Updated at Tue,25th Apr, 2017 12:25AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬರಪೀಡಿತ ತಾಲೂಕುಗಳ ಸಂಖ್ಯೆ 160ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯೂ ಕೈ ಕೊಟ್ಟಿರುವುದರಿಂದ ಬರ ಪೀಡಿತ ತಾಲೂಕುಗಳ ಸಂಖ್ಯೆ 139 ರಿಂದ 160 ಕ್ಕೆ ಏರಲಿದೆ.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಬರ ಕುರಿತ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಿಂಗಾರು ಮಳೆ ವಿಫ‌ಲ ಹಿನ್ನೆಲೆಯಲ್ಲಿ ಇನ್ನೂ 21 ತಾಲೂಕು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಸಭೆಯ ನಂತರ ಸುದ್ದಿಗಾರರ ಜತೆ
ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮುಂಗಾರು ಜತೆ ಹಿಂಗಾರು ಮಳೆ ಕೂಡ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ
ಬರ ಪರಿಸ್ಥಿತಿ ಮತ್ತಷ್ಟು ಭೀಕರ ಸ್ವರೂಪ ಪಡೆದಿದೆ. ಬರ ಪೀಡಿತ ತಾಲೂಕುಗಳ ಸಂಖ್ಯೆ 160ಕ್ಕೆ ಹೆಚ್ಚಾಗಬಹುದು ಎಂದು ತಿಳಿಸಿದರು.

ಮುಂಗಾರು ವೈಫ‌ಲ್ಯ ಹಿನ್ನೆಲೆಯಲ್ಲಿ ರಾಜ್ಯದ 139 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ
ಹಿಂಗಾರು ಮಳೆ ಕೂಡ ಕೈ ಕೊಟ್ಟಿದೆ. ಇದರಿಂದ ಮತ್ತಷ್ಟು ತಾಲೂಕುಗಳು ಬರಕ್ಕೆ ತುತ್ತಾಗಿವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಬರ ಪೀಡಿತ ತಾಲೂಕುಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ. ಮುಂದಿನ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಬರ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಕುಡಿಯುವ ನೀರಿಗಾಗಿ ಬೋರ್‌ವೆಲ್‌ ಕೊರೆಯಿ ಸುವಂತೆ ಸೂಚಿಸಲಾಗಿದೆ. ಮೇವು ಖರೀದಿಗಾಗಿ 10 ಕೋಟಿ ರೂಪಾಯಿ ಹಣ
ಬಿಡುಗಡೆ ಮಾಡಲಾಗಿದೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ 1782 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ಬಿಡುಗಡೆ
ಮಾಡಿದೆ ಎಂಬ ಮಾಹಿತಿ ಇದೆ. ಆದರೆ ಇದುವರೆಗೆ ರಾಜ್ಯದ ಖಜಾನೆಗೆ ಆ ಹಣ ಬಂದು ತಲುಪಿಲ್ಲ. ಹಣ ಬಿಡುಗಡೆಯಾದ  ಬಳಿಕ 35 ಲಕ್ಷ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪರಿಹಾರ ಹಣ ನೇರವಾಗಿ ರೈತರ ಖಾತೆಗೆ 
ಜಮೆ ಮಾಡಲು ಪರಿಹಾರ ಎಂಬ ಸಾಫ್ rವೇರ್‌ ಸಿದಟಛಿಪಡಿಸಲಾಗಿದೆ. ಆ ಸಾಫ್ಟ್ವೇರ್‌ ನಲ್ಲಿ 10 ಲಕ್ಷ ರೈತರ ಬ್ಯಾಂಕ್‌ ಖಾತೆಗಳ 
ಸಂಖ್ಯೆ ಜೋಡಣೆ ಮಾಡಲಾಗಿದೆ. ಆಧಾರ್‌ ಮತ್ತು ಪಹಣಿಪತ್ರದೊಂದಿಗೆ ಜೋಡಣೆಯಾಗಿರುವ ಸಾಫ್ಟ್ವೇರ್‌ ಆಗಿದ್ದು ನೇರವಾಗಿ ರೈತರ ಖಾತೆಗೆ ಹಣ ಜಮೆ ಆಗುವುದರಿಂದ ದುರುಪಯೋಗ ಆಗುವುದಿಲ್ಲ ಎಂದು ಹೇಳಿದರು.

ವಾಡಿಕೆಯಂತೆ ಹಿಂಗಾರಿನಲ್ಲಿ 33 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತು. ಆಗಿದ್ದು 25 ಲಕ್ಷ ಹೆಕ್ಟೇರ್‌ನಲ್ಲಿ ಎಂದರು. 


More News of your Interest

Trending videos

Back to Top