Updated at Sun,25th Jun, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗೌರಿಶಂಕರ ಶ್ರೀ ಲಿಂಗೈಕ್ಯ: ಸಿದ್ದಗಂಗಾ ಮಠಕ್ಕೆ ಭದ್ರತೆ ನೀಡಲು ಮನವಿ 

ಬೆಂಗಳೂರು : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳುತ್ತಿದ್ದ ತುಮಕೂರಿನ ಗೌರಿಶಂಕರ ಶ್ರೀಗಳು ಬುಧವಾರ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ಪ್ರಾಯವಾಗಿತ್ತು. 

ಸಿದ್ಧಗಂಗಾ ಮಠದಲ್ಲಿದ್ದ ಶ್ರೀಗಳು ಉತ್ತರಾಧಿಕಾರಿಯಾಗಬೇಕಿತ್ತು, ಆದರೆ ವೈಯಕ್ತಿಕ ಕಾರಣಗಳಿಂದ 1988 ರಲ್ಲಿ ಮಠದಿಂದ ಹೋರಹಾಕಲಾಗಿತ್ತು. ಈ ವಿಚಾರ ಕೋರ್ಟ್‌ ಮೆಟ್ಟಿಲನ್ನೂ ಏರಿತ್ತು.ಬಳಿಕ ಗೌರಿಶಂಕರ ಶ್ರೀಗಳು ಮಠಕ್ಕೆ ಬಾರದಂತೆ ತಡೆಯನ್ನೂ ವಿಧಿಸಲಾಗಿತ್ತು. 

6 ತಿಂಗಳ ಹಿಂದೆ ಕೋರ್ಟ್‌ ಅನುಮತಿ ಪಡೆತು ಮಠಕ್ಕೆ ಮರಲು ಮುಂದಾಗಿದ್ದ ಗೌರಿಶಂಕರ ಶ್ರೀಗಳ ಭೇಟಿಗೆ ಶಿವಕುಮಾರ ಶ್ರೀಗಳು ನಿರಾಕರಿಸಿದ್ದರು. 

ಪಾರ್ಥೀವ ಶರೀರವನ್ನು ಹುಟ್ಟೂರಾದ ಗುಬ್ಬಿ ತಾಲೂಕಿನ ಸೀತಕಲ್ಲಿಗೆ ಕೊಂಡೊಯ್ದು ಬಳಿಕ ಕ್ಯಾತ್ಸಂದ್ರ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಗೊಲ್ಲ ಹಳ್ಳಿಯಲ್ಲಿರುವ ಜಂಗಮಮಠದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಭಕ್ತರು  ತಿಳಿಸಿದ್ದಾರೆ.

ಮಠಕ್ಕೆ ಭದ್ರತೆ ನೀಡಿ 
ಗೌರಿಶಂಕರ ಶ್ರೀಗಳು ಲಿಂಗೈಕ್ಯರಾಗಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮಠಕ್ಕೆ ಭದ್ರತೆ ನೀಡಲು ಕೋರಿ ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥ್‌ ಅವರು ಕ್ಯಾತ್ಸಂದ್ರ ಪೊಲೀಸ್‌ ಠಾಣೆಗೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮಠಕ್ಕೆ ಶ್ರೀಗಳ ಪಾರ್ಥೀವ ಶರೀರವನ್ನು ತರಲು ಅವಕಾಶ ನೀಡಬಾರದು ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ. 

ಶಿವಕುಮಾರ ಶ್ರೀಗಳ ಸಂತಾಪ 

ಗೌರಿಶಂಕರ ಶ್ರೀಗಳ ನಿಧನಕ್ಕೆ ಶಿವಕುಮಾರ ಶ್ರೀಗಳು ಸಂತಾಪ ಸೂಚಿಸಿ ಪತ್ರ ಬರೆದಿದ್ದಾರೆ. ಗೌರಿಶಂಕರ ಶ್ರೀಗಳನ್ನು ವಿವಿಧ ಕಾರಣಗಳಿಗಾಗಿ ಮಠದಿಂದ ವಜಾ ಮಾಡಲಾಗಿತ್ತು. ಅವರಿಗೂ ಮಠಕ್ಕೆ  ಯಾವುದೇ ಸಂಬಂಧವಿರಲಿಲ್ಲ ಹೀಗಾಗಿ ಪಾರ್ಥೀವ ಶರೀರವನ್ನು ಮಠಕ್ಕೆ ತರಬೇಡಿ ಎಂದು ಸಂತಾಪ ಸೂಚಕ ಪತ್ರದಲ್ಲಿ ಬರೆದಿರುವ ಬಗ್ಗೆ ವರದಿಯಾಗಿದೆ. 
 


More News of your Interest

Back to Top