ಐಟಿ ಕಂಪನಿಗಳಲ್ಲೀಗ ಉದ್ಯೋಗ ನಷ್ಟದ ಭೀತಿ

Team Udayavani, Mar 23, 2017, 3:45 AM IST

IT-23.jpg

ಬೆಂಗಳೂರು/ಚೆನ್ನೈ: ಟೆನ್ಶನ್ .. ಟೆನ್ಶನ್ … ಕ್ಷಣ ಕ್ಷಣಕ್ಕೂ ಕೆಲಸ ಕಳ್ಕೊಬೇಕಾಗುತ್ತಾ ಅನ್ನೋ ತೊಳಲಾಟ! ಹೌದು, ಬೆಂಗಳೂರು ಸೇರಿ ದೇಶದ ಪ್ರಮುಖ ಕೇಂದ್ರಗಳಲ್ಲಿರುವ ದಿಗ್ಗಜ ಐಟಿ ಕಂಪನಿ ಉದ್ಯೋಗಿಗಳಿಗೆ ಈಗ ಯಾವುದೇ ಕ್ಷಣದಲ್ಲಿ  ಕೆಲಸ ಕಳೆದುಕೊಳ್ಳಬೇಕಾಗಿ ಬರುತ್ತದೋ ಎನ್ನುವ ಭೀತಿ ಶುರುವಾಗಿದೆ. ಈಗಾಗಲೇ ಅನೇಕ ಕಂಪನಿಗಳು ಕರ್ತವ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸದ ನೆಪದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದರೆ, ಇನ್ನು ಕೆಲ ಕಂಪನಿಗಳು ಈ ಸಿದ್ಧತೆಯಲ್ಲಿವೆ.

ಇದೀಗ ಅಮೆರಿಕದ ಕಾಂಗ್ನಿಜೆಂಟ್‌ ಕಂಪನಿ ಚೆನ್ನೈ ಶಾಖೆಯಲ್ಲಿರುವ ಅಗತ್ಯಕ್ಕಿಂತ ಹೆಚ್ಚಿಗೆ ಇರುವ ಮತ್ತು ನಿರೀಕ್ಷೆಯಂತೆ ಕೆಲಸ ಮಾಡದ 6,000ದಿಂದ 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಲೆಕ್ಕಾಚಾರದಲ್ಲಿದೆ. ಉದ್ಯೋಗಿಗಳ ಕಾರ್ಯನಿರ್ವಹಣೆ, ಸೇವಾ ಸಾಮರ್ಥ್ಯಗಳನ್ನು ಒರೆಗೆ ಹಚ್ಚುವ ವಾರ್ಷಿಕ ಮೌಲ್ಯಮಾಪನ (ಆ್ಯನ್ಯುವಲ್‌ ಅಪ್ರೈಸಲ್‌) ಸಂದರ್ಭದಲ್ಲಿಯೇ ಕಂಪನಿಗಳು ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಹೊರಟಿವೆ. ಇನ್ಫೋಸಿಸ್‌, ವಿಪ್ರೋ ಮತ್ತು ಟಿಸಿಎಸ್‌ ಕಂಪನಿಗಳೂ ಇದರಿಂದ ಹೊರತಾಗಿಲ್ಲ.  ಇದು ಹೀಗಾದರೆ ಅಮೆರಿಕದಲ್ಲಿ ಅಲ್ಲಿನವರಿಗೆ ಕೆಲಸ ನೀಡಬೇಕೆಂಬ ಒತ್ತಾಯ, ಎಚ್‌-1ಬಿ ವೀಸಾ ಮೇಲೆ ಆ ರಾಷ್ಟ್ರದ ಸಂಸತ್‌ನಲ್ಲಿ ಆರು ವಿಧೇಯಕಗಳ ಮಂಡನೆ ವಿಚಾರಗಳೂ ಭಾರತೀಯರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗವೆಂದರೆ ಕೊಂಚ ಯೋಚನೆ ಮಾಡುವಂತಾಗಿದೆ.

ಯಾಂತ್ರೀಕೃತ, ಡಿಜಿಟಲೀಕರಣವೂ ಕಾರಣ
ಅಷ್ಟಕ್ಕೂ ಉದ್ಯೋಗಿಗಳ ಪ್ರಮಾಣ ಕಡಿಮೆ ಮಾಡಲು ಇನ್ನೂ ಕೆಲ ಕಾರಣಗಳಿವೆ. ಐಟಿ ಸೇವೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಯಾಂತ್ರೀಕೃತ (ಸ್ವಯಂಚಾಲಿತ) ವ್ಯವಸ್ಥೆಗಳ ಕಡೆ ಕಂಪನಿಗಳು ಹೆಚ್ಚಿನ ಒಲವು ಹೊಂದುತ್ತಿರುವುದೂ ಇದಕ್ಕೊಂದು ಕಾರಣವಾಗಿದೆ.

ಇವೆಲ್ಲದರ ಜತೆಗೆ ಬಹುತೇಕ ಐಟಿ ಕಂಪನಿಗಳ ಆದಾಯದ ಶೇ.20ರಷ್ಟು ಆದಾಯ ಯಾಂತ್ರೀಕೃತ ಮತ್ತು ಡಿಜಿಟಲ್‌ ಸೇವೆಗಳನ್ನೇ ಅವಲಂಬಿಸಿದೆ. ಹೀಗಾಗಿ ಕಂಪನಿಗಳು ಇದರತ್ತ ಹೆಚ್ಚಿನ ಒಲವು ಹೊಂದಿವೆ ಎಂದೇ ಹೇಳಲಾಗುತ್ತಿದೆ. ಇವೆಲ್ಲದರ ಜತೆಗೆ ನೋಟುಗಳ ಅಪನಗದೀಕಣ ಅನೇಕ ಸಣ್ಣ-ಪುಟ್ಟ ಕಂಪನಿಗಳ ಆದಾಯದ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಉದ್ಯೋಗಕ್ಕೆ ಕುತ್ತು ಬಂದಿದೆ ಎನ್ನುವುದೂ ಅಷ್ಟೇ ಸತ್ಯ.

ಎಂಜಿನಿಯರಿಂಗ್‌ ಪದವೀಧರರಿಗೆ ಕತ್ತರಿ
ವರದಿಯ ಪ್ರಕಾರ 2017ರಲ್ಲಿ ಎಂಜಿನಿಯರಿಂಗ್‌ ಪದವೀಧರ ಉದ್ಯೋಗಿಗಳ ಜತೆಗಿನ ಒಪ್ಪಂದ ಪ್ರಕ್ರಿಯೆಯಲ್ಲಿ ಇಳಿಮುಖ ಕಂಡುಬಂದಿದ್ದು, ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳು ಶೇ.40ರಷ್ಟು ಎಂಜಿನಿಯರಿಂಗ್‌ ಪದವೀಧರ ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ.

“ಯಾಂತ್ರೀಕೃತ ಮತ್ತು ಡಿಜಿಟಲ್‌ ಸೇವೆ ಸೇರಿ ಒಟ್ಟಾರೆ ತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ರಾಂತಿಯಿಂದಾಗಿ 2025ರ ವೇಳೆಗೆ ದೇಶದಲ್ಲಿ 20 ಕೋಟಿ ಮಧ್ಯಮ ವರ್ಗದ ಯುವಕರು ಉದ್ಯೋಗವಿಲ್ಲದೇ ಅಥವಾ ಉದ್ಯೋಗ ಕಳೆದುಕೊಂಡು ಪರದಾಡಬೇಕಾದ ಸ್ಥಿತಿ ಬಂದೊದಗಬಹುದು’ ಎಂದು ಕಳೆದ ವರ್ಷ ಕರ್ನಾಟಕ ಐಟಿ ತಜ್ಞ ಮೋಹನದಾಸ್‌ ಪೈ ಹೇಳಿರುವ ಹೇಳಿಕೆ ಈಗ ಇಲ್ಲಿ ಸಾಕಷ್ಟು ಪ್ರಸ್ತುತವೆನಿಸಿದೆ.

ಯಾವೆಲ್ಲ ಕಂಪನಿಗಳು?
* ಸಿಸ್ಕೊ: 2017ನೇ ಸಾಲಿನಲ್ಲಿ ಶೇ.7ರಷ್ಟು ಉದ್ಯೋಗಿಗಳ ವಜಾ ಪ್ರಕಟಣೆ
* ಐಬಿಎಂ: 5000 ಉದ್ಯೋಗಿಗಳ ಕಡಿತಕ್ಕೆ ಮುಂದು
* ಮೈಕ್ರೋಸಾಫ್ಟ್ : 2800 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿ, ಸ್ಮಾರ್ಟ್‌ಫೋನ್‌ ಬಿಸಿನೆಸ್‌ ಆರಂಭಿಸಲು ಮುಂದು
* ಸ್ನ್ಯಾಪ್‌ಡೀಲ್‌, ಕ್ರಾಫ್ಟ್ಸ್ವಿಲ್ಲಾ, ಸ್ಟೇಝಿಲ್ಲಾ, ಯೆಪ್‌ಮೀ, ಟೊಲೆಕೊÕà ಸೇರಿ ಇನ್ನೂ ಕೆಲ ಕಂಪನಿಗಳಲ್ಲಿ ವೇತನ ಕಡಿತಗೊಳಿಸಿದೆ. ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಪಿಂಕ್‌ ಸ್ಲಿಪ್‌ ನೀಡಿವೆ.
* ಸ್ನ್ಯಾಪ್‌ಡೀಲ್‌ 600, ಯೆಪ್‌ಮೀ 30 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.