Updated at Tue,25th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಂದು ಚಿನ್ನಮ್ಮ ಭೇಟಿಗಾಗಿ ಪರಪ್ಪನ ಅಗ್ರಹಾರಕ್ಕೆ ಸಿಎಂ ಪಳನಿ ಸ್ವಾಮಿ

 ಬೆಂಗಳೂರು : ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಡಪ್ಪಾಡಿ.ಕೆ .ಪಳನಿಸ್ವಾಮಿ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆ ಮನೆ ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 

ಮುಂದಿನ ನಿರ್ಧಾರಗಳು ಮತ್ತು ಪಕ್ಷ ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತು ಶಶಿಕಲಾ ಮತ್ತು ಸಿಎಂ ಪಳನಿಸ್ವಾಮಿ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಪಳನಿಸ್ವಾಮಿ ಅವರೊಂದಿಗೆ ಕೆಲ ಸಚಿವರು ಮತ್ತು ಶಾಸಕರು ಆಗಮಿಸುವ ಸಾಧ್ಯತೆಗಳಿವೆ . 

ಬೆಳಗ್ಗೆ 11 ಗಂಟೆಯ ವೇಳೆಗೆ ಮಾತುಕತೆಗೆ ಸಮಯ ನಿಗದಿಯಾಗಿದ್ದು, ಜೈಲಿನ ಸುತ್ತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 2ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 

ಗುರುವಾರ ಪಳನಿಸ್ವಾಮಿ ಅವರು 31 ಮಂದಿ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. 


More News of your Interest

Trending videos

Back to Top