ಹೊಸ ಪಡಿತರ ಚೀಟಿ ಪಡೆಯಲು ‘ವಿಘ್ನ’ 


Team Udayavani, Mar 20, 2017, 10:38 AM IST

Ration-Card-600.jpg

ಬೆಂಗಳೂರು: ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳುವ ಲಕ್ಷಾಂತರ ಬಿಪಿಎಲ್‌ ಕುಟುಂಬಗಳ ಆಸೆಗೆ ಒಂದಲ್ಲ ಒಂದು ‘ವಿಘ್ನ’ ಎದುರಾಗುತ್ತಲೇ ಇದೆ. ಹೊಸ ಪಡಿತರ ಚೀಟಿಗೆ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭವಾಗಿದ್ದರೂ ಪಿಡಿಒಗಳು, ಗ್ರಾಮಲೆಕ್ಕಿಗರ ‘ಅಸಹಕಾರ’ದಿಂದಾಗಿ ಅರ್ಜಿ ಸಲ್ಲಿಸಿ ತಿಂಗಳಾದರೂ ಗ್ರಾಮೀಣ ಪ್ರದೇಶದ 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಚೀಟಿ ಭಾಗ್ಯ ಇಲ್ಲದಂತಾಗಿದೆ. ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ವಿಚಾರದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕ ಸಹಾಯಕರು ಹಾಗೂ ಕಂದಾಯ ನಿರೀಕ್ಷಕರು ‘ನಾ ಕೊಡೆ’ ಎಂಬ ಹಠಕ್ಕೆ ಬಿದ್ದಿದ್ದರೆ, ಆಹಾರ ಇಲಾಖೆ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದೆ. ಹೀಗಾಗಿ ಅರ್ಜಿ ಸಲ್ಲಿಕೆಯಾದ ಏಳು ದಿನಗಳಲ್ಲಿ ಪಡಿತರ ಚೀಟಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂಬ ಆಹಾರ ಇಲಾಖೆಯ ಭರವಸೆ ಹುಸಿಯಾಗಿದೆ.

ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಯನ್ನು ಜ. 31ರಿಂದ ಆರಂಭಿಸ ಲಾಗಿತ್ತು. ಅರ್ಜಿಗಳ ಪರಿಶೀಲನೆಯನ್ನು ಮೊದಲಿಗೆ ಗ್ರಾ.ಪಂ. ಮಟ್ಟದಲ್ಲಿ ಆಯಾ ಪಿಡಿಒಗಳಿಗೆ ನೀಡಲಾಗಿತ್ತು. ಒಂದು ಅರ್ಜಿ ಪರಿಶೀಲನೆಗೆ 20 ರೂ. ಪ್ರೋತ್ಸಾಹಧನವನ್ನೂ ನೀಡಲು ಆಹಾರ ಇಲಾಖೆ ನಿರ್ಧರಿಸಿತ್ತು. ಆದರೆ, ಕಾರ್ಯ ಒತ್ತಡದ ಕಾರಣ ಹೇಳಿ ಪಿಡಿಒಗಳು ಅರ್ಜಿ ಪರಿಶೀಲನೆಯಿಂದ ಹಿಂದೆ ಸರಿದರು. ಬಳಿಕ ಈ ಹೊಣೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಹೆಗಲಿಗೆ ಬಿತ್ತು. ಅವರೂ ಇದಕ್ಕೆ  ಹಿಂದೇಟು ಹಾಕಿದ್ದಾರೆ. ಹೀಗಾಗಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ 8.64 ಲಕ್ಷ ಅರ್ಜಿಗಳಿಗೆ ಒಂದೂವರೆ ತಿಂಗಳಾದರೂ “ಮುಕ್ತಿ’ ಸಿಗುತ್ತಿಲ್ಲ. ಇದೀಗ ಈ ಸಮಸ್ಯೆ ಮುಖ್ಯಮಂತ್ರಿ ಅಂಗಳಕ್ಕೆ ತಲುಪಿದೆ.

ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತರಿ ಯೋಜನೆ, ಆಡಳಿತ ನಿರ್ವಹಣೆ, ಗ್ರಾಮಸಭೆ ಸಹಿತ ಹತ್ತಾರು ಜವಾಬ್ದಾರಿಗಳು ಇರುತ್ತವೆ. ಹೊಸ ಪಡಿತರ ಚೀಟಿಗೆ ಅರ್ಜಿ ಸ್ವೀಕರಿಸುವ ಕೆಲಸ ಮಾಡಬಹುದು. ಆದರೆ, ಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಪಿಡಿಒಗಳು ಹೇಳುತ್ತಿದ್ದರೆ, ನಮಗೂ ಸಾಕಷ್ಟು ಕೆಲಸಗಳಿವೆ. ನಮ್ಮಿಂದಲೂ ಅರ್ಜಿಗಳ ಪರಿಶೀಲನೆ ಕಷ್ಟಸಾಧ್ಯ ಎಂದು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಹೇಳುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಆಹಾರ ಇಲಾಖೆಗೆ ಸಿಬಂದಿ ಇರುವುದಿಲ್ಲ. ಹಾಗಾಗಿ ಪಿಡಿಒಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರೇ ಈ ಕೆಲಸ ಮಾಡಬೇಕು ಎಂಬುದು ಆಹಾರ ಇಲಾಖೆ ವಾದ.

8.64 ಲಕ್ಷ ಅರ್ಜಿ ಬಾಕಿ: ಹೊಸ ಪಡಿತರ ಚೀಟಿಗೆ ಮಾ. 31ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾ. 19ರ ಸಂಜೆ ವೇಳೆಗೆ ಒಟ್ಟು 8.77 ಲಕ್ಷ ಅರ್ಜಿಗಳು ಸ್ವೀಕಾರವಾಗಿವೆ. ಅದರಲ್ಲಿ ಬರೀ 13 ಸಾವಿರ ಅರ್ಜಿಗಳು ವಿಲೇವಾರಿ ಆಗಿದ್ದು, 8.64 ಲಕ್ಷ ಅರ್ಜಿಗಳು ಬಾಕಿ ಇವೆ. ಈ ಪೈಕಿ ಬೆಳಗಾವಿಯಲ್ಲಿ ಅತಿ ಹೆಚ್ಚು 1.12 ಲಕ್ಷ, ಬಳ್ಳಾರಿಯಲ್ಲಿ 58 ಸಾವಿರ, ಮೈಸೂರಿನಲ್ಲಿ 55 ಸಾವಿರ, ಕಲಬುರಗಿಯಲ್ಲಿ 54 ಸಾವಿರ, ಬೆಂಗಳೂರಿನಲ್ಲಿ 43,000 ಅರ್ಜಿಗಳು ಬಾಕಿ ಇವೆ. ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪಡಿತರ ಚೀಟಿ ತಲುಪಿಸಲಾಗುವುದು ಎಂದು ಸರಕಾರ ಭರವಸೆ ನೀಡಿತ್ತು. ಆದರೆ, ಒಟ್ಟು ಸಲ್ಲಿಕೆಯಾದ ಅರ್ಜಿಗಳಲ್ಲಿ ಏಳು ದಿನಗಳಿಗೂ ಮೀರಿ 6.87 ಲಕ್ಷ ಅರ್ಜಿಗಳು ಬಾಕಿ ಇವೆ.

ಇಂದು ಸಿಎಂ ಸಭೆ
ಆನ್‌ಲೈನ್‌ ಪಡಿತರ ಚೀಟಿಗಳ ಪರಿಶೀಲನೆ ವಿಚಾರದಲ್ಲಿ ಪಿಡಿಒಗಳು, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ‘ಅಸಹಕಾರ’ ಧೋರಣೆ ತೋರಿದ್ದರಿಂದ ಅರ್ಜಿಗಳ ವಿಲೇವಾರಿಗೆ ಮುಂದೇನು ಮಾಡಬೇಕು ಎಂದು ಚರ್ಚಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾ. 20ರಂದು ಸಂಜೆ ಸಭೆ ಕರೆದಿದ್ದಾರೆ. ಅರ್ಜಿ ಪರಿಶೀಲನೆ ಯಾರ ಹೆಗಲಿಗೆ ಬೀಳುತ್ತೋ ಬಿಪಿಎಲ್‌ ಕುಟುಂಬಗಳಿಗೆ ಎಷ್ಟು ಬೇಗ ಹೊಸ ಪಡಿತರ ಚೀಟಿ ಭಾಗ್ಯ ಸಿಗುತ್ತೋ ಸಭೆ ಬಳಿಕವೇ ಸ್ಪಷ್ಟವಾಗಲಿದೆ.

‘ಪಿಡಿಒಗಳಿಗೆ ಈಗಾಗಲೇ ಸಾಕಷ್ಟು ಕೆಲಸ ಇದೆ. ಅಲ್ಲದೇ ಚುನಾವಣೆಗಳು ಹತ್ತಿರ ಇರುವುದರಿಂದ ಹಳ್ಳಿಗಳಲ್ಲಿ ಬಿಪಿಎಲ್‌ ಕಾರ್ಡ್‌ ಕೊಡಿಸಲು ರಾಜಕಾರಣಿಗಳು ಪೈಪೋಟಿಗೆ ಬಿದ್ದಿರುತ್ತಾರೆ. ಅರ್ಹತೆ ಇಲ್ಲದಿದ್ದರೂ ತಮ್ಮವರಿಗೆ ಬಿಪಿಎಲ್‌ ಕಾರ್ಡ್‌ ಕೊಡಿ ಎಂದು ಕೆಲವರು ಹೇಳಿದರೆ, ಇಂತಹವರಿಗೆ ಕಾರ್ಡ್‌ ಯಾಕೆ ಕೊಟ್ಟಿರಿ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಾರೆ. ಇದರ ಪರಿಣಾಮವನ್ನು ಪಿಡಿಒಗಳು ಗ್ರಾಮಸಭೆಗಳಲ್ಲಿ ಅನುಭವಿಸಬೇಕಾಗುತ್ತದೆ. ಅದಕ್ಕೆ ಯಾವ ಕಾರಣಕ್ಕೂ ನಮ್ಮಿಂದ ಅರ್ಜಿ ಪರಿಶೀಲನೆ ಸಾಧ್ಯವಿಲ್ಲ.’
– ಎಸ್‌. ರಮೇಶ್‌, ರಾಜ್ಯ ಪಿಡಿಒಗಳ ಸಂಘದ ಅಧ್ಯಕ್ಷ

‘ಗ್ರಾ.ಪಂ.ಗಳ ಆಡಳಿತ ಬಲವರ್ಧನೆ ಆಗಬೇಕು. ಹಳ್ಳಿ ಜನರಿಗೆ ಎಲ್ಲ ಸೌಲಭ್ಯಗಳೂ ಗ್ರಾ.ಪಂ. ಮೂಲಕವೇ ಸಿಗಬೇಕು. ಅದರಂತೆ, ಪಡಿತರ ಚೀಟಿ ಪರಿಶೀಲನೆ ಗ್ರಾ.ಪಂ. ಮಟ್ಟದಲ್ಲಿ ನಡೆಯಬೇಕು. ಆದರೆ, ಈ ಕೆಲಸ ಈಗಾಗಲೇ ಕೆಲಸದ ಒತ್ತಡ ಇರುವ ಪಿಡಿಒಗಳಿಂದ ಸಾಧ್ಯವಿಲ್ಲ. ಸರಕಾರ ಹೆಚ್ಚುವರಿ ಸಿಬಂದಿ ಒದಗಿಸಿ ಈ ಕೆಲಸ ಮಾಡಿಸಬೇಕು.’
– ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ಗ್ರಾ.ಪಂ. ನೌಕರರ ಒಕ್ಕೂಟ

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.