ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ದಾವೆ

Team Udayavani, Feb 19, 2017, 3:45 AM IST

SRIranulu.jpg

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬದಲ್ಲಿ ಈಗ ಆಸ್ತಿ ಹಂಚಿಕೆಯ ಅಸಮಾಧಾನ ಭುಗಿಲೆದ್ದಿದೆ. ಜಮೀನು ಮಾಲೀಕತ್ವ ವಿಚಾರವಾಗಿ ರೆಡ್ಡಿ ಸಹೋದರರಲ್ಲಿ ಹಿರಿಯರಾದ ಜಿ.ಕರುಣಾಕರ ರೆಡ್ಡಿ ಸಂಸದ ಬಿ.ಶ್ರೀರಾಮುಲು ವಿರುದ್ಧ ನ್ಯಾಯಾಲಯದ ಮೇಟ್ಟಿಲೆರಿದ್ದಾರೆ.

ನಗರದ ಸುಷ್ಮಾ ಸ್ವರಾಜ್‌ ಕಾಲೋನಿಯಲ್ಲಿರುವ ನಿವೇಶನಗಳ ಮಾಲೀಕತ್ವದ ವಿವಾದಕ್ಕೆ  ಸಂಬಂಧಿಸಿ ಸಂಸದ ಬಿ.ಶ್ರೀರಾಮುಲು ಸೇರಿ ಮೂವರ ವಿರುದ್ಧ ಮಾಜಿ ಸಚಿವ ಕರುಣಾಕರ ರೆಡ್ಡಿ ಇತ್ತೀಚೆಗೆ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲೀಕತ್ವದ ಘೋಷಣೆಯ ದಾವೆ ಹೂಡಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯ ಸಂಸದ ಬಿ.ಶ್ರೀರಾಮುಲು ಸೇರಿ ಮೂವರಿಗೆ ಸಮನ್ಸ್‌ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.

ನಗರದ ಹದ್ದಿನ ಗುಂಡು (ಈಗಿನ ಸುಷ್ಮಾ ಸ್ವರಾಜ್‌ ಕಾಲೋನಿ) ಪ್ರದೇಶದಲ್ಲಿ ಸಂಸದ ಬಿ.ಶ್ರೀರಾಮುಲು ಮತ್ತು ಜಿ.ಕರುಣಾಕರರೆಡ್ಡಿ 1997ರಲ್ಲಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದರು. ಅದನ್ನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಶ್ರೀರಾಮುಲು ಈ ಜಮೀನನ್ನು ನಿವೇಶನಗಳಾಗಿ ಅಭಿವೃದ್ಧಿಪಡಿಸಿ ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

ಈ ಹಿಂದೆ ಕರುಣಾಕರ ರೆಡ್ಡಿ  ಈ ಜಮೀನಿನ ಜನರಲ್‌ ಪವರ್‌ ಆಫ್‌ ಅಟಾರ್ನಿಯನ್ನು ಶ್ರೀರಾಮುಲುಗೆ ಕೊಟ್ಟಿದ್ದರು ಎನ್ನಲಾಗಿದೆ.  ಹೀಗಾಗಿ ಈ ಕೃಷಿಯೇತರ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಧಿಸಿ ಈಗ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನ್ಯಾಯಾಲಯದಲ್ಲಿ ಆಸ್ತಿ ಮಾಲೀಕತ್ವದ ಘೋಷಣೆಗೆ ಕರುಣಾಕರ ರೆಡ್ಡಿ ದಾವೆ ಹೂಡಿದ್ದಾರೆ.

ಒಟ್ಟು 10 ದಾವೆ ದಾಖಲು:
ಸುಷ್ಮಾ ಸ್ವರಾಜ್‌ ಕಾಲೋನಿಯ ವಿವಿಧ ನಿವೇಶನಗಳಿಗೆ ಸಂಬಂಧಿಧಿಸಿದಂತೆ ಸಂಸದ ಬಿ.ಶ್ರೀರಾಮುಲು, ಬಳ್ಳಾರಿಯ ಕೆ.ತಿಮ್ಮರಾಜು ಮತ್ತು ಬೈರದೇವನಹಳ್ಳಿ ಗ್ರಾಮದ ಡಿ.ರಾಘವೇಂದ್ರ ಎನ್ನುವವರ ವಿರುದ್ಧ ಬಳ್ಳಾರಿ ಪ್ರಿನ್ಸಿಪಲ್‌ ಸೀನಿಯರ್‌ ಸಿವಿಲ್‌ ಜಡ್ಜ್ ಆ್ಯಂಡ್‌ ಸಿಜೆಎಂ ನ್ಯಾಯಾಲಯದಲ್ಲಿ ಕರುಣಾಕರ ರೆಡ್ಡಿ ಆಸ್ತಿ ಘೋಷಣೆಯ ದಾವೆಗಳನ್ನು ಹೂಡಿದ್ದಾರೆ. ನ್ಯಾಯಾಲಯ ಸಂಸದ ಸೇರಿದಂತೆ ಮೂವರಿಗೆ ಸಮನ್ಸ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಅಸಮಾಧಾನ
ಕರುಣಾಕರರೆಡ್ಡಿ ಕೆಲ ವರ್ಷಗಳಿಂದ ತಮ್ಮ ಸಹೋದರರಾದ ಸೋಮಶೇಖರ್‌ರೆಡ್ಡಿ ಮತ್ತು ಜನಾರ್ದನ ರೆಡ್ಡಿಯವರಿಂದ ಅಂತರ ಕಾಯ್ದುಕೊಂಡಿದ್ದರು. ಎಲ್ಲಿಯೂ ಬಹಿರಂಗವಾಗಿ ಗುರುತಿಸಿಕೊಂಡಿರಲಿಲ್ಲ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆಯಲ್ಲೂ ಕರುಣಾಕರ ರೆಡ್ಡಿ  ಭಾಗವಹಿಸಿರಲಿಲ್ಲ. ಈ ಮೂಲಕ ರೆಡ್ಡಿ ಕುಟುಂಬದ ಆಂತರಿಕ ಅಸಮಾಧಾನ ಸಾರ್ವಜನಿಕವಾಗಿ ಬಹಿರಂಗವಾಗಿತ್ತು,ರೆಡ್ಡಿ ಕುಟುಂಬದ ಅವಿಭಾಜ್ಯ ಅಂಗವಾಗಿರುವ ಸಂಸದ ಬಿ.ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ಆಸ್ತಿ ಮಾಲೀಕತ್ವದ ಘೋಷಣೆಗೆ ದಾವೆ ಹೂಡುವ ಮೂಲಕ ತಮ್ಮ ಸಹೋದರರ ಮೇಲಿನ ಅಸಮಾಧಾನವನ್ನು ಹೊರ ಹಾಕಿದಂತಾಗಿದೆ. ಈ ಬೆಳವಣಿಗೆ ಚರ್ಚೆಗೆ ಕಾರಣವಾಗಿದೆ.

ತಡೆಗೆ ಯತ್ನ
ಕರುಣಾಕರ ರೆಡ್ಡಿ ಪರ ವಕೀಲರು ಇತ್ತೀಚೆಗೆ ಬಳ್ಳಾರಿ ನ್ಯಾಯಾಲಯದಲ್ಲಿ ದಾವೆ ಹೂಡಲು ಆಗಮಿಸಿದ್ದಾಗ ಅದನ್ನು ತಡೆಯಲು ಶ್ರೀರಾಮುಲು ಬೆಂಬಲಿಗರು ಯತ್ನಿಸಿದ್ದರು ಎನ್ನಲಾಗಿದೆ.  ಆದರೆ, ಬೆಂಗಳೂರಿನ ವಕೀಲರು ಎಸ್‌ಪಿ ಆರ್‌.ಚೇತನ್‌ಗೆ ರಕ್ಷಣೆ ನೀಡುವಂತೆ ಕರೆ ಮಾಡುತ್ತಿದ್ದಂತೆ ಶ್ರೀರಾಮುಲು ಬೆಂಬಲಿಗರು ಜಾಗ ಖಾಲಿ ಮಾಡಿದರು ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.