಷ್ಟೇ ಪ್ರಭಾವಿಗಳೇ ಇರಲಿ ಅಂತಹವರ ವಿರುದಟಛಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿದ್ದಾರೆ. ಇತ್ತೀಚೆಗೆ ಕಾರವಾರ ಸಂಸದ ಅನಂತಕುಮಾರ ಹೆಗಡೆ ಅವರು ಶಿರಸಿಯಲ್ಲಿ ಕೆಲ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಲಾಗಿತ್ತು. ಇದರ ಬೆನ್ನಲ್ಲೇ ಸಚಿವರ ಈ ಹೇಳಿಕೆ ಬಂದಿದೆ. 

ಬಾಕಿ ಪಾವತಿಗೆ ಸಿಎಂ ಸೂಚನೆ
ಬೆಂಗಳೂರು: ಕೆಲವು ಖಾಸಗಿ ಆಸ್ಪತ್ರೆಗಳು ಜ.16ರಿಂದ ವಾಜಪೇಯಿ ಆರೋಗ್ಯ ಸೇವೆ, ರಾಜೀವ್‌ಗಾಂಧಿ ಆರೋಗ್ಯ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆಗಳ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಆಸ್ಪತ್ರೆಗಳ 100 ಕೋಟಿ ರೂ. ಬಾಕಿ ನೀಡಲು ಮುಂದಾಗಿದೆ. ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸುವ ಆಸ್ಪತ್ರೆಗಳ ಎಚ್ಚರಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ರಮೇಶ್‌ಕುಮಾರ್‌, "ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಖುದ್ದು ಈ ವಿಷಯ ಪ್ರಸ್ತಾಪಿಸಿ, ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ಬಾಕಿ ಪಾವತಿಗೆ ಸೂಚನೆ ನೀಡಿದ್ದಾರೆ. ಹೀಗಿರುವಾಗ, ಸೇವೆ ಸ್ಥಗಿತಗೊಳಿಸುವ ಮೊದಲು ಖಾಸಗಿ ಆಸ್ಪತ್ರೆಗಳು ಸೌಜನ್ಯಕ್ಕಾದರೂ ನಮ್ಮ ಜೊತೆ ಮಾತುಕತೆ ನಡೆಸಬೇಕಿತ್ತು. ನಾವೂ ಕೂಡ ನಮ್ಮ ಕ್ರಮಗಳನ್ನು ಕೈಗೊಳ್ಳಲು ಸಿದಟಛಿ, ಬಡ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಬದ್ದ. ಖಾಸಗಿ ಆಸ್ಪತ್ರೆಯವರು ತಮ್ಮದು ಸೇವೆಯೋ ವ್ಯವಹಾರವೋ ಸ್ಪಷ್ಟಪಡಿಸಬೇಕು' ಎಂದು ತೀಕ್ಷ್ಣವಾಗಿ ನುಡಿದರು. 


More News of your Interest

Trending videos

Back to Top